ಬಿಬಿಎಂಪಿಯಿಂದ ಅ.17ರಂದು ನಾಯಿಗಳಿಗಾಗಿ ಉತ್ಸವ

Date:

Advertisements

ಪ್ರಾಣಿಗಳೊಂದಿಗೆ ಸಾಮರಸ್ಯದ ಸಹಬಾಳ್ವೆಯು ನಮ್ಮ ಸುತ್ತಲಿನ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಪ್ರಾಣಿಗಳ ಜನನ ನಿಯಂತ್ರಣ ಮತ್ತು ವ್ಯಾಕ್ಸಿನೇಷನ್‌ಗಳ ಹೊರತಾಗಿ, ಪ್ರಾಣಿಗಳ ನಡವಳಿಕೆಯನ್ನು ಅರ್ಥಮಾಡಿಕೊಂಡು, ಪ್ರಕೃತಿ ಅವುಗಳನ್ನು ರಚಿಸಿದ ರೀತಿಯಲ್ಲಿ ಅವುಗಳನ್ನು ಒಪ್ಪಿಕೊಳ್ಳುವುದು ಸಹ ಮುಖ್ಯವಾದ ವಿಷಯ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಅಕ್ಟೋಬರ್ 17ರಂದು ನಾಯಿಗಳಿಗಾಗಿ ಉತ್ಸವ ಆಚರಿಸಲಾಗುತ್ತಿದೆ ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

“ಸಹವರ್ತಿನ್ ಅನಿಮಲ್ ವೆಲ್‌ಫೇರ್ ಟ್ರಸ್ಟ್ ಮತ್ತು ಇತರ ಆಸಕ್ತ ಸಂಸ್ಥೆಗಳೊಂದಿಗೆ ಪಾಲಿಕೆಯ ಪಶುಸಂಗೋಪನೆ ವಿಭಾಗವು ಮುಂಬರುವ ದಿನಗಳಲ್ಲಿ COEXISTENCECAMPUONLOCALITY & #BITEFREELOCALITY ಎಂಬ ಯೋಜನೆಯ ಅಡಿಯಲ್ಲಿ, ಪ್ರಾಣಿಗಳಿಗೆ ಮಾನವೀಯ ವಾತಾವರಣವನ್ನು ನಿರ್ಮಿಸುವಲ್ಲಿ ಹಾಗೂ ಮಾನವ-ಪ್ರಾಣಿ ಸಂಘರ್ಷಗಳನ್ನು ಕಡಿಮೆ ಮಾಡಲು ಅನೇಕ ಉಪಕ್ರಮಗಳನ್ನು ಹಮ್ಮಿಕೊಳ್ಳಲಿದೆ” ಎಂದು ತಿಳಿಸಿದೆ.

ನಾಯಿಗಳಿಗಾಗಿ ಉತ್ಸವ

Advertisements

“ಸಮಾಜದಲ್ಲಿ ಕಡಿತ ಹಾಗೂ ದಾಳಿಯ ಭಯದಿಂದ ನಾಯಿಗಳ ಮೇಲೆ ಕೇವಲ ನಕಾರಾತ್ಮಕ ಭಾವನೆಯು ಹೆಚ್ಚಾಗುತ್ತಿದೆ. ಆದರೆ ನಾಯಿಗಳು ಬಹಳ ನಿಷ್ಠಾವಂತ, ವಿಧೇಯ, ರಕ್ಷಣಾತ್ಮಕ ಹಾಗೂ ಭಾವನಾತ್ಮಕ ಬೆಂಬಲ ನೀಡುವಂತ ಪ್ರಾಣಿಯೂ ಆಗಿದೆ. ಪ್ರಾಣಿಗಳೊಂದಿಗಿನ ಸಂಘರ್ಶ ನಿರ್ವಹಿಸಲು, ರೇಬೀಸ್ ಕಾಯಿಲೆಯನ್ನು ತಡೆಗಟ್ಟುವ ಕ್ರಮಗಳನ್ನು ಪ್ರತಿಪಾದಿಸುತ್ತಿದ್ದರೂ, ಸಮಾಜಕ್ಕೆ ನಾಯಿಗಳ ಸಕಾರಾತ್ಮಕ ಕೊಡುಗೆಗಳನ್ನು ಆಚರಿಸಲು ಮತ್ತು ಎತ್ತಿ ತೋರಿಸಲು ಬಿಬಿಎಂಪಿ ಉತ್ಸುಕವಾಗಿದೆ” ಎಂದು ಹೇಳಿದೆ.

“17ನೇ ಅಕ್ಟೋಬರ್ 2024 ರಂದು ನಾಯಿಗಳೊಂದಿಗಿನ ಪ್ರೀತಿ ಮತ್ತು ಬಾಂಧವ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾ,
ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳನ್ನು ಹಾಗು ಪ್ರಾಣಿಗಳ ಪಾಲಕರನ್ನು ಒಟ್ಟುಗೂಡಿಸುವ ಮೂಲಕ ಪಾಲಿಕೆಯು ನಾಯಿಗಳಿಗೆಂದು ಉತ್ಸವ (Kukur Tihar)ವನ್ನು ಆಚರಿಸಲು ನಿರ್ಧರಿಸಿದೆ” ಎಂದಿದೆ.

ಪೌರಕಾರ್ಮಿಕರ ಸಹಯೋಗ

“ಇದೇ ಉತ್ಸವದ ದಿನದಂದು, ಬಿಬಿಎಂಪಿಯು ಆಯಾ ವಾರ್ಡಿನ ರೆಸ್ಟೋರೆಂಟ್‌ಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ, ಸಮುದಾಯದ ನಾಯಿಗಳಿಗೆ ಆಹಾರ ನೀಡುವಲ್ಲಿ ಸಹಾಯ ಮಾಡಲು 4 ವಾರ್ಡ್‌ಗಳ ಪೌರಕಾರ್ಮಿಕರ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಆಹಾರ ನೀಡುವ ಕಾರ್ಯವನ್ನು ಪ್ರಾರಂಭಿಸಲಿದೆ. ಈ ಯೋಜನೆಯು ಮುಂದುವರೆದಂತೆ, ನಾವು ಪ್ರತಿ ವಾರ್ಡಿನಲ್ಲಿಯೂ ಆರೈಕೆದಾರರೊಂದಿಗೆ ರೆಸ್ಟೋರೆಂಟ್‌ಗಳನ್ನು ಸಂಪರ್ಕಿಸುವ ಮೂಲಕ, ಉಳಿದ ಆಹಾರವನ್ನು ಸದುಪಯೋಗಿಸುವ ನಿರ್ಧಾರ ಪಾಲಿಕೆಯು ಮಾಡಿದೆ. ಈ ರೀತಿಯಲ್ಲಿ ನಾಯಿಗಳಿಗೆ ನಿರಂತರವಾಗಿ ಪ್ರತಿದಿನ ಒಂದು ಬಾರಿ ಆಹಾರವನ್ನು ನೀಡಲಾಗುತ್ತದೆ” ಎಂದು ತಿಳಿಸಿದೆ.

ಪ್ರಾಣಿ ಪಾಲಕರ ನೋಂದಣಿ

“ನಿಮ್ಮ ವಾರ್ಡ್‌ನಿಂದ ಸ್ವಯಂಸೇವಕರಾಗಿ ಮುಂಬರುವ ಎಲ್ಲಾ ಉಪಕ್ರಮಗಳಲ್ಲಿ ಬಾಗಿಯಾಗಲು ನೀವು ಉತ್ಸುಕರಾಗಿದ್ದರೆ, ದಯವಿಟ್ಟು ಕೆಳಗಿನ ಕ್ಯೂ-ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ನಮೂನೆಯನ್ನು 15ನೇ ಅಕ್ಟೋಬರ್ 2024ರ ಒಳಗೆ ಭರ್ತಿ ಮಾಡಿ. ಯಾವುದೇ ಸಂದೇಹವಿದ್ದಲ್ಲಿ, ಮಾಹಿತಿಗಾಗಿ 1533 ಅನ್ನು ಸಂಪರ್ಕಿಸಿ” ಎಂದು ಬಿಬಿಎಂಪಿ ಹೇಳಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

ಬೆಂಗಳೂರು ಮೆಟ್ರೋ: ನಾಳೆ ಹಳದಿ ಮಾರ್ಗದಲ್ಲಿ ಬೆಳಿಗ್ಗೆ 5ಕ್ಕೆ ಸಂಚಾರ ಆರಂಭ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಹಳದಿ ಮಾರ್ಗದಲ್ಲಿ ಸೋಮವಾರ...

Download Eedina App Android / iOS

X