- ಟಾಪ್-30 ಹೈ ಸ್ಟ್ರೀಟ್‌ಗಳಲ್ಲಿ ಬೆಂಗಳೂರಿನ 4 ರಸ್ತೆಗಳಿವೆ
- ಚಿಲ್ಲರೆ ವ್ಯಾಪಾರವು ಹೆಚ್ಚು ಸ್ಪರ್ಧಾತ್ಮಕ ವ್ಯವಹಾರವಾಗಿದೆ
ಭಾರತದ ಟಾಪ್ 30 ‘ಹೈ ಸ್ಟ್ರೀಟ್’ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂಜಿ ರಸ್ತೆ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್‌ನ ಸೋಮಾಜಿಗುಡಾ ಮತ್ತು ಮುಂಬೈನ ಲಿಂಕಿಂಗ್ ರಸ್ತೆ ನಂತರದ ಸ್ಥಾನದಲ್ಲಿವೆ ಎಂದು ನೈಟ್ ಫ್ರಾಂಕ್ ತಿಳಿಸಿದೆ.
ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ನೈಟ್ ಫ್ರ್ಯಾಂಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಟಾಪ್-30 ‘ಹೈ ಸ್ಟ್ರೀಟ್’ಗಳಲ್ಲಿ ಬೆಂಗಳೂರಿನ 4 ರಸ್ತೆಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಟಾಪ್ 10 ಹೈಸ್ಟ್ರೀಟ್ ಪಟ್ಟಿಯಲ್ಲಿ ಎಂಜಿ ರಸ್ತೆ ಅಗ್ರಸ್ಥಾನದಲ್ಲಿದೆ. ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ಗಳು ಕ್ರಮವಾಗಿ 7, 9 ಮತ್ತು 10ನೇ ಸ್ಥಾನದಲ್ಲಿವೆ.
ಉನ್ನತ ಗುಣಮಟ್ಟದ ರಸ್ತೆಗಳು, ಗ್ರಾಹಕರಿಗೆ ಕೈಗಟಕುವ ರೀತಿಯಲ್ಲಿ ಎಲ್ಲ ವಸ್ತುಗಳು ಒಂದೇ ಬೀದಿಯಲ್ಲಿ ಸಿಗುವುದು, ಗ್ರಾಹಕರು ತಮ್ಮ ಅನುಭವದೊಂದಿಗೆ ನೀಡುವ ಅಂಕಗಳನ್ನು ಈ ಸಮೀಕ್ಷೆ ಆಧರಿಸಿದೆ.
ರಿಯಲ್ ಎಸ್ಟೇಟ್ ನೈಟ್ ಫ್ರಾಂಕ್ ಸಂಸ್ಥೆ, “ಬೆಂಗಳೂರು ಅತ್ಯುತ್ತಮವಾದ ಬೀದಿಗಳನ್ನು ಹೊಂದಿದೆ. ಬೆಂಗಳೂರಿನ 4 ಮಾರುಕಟ್ಟೆಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನಗಳಿಸಿವೆ. ಈ ಟಾಪ್ 10 ಹೈಸ್ಟ್ರೀಟ್‌ಗಳು ಗ್ರಾಹಕರಿಗೆ ಉತ್ತಮವಾದ ಶಾಪಿಂಗ್ ಅನುಭವವನ್ನು ನೀಡುತ್ತದೆ. ಹತ್ತು ಪ್ರಮುಖ ಬೀದಿಗಳು ಪ್ರವೇಶ, ಪಾರ್ಕಿಂಗ್ ಸೌಲಭ್ಯಗಳು ಮತ್ತು ಚಿಲ್ಲರೆ ವ್ಯಾಪಾರಿಗಳ ವೈವಿಧ್ಯಮಯ ವಿಂಗಡಣೆಯೊಂದಿಗೆ ಅನುಕೂಲಕರವಾಗಿವೆ” ಎಂದು ಹೇಳಿದೆ.
ನೈಟ್ ಫ್ರಾಂಕ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಿಶಿರ್ ಬೈಜಾಲ್ ಮಾತನಾಡಿ, “ಚಿಲ್ಲರೆ ವ್ಯಾಪಾರವು ಹೆಚ್ಚು ಸ್ಪರ್ಧಾತ್ಮಕ ವ್ಯವಹಾರವಾಗಿದೆ. ಗ್ರಾಹಕರ ಅನುಭವವು ಪ್ರಮುಖವಾಗಿದೆ” ಎಂದರು.
“ಭಾರತದಲ್ಲಿನ ನಗರಗಳು ಆಧುನೀಕರಣಗೊಳ್ಳುತ್ತಿರುವುದರಿಂದ, ಪ್ರವೇಶ, ಪಾರ್ಕಿಂಗ್, ಅಂಗಡಿಯ ಅಂದ ಮುಂತಾದ ಸೌಲಭ್ಯಗಳು ಸುಧಾರಿಸಿದಂತೆ ನಾವು ದೇಶದಲ್ಲಿ ಅನೇಕ ಬೀದಿಗಳು ಪುನರುಜ್ಜೀವನಗೊಳ್ಳುತ್ತಿರುವುದನ್ನು ನೋಡಬಹುದು” ಎಂದು ಹೇಳಿದರು.
“2023–24ರಲ್ಲಿ ಮಾಲ್‌ಗಳ ಆದಾಯಕ್ಕಿಂತ ಹೈ ಸ್ಟ್ರೀಟ್‌ಗಳ ಪ್ರತಿ ಚದರ ಮೀಟರ್‌ನ ಸರಾಸರಿ ಆದಾಯವು ಗಣನೀಯವಾಗಿ ಹೆಚ್ಚಿರುತ್ತದೆ” ಎಂದು ಅವರು ಅಂದಾಜಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಸ್ತೆ ಅಪಘಾತದಲ್ಲಿ ದಿನಕ್ಕೆ ಇಬ್ಬರು ಬಲಿ
ಭಾರತದ ಟಾಪ್-10 ಹೈ ಸ್ಟ್ರೀಟ್‌ಗಳು
- ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್)
- ಹೈದರಾಬಾದ್‌ನ ಸೋಮಾಜಿಗುಡ
- ಮುಂಬೈನ ಲಿಂಕಿಂಗ್ ರೋಡ್
- ದೆಹಲಿಯ ಸೌತ್ ಎಕ್ಸಟೆನ್ಷನ್ 1 ಮತ್ತು 2ನೇ ಭಾಗ
- ಕೋಲ್ಕತಾದ ಪಾರ್ಕ್ ಸ್ಟ್ರೀಟ್ ಮತ್ತು ಕಾಮಾಕ್ ಸ್ಟ್ರೀಟ್
- ಚೆನ್ನೈನ ಅಣ್ಣಾ ನಗರ್
- ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್
- ನೋಯ್ಡಾದ ಸೆಕ್ಟರ್ 18 ಮಾರ್ಕೆಟ್
- ಬೆಂಗಳೂರಿನ ಬ್ರಿಗೇಡ್ ರೋಡ್
- ಬೆಂಗಳೂರಿನ ಚರ್ಚ್ ಸ್ಟ್ರೀಟ್
ಹೈ ಸ್ಟ್ರೀಟ್ ಎಂದರೇನು?
ನಗರದ ಒಂದು ಮುಖ್ಯ ಬೀದಿ ವಾಣಿಜ್ಯ ಸ್ಥಳವಾಗಿರಬೇಕು. ಈ ರಸ್ತೆಯಲ್ಲಿ ವೈವಿದ್ಯಮಯವಾದ ರೀಟೇಲ್ ಶಾಪ್‌ಗಳು, ರೆಸ್ಟೋರೆಂಟ್‌ಗಳು, ಥಿಯೇಟರ್, ಕೆಫೆ ಇತ್ಯಾದಿ ಸೇರಿದಂತೆ ನಾನಾ ಬಗೆಯ ವಾಣಿಜ್ಯ ಅಂಗಡಿಗಳಿರಬೇಕು. ಉತ್ತಮವಾದ ರಸ್ತೆ ಹೊಂದಿರವಾಗಿ, ಚಿಲ್ಲರೆ ವ್ಯಾಪಾರ ಹೆಚ್ಚಾಗಿರಬೇಕು.