- ರಾಜ್ಯಾದ್ಯಂತ ಬಿರುಸುಗೊಂಡ ಮತದಾನ ಪ್ರಕ್ರಿಯೆ
- ಸರತಿಯಲ್ಲಿ ನಿಂತು ಮತ ಚಲಾಯಿಸಿ ರಾಜಕೀಯ ಗಣ್ಯರು
ರಾಜ್ಯ ವಿಧಾನಸಭೆ ಚುನಾವಣೆ 2023ರ ಮತದಾನ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ವಯೋವೃದ್ದರಾದಿಯಾಗಿ ಮತದಾನದ ಹಕ್ಕುಹೊಂದಿರುವವರು ಉತ್ಸಾಹದಿಂದಲೇ ಮತಗಟ್ಟೆಗೆ ತಲುಪಿ ಮತ ಚಲಾವಣೆ ಮಾಡುತ್ತಿದ್ದಾರೆ.
ಜನಸಾಮಾನ್ಯರಂತೆ ರಾಜಕೀಯ ಗಣ್ಯರೂ ಸರತಿಯಲ್ಲಿ ನಿಂತು ವೋಟ್ ಚಲಾಯಿಸಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಇದರಂತೆ ಮಾಗಡಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಮತ ಚಲಾಯಿಸಿದೆ. ಚನ್ನಪಟ್ಟದ ಅಭ್ಯರ್ಥಿ ಕುಮಾರಸ್ವಾಮಿ, ರಾಮನಗರ ಅಭ್ಯರ್ಥಿ ನಿಖಿಲ್ ಸೇರಿದಂತೆ ಇಡೀ ಕುಟುಂಬ ಮತಗಟ್ಟೆಗೆ ಬಂದು ಮಾಗಡಿ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.
ಖುದ್ದು ಇವರೇ ಅಭ್ಯರ್ಥಿಗಳಾಗಿದ್ದರೂ ತಮಗೇ ಮತ ಚಲಾಯಿಸಿಕೊಳ್ಳಲಾರದೆ ಬೇರೊಬ್ಬರಿಗೆ ಮತ ಹಾಕುವಂತಾಗಿದ್ದಕ್ಕೆ ಇದ್ದ ಕಾರಣ ಅವರು ನೆಲೆಸಿರುವ ಕೇತಗಾನಹಳ್ಳಿ ಮನೆ. ಈ ಮನೆ ಇರುವುದು ಮಾಗಡಿ ಕ್ಷೇತ್ರದ ವ್ಯಾಪ್ತಿಯಲ್ಲಾಗಿರುವ ಕಾರಣ ಇವರ ವೋಟು ಅಲ್ಲಿನ ಅಭ್ಯರ್ಥಿಗೆ ದೊರೆತಿದೆ.
ಈ ಸುದ್ದಿ ಓದಿದ್ದೀರಾ?:ಚುನಾವಣಾ ಅಕ್ರಮ | ₹147 ಕೋಟಿ ನಗದು, ₹375 ಕೋಟಿ ಮೌಲ್ಯದ ವಸ್ತುಗಳ ವಶ
ಇವರಂತೆ ಮೈಸೂರಿನ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ ಚಲಾವಣೆ ಮಾಡಿದರು. ಇವರನ್ನು ಹೊರತುಪಡಿಸಿದಂತೆ ಇನ್ನಿತರ ಹಲವು ಗಣ್ಯರು ಮತ ಚಲಾವಣೆ ಮಾಡಿದರು.
ವರುಣಾದಲ್ಲಿ ಮತ ಚಲಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಕುಟುಂಬದೊಂದಿಗೆ ಮತ ಚಲಾಯಿಸಿದ ಸಚಿವೆ ಶಶಿಕಲಾ ಜೊಲ್ಲೆ
ಕುಟುಂಬದೊಂದಿಗೆ ಮತ ಚಲಾಯಿಸಿದ ಸಚಿವ ಮುರುಗೇಶ್ ನಿರಾಣಿ
ಕುಟುಂಬದೊಂದಿಗೆ ಮತ ಚಲಾಯಿಸಿದ ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್
ಬೆಂಗಳೂರಿನ ಜಯನಗರದಲ್ಲಿ ಮತ ಚಲಾಯಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಕುಟುಂಬದೊಂದಿಗೆ ಮತ ಚಲಾಯಿಸಿದ ಬೆಂಗಳೂರು ಗೋವಿಂದರಾಜನಗರ, ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರಿಯಕೃಷ್ಣ, ಮಾಜಿ ಸಚಿವ ಕೃಷ್ಣಪ್ಪ
ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಮತ ಚಲಾಯಿಸಿದರು.
2023ರ ವಿಧಾನಸಭೆ ಚುನಾವಣಾ ರಾಯಭಾರಿ ಜಾವಗಲ್ ಶ್ರೀನಾಥ್ ಮೈಸೂರಿನಲ್ಲಿ ಮತ ಚಲಾಯಿಸಿದರು.