ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

Date:

Advertisements
  • 2020ರಲ್ಲಿ ಭಾರತದಲ್ಲಿ ಗರ್ಭಾವಸ್ಥೆ ಮತ್ತಿತ್ತರ ಕಾರಣದಿಂದ 7,88,000 ಸಾವು
  • ತಾಯಂದಿರ ಮತ್ತು ನವಜಾತ ಶಿಶುಗಳ ಬಗ್ಗೆ ಕಾಳಜಿ ಇಲ್ಲದಿರುವುದು ಸಾವಿಗೆ ಕಾರಣ

ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿ ಆಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯಾಗಿದೆ. ಆದರೂ, ಗರ್ಭಾವಸ್ಥೆ ಸಮಯದಲ್ಲೇ ತಾಯಿ, ಶಿಶುಗಳ ನಿಧನ ಪ್ರಕರಣಗಳಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೊಸ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, “ಗರ್ಭಾವಸ್ಥೆ, ಪ್ರಸವ ಅಥವಾ ಮಗುವಿನ ಜನಿಸಿದ ಒಂದು ವಾರದೊಳಗೆ ತಾಯಂದಿರು ಮತ್ತು ಮಕ್ಕಳು ಸಾವನ್ನಪ್ಪಿರುವ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನ ಪಡೆದಿದೆ. ಒಟ್ಟು ಸಾವುಗಳಲ್ಲಿ ಶೇ.60ರಷ್ಟು ಸಾವುಗಳು 10 ದೇಶಗಳಲ್ಲಿಯೇ ಸಂಭವಿಸುತ್ತಿವೆ. ನೈಜೀರಿಯಾ, ಪಾಕಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಇಥಿಯೋಪಿಯಾ, ಬಾಂಗ್ಲಾದೇಶ ಮತ್ತು ಚೀನಾ ದೇಶಗಳು ಭಾರತದ ನಂತರದ ಸ್ಥಾನದಲ್ಲಿವೆ.

ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಏಳು ನಿಮಿಷಕ್ಕೊಬ್ಬರು ಮೃತಪಡುತ್ತಿದ್ದಾರೆ. ವರ್ಷಕ್ಕೆ 4.5 ದಶಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.  

Advertisements

2020-21 ಸಾಲಿನ ವರದಿಯ ಪ್ರಕಾರ ಗರ್ಭಾವಸ್ಥೆಯಲ್ಲಿ ಮೃತಪಟ್ಟ ತಾಯಂದಿರ ಸಂಖ್ಯೆ 0.29 ಲಕ್ಷ ಮತ್ತು ಹುಟ್ಟಬೇಕಿದ್ದ ಶಿಶುಗಳು ಮೃತಪಟ್ಟಿದ್ದು 1.9 ಲಕ್ಷ, ನವಜಾತ ಶಿಶುಗಳು ಮೃತಪಟ್ಟ ಸಂಖ್ಯೆ 2.3 ಲಕ್ಷವಿದೆ. ಒಟ್ಟಾರೆಯಾಗಿ 4.5 ದಶ ಲಕ್ಷ ಗರ್ಭಾವಸ್ಥೆ, ಪ್ರಸವ ಅಥವಾ ಮಗುವಿನ ಜನನದ ವಾರದ ಬಳಿಕ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿದೆ. 2020ರಲ್ಲಿ ಗರ್ಭಾವಸ್ಥೆ ಸೇರಿದಂತೆ ಮತ್ತಿತ್ತರ ನ್ಯೂನತೆಗಳಿಂದ ಭಾರತದಲ್ಲಿ 7,88,000 ಮಂದಿ ಮೃತಪಟ್ಟಿದ್ದಾರೆ.

ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಮರಣದ ಸಂಖ್ಯೆ ಪ್ರಪಂಚದಾದ್ಯಂತ ಅನಿರೀಕ್ಷಿತವಾಗಿ ಏರಿಕೆಯಾಗುತ್ತಿದೆ. ಕೋವಿಡ್​ ಸಾಂಕ್ರಾಮಿಕ ಕೂಡ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊಡೆತ ನೀಡಿತ್ತು ಎಂದು ವಿಶ್ವಸಂಸ್ಥೆಯ ಮಕ್ಕಳ ಮತ್ತು ಹರೆಯದವರ ಆರೋಗ್ಯ ತಜ್ಞರಾಗಿರುವ ಡಾ.ಅಂಶು ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ ಕರ್ತವ್ಯ | ಆಶಾ ಕಾರ್ಯಕರ್ತೆಯರಿಗೆ ಸಿಗದ ಗೌರವಧನ

ತಾಯಂದಿರು ಅಥವಾ ಶಿಶುಗಳು ಮೃತಪಡದಂತೆ ಜಾಗೃತಿವಹಿಸಬೇಕೆಂದರೆ, ಅದಕ್ಕೆ ತಕ್ಕ ಕಾರ್ಯ ನಿರ್ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಮತ್ತು ಕೌಶಲ್ಯಯುತ ಹೂಡಿಕೆ ಮಾಡಬೇಕು. ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆ, ಆಕೆ ಎಲ್ಲಿದ್ದರೂ ಲಭ್ಯವಿರುವಂತೆ ಮಾಡಿದರೆ ಮಾತ್ರ ತಾಯಿ ಮಗು ಸುರಕ್ಷಿತಾರಾಗಿರಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕೋವಿಡ್​ ಬಡತನವನ್ನು ಹೆಚ್ಚಿಸಿದ್ದು, ಬಿಕ್ಕಟ್ಟು ಎದುರಿಸುವಂತೆ ಮಾಡಿದೆ. ಇದರಿಂದ ಆರೋಗ್ಯ ವ್ಯವಸ್ಥೆಯಲ್ಲಿ ಒತ್ತಡವೂ ಹೆಚ್ಚಾಗಿದೆ. 10ರಲ್ಲಿ ಒಂದು ದೇಶ ಮಾತ್ರ ಪ್ರಸ್ತುತ ಯೋಜನೆಗಳ ಜಾರಿಗೆ ಸಾಕಷ್ಟು ಧನಸಹಾಯ ಹೊಂದಿದೆ ಎಂದು ಇದೇ ವೇಳೆ ವರದಿ ವಿವರಿಸಿದೆ.

ಕೋವಿಡ್‌ನಿಂದಾಗಿ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಜಗತ್ತಿನ ಕಾಲುಭಾಗದಷ್ಟು ದೇಶಗಳು ಗರ್ಭವಸ್ಥೆ ಮತ್ತು ಪ್ರಸವಪೂರ್ವ ಆರೈಕೆ ಮತ್ತು ಅನಾರೋಗ್ಯದ ಮಕ್ಕಳಿಗೆ ಸೇವೆ ನೀಡಲು ತೊಂದರೆ ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X