ಸ್ವಾತಂತ್ರ್ಯ ಬಂದು 7 ದಶಕ ಕಳೆದರು ಮಧುಗಿರಿ ತಾಲ್ಲೂಕಿನ ಗೌರೆಡ್ಡಿ ಪಾಳ್ಯದ ರೈತರಿಗೆ ಸೂಕ್ತ ರಸ್ತೆ ಇಲ್ಲದೆ ಜಯಮಂಗಲಿ ನದಿಯಲ್ಲೇ ಜೀವವನ್ನು ಕೈಲಿಡಿದು ಸಂಚಾರ ಮಾಡುತಿದ್ದಾರೆ.
ಕೊಡಿಗೇನಹಳ್ಳಿ ಹೊರವಲಯದಲ್ಲಿರುವ ಗೌರೆಡ್ಡಿ ಪಾಳ್ಯದಲ್ಲಿ ಬಹುತೇಕ ರೈತರು ಚದುರಿದ ಮನೆಗಳಲ್ಲಿ ತೋಟಗಳಲ್ಲಿ ವಾಸವಿದ್ದು ಇಲ್ಲಿನ ರೈತರಿಗೆ ರಸ್ತೆ ಇಲ್ಲದೆ ನಿತ್ಯ ಮಾರಕಟ್ಟೆ, ಡೇರಿ ಶಾಲಾ ಕಾಲೇಜುಗಳಿಗೆ ನದಿಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಬಗ್ಗೆ ಇತ್ತಿಚೀಗೆ ಕಡಗತ್ತೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಇಲ್ಲಿನ ರೈತರು ರಸ್ತೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮಳೆ ಸುರಿಯುತ್ತಿರುವ ಪರಿಣಾಮ ಜಯಮಂಗಲಿ ನದಿ ಹರಿಯುತಿದ್ದು ಇಲ್ಲಿನ ಸಂಚಾರ ಅಷ್ಟು ಸುರಕ್ಷತವಾಗಿಲ್ಲ. ಸಹಕಾರ ಸಚಿವ ಕೆ.ಎನ್ ರಾಜಣ್ಣನವರ ಸೂಚನೆ ಮೇರೆಗೆ ರಸ್ತೆ ಕಲ್ಪಿಸಲು ಸ್ಥಳ ಮಹಜರು ಮಾಡಿದ್ದು ಸಾಧ್ಯವಾದಷ್ಟು ಬೇಗಾ ರಸ್ತೆ ವ್ಯವಸ್ಥೆ ಆಗಲಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಸ್ವಾತಂತ್ರ್ಯ ಬಂದಾಗಿನಿಂದಲೂ ರಸ್ತೆ ಕಾಣದ ಜಾಗದಲ್ಲಿ ಸಹಕಾರಿ ಸಚಿವರು ರಸ್ತೆ ಕಲ್ಪಿಸುವ ಭರವಸೆ ನೀಡಿದ್ದು ನಮ್ಮ ನೋವನ್ನು ಸಚಿವರು ನಿವಾರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಜೇಶ್ವರಿ, ಶಶಿಕುಮಾರ್, ನರೇಶ್ ಕುಮಾರ್ ಹೇಳಿದ್ದಾರೆ
