ಮುಂದೆ ನಡೆಯುವ ಸಚಿವ ಸಂಪುಟದಲ್ಲಿ ಕರ್ನಾಟಕ ಸರ್ಕಾರ ಒಳಮಿಸಲಾತಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಪ್ರದೀಪ್ ಕಲಗುದ್ರಿ ಒತ್ತಾಯಿಸಿದರು.
ಒಳಮಿಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಭಾರತ ಸರ್ವೊಚ್ಚ ನ್ಯಾಯಾಲಯದ ಏಳು ಮಂದಿ ನ್ಯಾಯಾಧೀಶರ ಪೀಠವು ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಜನಾಂಗಕ್ಕೆ ಆಯಾ ರಾಜ್ಯಗಳಿಗೆ ಒಳಮಿಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಲು ಸುಪ್ರೀಂ ಕೊರ್ಟ್ ಸೂಚನೆ ನೀಡಿದೆ” ಎಂದು ಹೇಳಿದರು.
ಸುಮಾರು 40 ವರ್ಷಗಳ ಬೇಡಿಕೆಯಾದಂತಹ ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ಒಳಮಿಸಲಾತಿ ವರ್ಗೀಕರಣಗೊಳಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜಾತಿಗಣತಿ ವರದಿ ಬಿಡುಗಡೆಗೊಳಿಸಿ: ಸರ್ಕಾರಕ್ಕೆ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಒತ್ತಾಯ
ಉಮೇಶ್ ದೊಡ್ಡಮನಿ, ಶೇಖರ್ ಹರಿಜನ, ಅರುಣ ಮಣ್ಣಮ್ಮನವರ, ಜಗದೀಶ್ ಹರಿಜನ, ಹಾಲೇಶ ಹುಣಸಿಕಟ್ಟಿ, ಮಾದೇವಪ್ಪ ಹರಿಜನ, ಬಂಗಾರೆಪ್ಪ ಹರಿಜನ, ವಿಷ್ಣು ಹರಿಜನ, ನಾಗರಾಜ ಕೇಸರಿ, ಕುಮಾರ್ ಹರಿಜನ, ಗುಡ್ಡಪ್ಪ ಹರಿಜನ, ಸಿದ್ದು ಹರವಿ ಸೇರಿದಂತೆ ಇತರರು ಇದ್ದರು.