ಗುಬ್ಬಿ:: ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋದ ಶಿರಾ ಮೂಲದ ನಾಲ್ವರ ಪೈಕಿ ಓರ್ವ ಯುವಕ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆ ಯುವಕನ ಪತ್ತೆಗೆ ತೀವ್ರ ಶೋಧ ನಡೆಸುತ್ತಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಜಿ.ಹೊಸಹಳ್ಳಿ ಗ್ರಾಮದ ಕೆರೆಯಲ್ಲಿ ಮದ್ಯಾಹ್ನ 4 ಗಂಟೆ ಸಮಯದಲ್ಲಿ ಈಜಲು ಹೋದ ನಾಲ್ಕು ಜನರ ಪೈಕಿ ಈಜು ಬಾರದ ರಾಕೇಶ್(28) ಮುಳುಗಿರುವ ಯುವಕ ಎನ್ನಲಾಗಿದೆ. ಹೊಸಹಳ್ಳಿಯಲ್ಲಿದ್ದ ಈ ಕೂಲಿ ಕಾರ್ಮಿಕರ ತಂಡ ಜಲ ಜೀವನ್ ಮಿಷನ್ ಕಾಮಗಾರಿ ಮಾಡುತ್ತಿದ್ದರು. ಹಬ್ಬದ ಹಿನ್ನಲೆ ರಜೆ ಮುಗಿಸಿಕೊಂಡು ಮರಳಿ ಬಂದು ಕೆರೆಗೆ ಇಳಿದಿದ್ದಾರೆ. ಈ ಸಮಯದಲ್ಲಿ ರಾಕೇಶ್ ನಾಪತ್ತೆಯಾಗಿರುವ ವರದಿ ಸದ್ಯಕ್ಕೆ ಹೊರ ಬಂದಿದೆ.
ಪೊಲೀಸರು ಮತ್ತು ಅಗ್ನಿ ಶಾಮಕ ದಳ ತೀವ್ರ ಹುಡುಕಾಟ ನಡೆಸಿದ್ದಾರೆ. ಇನ್ನೂ ನಾಪತ್ತೆ ವ್ಯಕ್ತಿ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ತೀವ್ರ ಶೋಧ ನಡೆಸಿದ್ದಾರೆ. ಮುಳುಗು ತಜ್ಞರು ಸಹ ಕಾರ್ಯಾಚರಣೆ ನಡೆಸಿದ್ದಾರೆ.
ಸ್ಥಳದಲ್ಲಿ ಮೊಕಂ ಹೂಡಿದ ಗುಬ್ಬಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.