ತುರುವೇಕೆರೆ ತಾಲೂಕಿನ ಕೊಡಗಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೊಡಗಿಹಳ್ಳಿಯ ಎಂ.ಸಿದ್ದಲಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
13 ಸದಸ್ಯ ಬಲ ಹೊಂದಿರುವ ಕೊಡಗಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕೆ.ಬಿ. ದೇವರಾಜು ನೀಡಿದ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸೋಮವಾರ ನಡೆದ ಚುನಾವಣೆಗೆ ಎಂ.ಸಿದ್ದಲಿಂಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಸಹಕಾರ ಅಭಿವೃದ್ದಿ ಇಲಾಖೆ ಅಧಿಕಾರಿ ಡಿ.ಹೆಚ್.ಶ್ರೀನಿವಾಸ್ ನೂತನ ಅಧ್ಯಕ್ಷರಾಗಿ ಎಂ.ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಎಸ್.ಪಿ.ವೆಂಕಟೇಶ್, ನಿರ್ದೇಶಕರಾದ ಪುಟ್ಟಸ್ವಾಮಿಗೌಡ, ಪಾಂಡುರಂಗಯ್ಯ, ಕೆಂಪಮ್ಮ, ದಿನೇಶ್‌ಬಾಬು, ಕೆ.ಸಿ.ಸಿದ್ದಯ್ಯ, ರಂಗಯ್ಯ, ಚಿಕ್ಕಹನುಮಯ್ಯ, ಟಿ.ಆರ್. ಜಯಲಕ್ಷಿ ಎಸ್.ಹರ್ಷ, ಮುಖ್ಯ ಕಾರ್ಯನಿರ್ಹಣಾಧಿಕಾರಿ ಬಿ.ಎನ್.ಮಹೇಶ್ವರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್ ಮಹೇಶ್, ರುದ್ರೇಶ್, ಟಿಎಪಿಸಿಎಂಎಸ್‌ನ ಕಾರ್ಯದರ್ಶಿ ಲೋಕೇಶ್ ಮುಖಂಡರಾದ ಚಂದ್ರಶೇಖರ್, ನಾಗರಾಜು, ಕೈಲಾಶ್, ಸಾಗರ್ ಯಾದವ್, ಪ್ರಸನ್ನಕುಮಾರ್, ಮಂಜಣ್ಣ, ಜಯಗಿರಿ ಸುಂದರ್ ಜಯರಾಮ್ ಸೇರಿದಂತೆ ಅನೇಕ ಮುಖಂಡರು ಅಭಿನಂದಿಸಿದರು.
ವರದಿ – ನಾಗಭೂಷಣ್ ತುರುವೇಕೆರೆ
