ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಪಾದಚಾರಿ ಇಬ್ಬರೂ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಹಳ್ಳಿ ಗ್ರಾಮದ ಬಳಿ ರಾಷ್ಟ್ಟರೀಯ ಹೆದ್ದಾರಿ-65 ರಲ್ಲಿ ಶನಿವಾರ ಸಂಜೆ ಜರುಗಿದೆ.
ಹಳ್ಳಿ ಗ್ರಾಮದ ನಿವಾಸಿ ಗುಲ್ಚಂದ್ ಗಾಯಕವಾಡ (40) ಹಾಗೂ ಮೊರ್ಖಂಡಿ ವಾಡಿ ಗ್ರಾಮದ ನಿವಾಸಿ ಅಜಯ್ ಪಾಲಂಪಲ್ಲೆ (21) ಮೃತರು ಎಂದು ಗುರುತಿಸಲಾಗಿದೆ.
ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ಗುಲ್ಚಂದ್ ಎಂಬ ವ್ಯಕ್ತಿಗೆ ಬೈಕ್ ಮೇಲೆ ವೇಗವಾಗಿ ಬಂದ ಅಜಯ್ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸದೆ. ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಸೇನಾ v/s ಸೇನಾ ರ್‍ಯಾಲಿಗಳಲ್ಲಿ ರಾಜಕೀಯ ದಾಳವಾದ ಶಿವಾಜಿ
ಈ ಕುರಿತು ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.