ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಹೊರವಲಯದ ವೈಟಿಪಿಎಸ್ ಬಳಿ ನಡೆದಿದೆ.
ರಾಯಚೂರು-ಹೈದ್ರಬಾದ್ ಹೆದ್ದಾರಿಯ ವೈಟಿಪಿಎಸ್ ಬಳಿ ಇಂದು ಮದ್ಯಾಹ್ನ ಲಾರಿ ಹಿಂದಿನಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಜನಾರ್ಧನ್ (35) , ಚನ್ನಬಸವ ಪಾಟೀಲ್ (26) ಸ್ಥಳದಲ್ಲಿ ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.
ಮೃತ ಜನಾರ್ಧನ್ ಮಡಿವಾಳ ಚಿಕ್ಕಸೂಗೂರಿನಲ್ಲಿ ವಾಸಿಸುತ್ತಿದ್ದ ಆಂಧ್ರಪ್ರದೇಶ ಮೂಲದವರು ಎನ್ನಲಾಗಿದೆ. ಚನ್ನಬಸವ ಪಾಟೀಲ್ ಲಿಂಗಸಗೂರು ಮೂಲದ ನಿವಾಸಿ ಎಂದು ತಿಳಿದುಬಂದಿದೆ.
ಚಿಕ್ಕಸೂಗೂರಿನಿಂದ ರಾಯಚೂರು ನಗರಕ್ಕೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಶಕ್ತಿನಗರದಿಂದ ರಾಯಚೂರಿಗೆ ಬರುತ್ತಿದ್ದ ಲಾರಿ ಹಿಂದಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದ್ದು ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಅಸ್ಪತ್ರೆಗೆ ಸಾಗಿಸಿದರು.
