ಈಜಲು ಹೋಗಿ, ಈಜು ಬಾರದೆ ಎಂ ಟೆಕ್ ವಿದ್ಯಾರ್ಥಿ ಹರಿಯುವ ನೀರಲ್ಲಿ ಸಿಲುಕಿ ಮೃತ ಪಟ್ಟ ಘಟನೆ ವರದಿಯಾಗಿದೆ.
ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಹಂದ್ರಾಳು ಬಳಿ ಇರುವ ಜಯಮಂಗಲಿ ನದಿಯ ಚೆಕ್ ಡ್ಯಾಮ್ ಬಳಿ ಹರಿಯುತ್ತಿರುವ ನೀರಲ್ಲಿ ಎಂ ಟೆಕ್ ವಿದ್ಯಾರ್ಥಿ ಹೇಮಂತ್ (21 ವರ್ಷ) ಯುವಕ ಈಜಾಡಲು ಹೋಗಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿರುವ ಚೆಕ್ ಡ್ಯಾಂ ಬಳಿ ಮೃತ ದೇಹ ಸಿಲುಕಿಕೊಂಡಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸ್ ತಂಡ ಮೃತ ದೇಹವನ್ನು ಹೊರತೆಗೆಯಲು ಸಂಜೆ ವರೆಗೂ ಸಾಹಸ ಮಾಡಿದ್ದು ಮೃತ ದೇಹವು ಆಳವಾದ ಗುಂಡಿಯಲ್ಲಿ ಸಿಲುಕಿದ್ದು, ಸ್ಥಳಕ್ಕೆ ಸಿಪಿಐ ಹನುಮಂತರಾಯಪ್ಪ ಪೇದೆಗಳಾದ ಮಂಜುನಾಥ್, ನರಸಿಂಹಮುರ್ತಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.
