ಧಾರಾಕಾರ ಸುರಿಯುತ್ತಿರುವ ಮಳೆಗೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಬೆಣಚಿ ಮತ್ತು ಬಾಲಗೇರಿ ಗ್ರಾಮಗಳ ನಡುವೆ ಇದ್ದ ಸೇತುವೆ ನೀರಿನ ರಬಸಕ್ಕೆ ಕೊಚ್ಚಿ ಹೋಗಿದ್ದು, ಎರಡೂ ಗ್ರಾಮಸ್ಥರು ಹಗ್ಗದ ಆಸರೆಯಿಂದ ನದಿ ದಾಟುವ ಪರಿಸ್ಥಿತಿ ಎದುರಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಎರಡು ಗ್ರಾಮಗಳ ನಡುವಿನ ಸೇತುವೆ ಕೊಚ್ಚಿ ಹೋಗಿದ್ದು, ಜನರು ಅನಿವಾರ್ಯವಾಗಿ ಹಗ್ಗದ ಸಹಾಯದಿಂದ ನದಿ ದಾಟುತ್ತಿದ್ದಾರೆ. ಗ್ರಾಮಕ್ಕೆ ಹೋಗಲು ಬೇರೆ ಪರ್ಯಾಯ ಮಾರ್ಗವಿಲ್ಲದ ಕಾರಣ, ಹಗ್ಗವೆ ನದಿ ದಾಟಲು ಸಹಾಯವಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಸಾಕ್ಷರತೆ ಪ್ರಮಾಣ!
2019ರ ಪ್ರವಾಹದಲ್ಲು ಈ ಸೇತುವೆಯ ಅರ್ಧಭಾಗ ಕೊಚ್ಚಿ ಹೋಗಿದ್ದು, ಇದೀಗ ಪೂರ್ತಿ ಕೊಚ್ಚಿ ಹೋಗಿದೆ. ಸೇತುವೆ ಕಟ್ಟಿಸಿಕೊಡಲು ಎರಡೂ ಗ್ರಾಮಸ್ಥರು ಒತ್ತಾಯಿಸುತ್ತಾರೆ.
ದಾರವಾಡ ಜಿಲ್ಲೆಯ ದಾರಾಕಾಕವಾಗಿ ಹರಿಯುತ್ತಿರುವ ನೀರಿನ ಸಮಸ್ಯೆ ಸರ್ವ ಗ್ರಹ ಮತ್ತು ಶಿಕ್ಷಣ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸ್ವಂತ ದೇಶಕ್ಕೆ ಅವರನ್ನು ಸಂಪೂರ್ಣ ತಮ್ಮ ಸರ್ಕಾರದ ಅದಿಕಾರಿಗಳೋಡನೇ. ಸಂಗಡಿಗರೂಡನೆ ಮಾತನಾಡಿ, ಅವರಿಗೆ ಸಹಾಯ ಮಾಡಲು ಮುಂದಾಗಬೇಕು.