ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕೆಂದು ಸೇರಿದಂತೆ ರೈತರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಸಮಿತಿಯಿಂದ ತಹಶೀಲ್ದಾರ್ ಬಿ ಎಸ್ ಕಡಕಬಾವಿಯವರಿಗೆ ಮನವಿ ಸಲ್ಲಿಸಿದರು.
“ಪ್ರತಿ ಟನ್ ಕಬ್ಬಿಗೆ ₹5,500 ನೀಡಬೇಕು. ಕೃಷಿಗೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ವಿತರಣೆ ಮಾಡಬೇಕು. ರೈತರ ಜಮೀನುಗಳಿಗೆ ಹಾದಿ ನೀಡಬೇಕು. ನೀರಾವರಿ ಸೌಲಭ್ಯಗಳನ್ನು ಸರಿಯಾಗಿ ವಿತರಣೆ ಮಾಡಬೇಕು. ಈಗಾಗಲೇ ಕೈಗೆತ್ತಿಕೊಂಡಿರುವ ನೀರಾವರಿ ಯೋಜನೆಗಳನ್ನು ಚುರುಕುಗೊಳಿಸಿ ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಕ್ಕರೆ ಕಾರ್ಖಾನೆಗಳ ತೂಕ ಮೋಸ ತಡೆಗೆ ಮುನ್ನೆಚ್ಚರಿಕೆ; 15ಕ್ಕೂ ಹೆಚ್ಚು ಯಂತ್ರಗಳ ಸಿದ್ಧತೆ
ಭೀಮರಾಯ ಪೂಜಾರಿ, ಗೋಪಾಲ ಶಿವಗದ್ದುಗೆ, ಸುಭಾಷ್ ತಳಕೇರಿ, ಶಿವರಾಯ ಕವಡಿ, ಹೊನಕೊಂಡ ಸಾಹುಕಾರ, ಮಲಕಾರಿ ಪೂಜಾರಿ, ಮಾಳಪ್ಪ ತಾವರಖೇಡ, ಕಲ್ಲಪ್ಪ ಹರಿಜನ, ಪಾಂಡುರಂಗ ಹೊಸಮನಿ, ಚಿದಾನಂದ ಬೆಳ್ಳೆನ್ನವರ, ಗೈಬು ಮೇಲಿನಕೇರಿ, ನಾಗೇಂದ್ರ ತಳಕೇರಿ, ಸಿದರಾಯ ಹಂಜಗಿ, ಸಂತೋಷ ಪರೀಟ ಇದ್ದರು.