ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿ.ಯದ್ಲಾಪುರ ಗ್ರಾಮದ ಕಾಲುವೆಯಲ್ಲಿ ಬಟ್ಟೆ ತೊಳಯಲು ಹೋಗಿದ್ದ ತಾಯಿ ಮತ್ತು ಮಗು ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಾಲಕಿಯ ಶವ ಪತ್ತೆಯಾಗಿದೆ.
ಬಿ.ಯದ್ಲಾಪೂರ ಗ್ರಾಮದ ಸುಜಾತಾ ಆಕೆಯ ಪುತ್ರಿ ಶ್ರಾವಣಿ (11) ಭಾನುವಾರ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ಕಾಲು ಜಾರಿ ಕಾಲುವೆಯ ನೀರಿನಲ್ಲಿ ಬಿದ್ದು ಇಬ್ಬರು ಕೊಚ್ಚಿಕೊಂಡು ಹೋಗಿದ್ದರು. ಭಾನುವಾರ ಸಂಜೆ 6ಕ್ಕೆ ತಾಯಿ ಸುಜಾತ ಎಂಬುವರ ಶವ ಪತ್ತೆಯಾಗಿತ್ತು. ಆದರೆ, ಬಾಲಕಿ ಶ್ರಾವಣಿ ಶವ ಪತ್ತೆಯಾಗಿರಲಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದ, ಪೊಲೀಸರು ಭೇಟಿ ನೀಡಿ ಶವ ಹೊರತೆಗೆಯಲು ಭಾನುವಾರ ನಿರಂತರ ಶೋಧ ನಡೆಸಿದರೂ ಶವ ಪತ್ತೆಯಾಗಿರಲಿಲ್ಲ. ರಾತ್ರಿಯಾಗಿದ್ದರಿಂದ ಶೋಧಕಾರ್ಯ ಸ್ಥಗಿತಗೊಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಟ್ಟೆ ತೊಳೆಯಲು ಹೋದಾಗ ತಾಯಿ ಮಗಳು ನಾಪತ್ತೆ
ಸೋಮವಾರ ಬೆಳಿಗ್ಗೆ 6ರಿಂದ ಪುನಃ ಶೋಧ ಕಾರ್ಯ ಮುಂದುವರೆಸಿದರು, ಪರಿಣಾಮ 7.30 ಸುಮಾರಿಗೆ ಬಾಲಕಿ ಶ್ರಾವಣಿ ಶವ ಪತ್ತೆಯಾಗಿದೆ. ಕುಟುಂಬಸ್ಥರಿಗೆ ಬಾಲಕಿಯ ಶವ ಹಸ್ತಾಂತರಿಸಲಾಗಿದೆ.
