ಕರ್ನಾಟಕದ ಸಹಕಾರಿ ಸಂಘಗಳು ರೈತರಿಗೆ ₹5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಬ್ಯಾಂಕ್‌ಗಳಾಗಿವೆ ಎಂದು ಸಕ್ಕರೆ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಮತ್ತು ವಿಜಯಪುರ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಭ್ಯಾಣ ಗ್ರಾಮದಲ್ಲಿ ಬ್ಯಾಂಕ್‌ನ 49ನೇ ಜಾಕಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
“ಜಗತ್ತಿಗೆ ಗೋಧಿ, ಅಕ್ಕಿ ಕೊಡುವ ದೇಶ ನಮ್ಮದಾಗಿದೆ. ಹಾಲು ಉತ್ಪಾದನೆಯಲ್ಲಿ ಆಗ್ರಗಣ್ಯ ಸ್ಥಾನ ಭಾರತಕ್ಕಿದ್ದು, ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ವಿಜಯಪುರ-ಬಾಗಲಕೋಟೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ” ಎಂದರು.
“ರಾಜ್ಯದಲ್ಲಿ 27 ಸಕ್ಕರೆ ಕಾರ್ಖಾನೆಗಳಿಗೆ ಬಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. 272 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿದ್ದು 234 ಸ್ವಂತ ಕಟ್ಟಡ ಕಟ್ಟಿಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ನಲ್ಲಿ ರೈತರು ₹6000 ಕೋಟಿ ಡೆಪಾಸಿಟ್ ಇಟ್ಟಿದ್ದಾರೆ. ಬಿಡಿಸಿಸಿ ಬ್ಯಾಂಕ್ ರೈತರಿಗೆ ₹6000 ಕೋಟಿ ಸಾಲ ನೀಡಿದೆ. ಮುಂದೆ ರೈತರು ಬ್ಯಾಂಕಿಗೆ ಸಾಲ ಕೇಳಲು ಬರುವ ಬದಲಾಗಿ ಡಿಪಾಸಿಟ್ ಇಡಲು ಬರುವ ವ್ಯವಸ್ಥೆಯಾಗಬೇಕಾಗಿದೆ” ಎಂದರು.
“ಸಣ್ಣವ್ಯಾಪಾರಸ್ಥರು, ಬಡವರ ಬದುಕಿಗೆ ಸಹಕಾರಿ ಬ್ಯಾಂಕ್‌ಗಳು ನೆರವು ನೀಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬಡವರು, ರೈತರು ನಿಬಂಧನೆಯ ಕಾರಣಕ್ಕೆ ಸಾಲ ತೆಗೆದುಕೊಳ್ಳುವದು ಕಷ್ಟ, ಸಹಕಾರಿ ಬ್ಯಾಂಕ್ ಸಾಲ-ಸೌಲಭ್ಯ ಕಲ್ಪಿಸಿ ದೇಶದ ಪ್ರಗತಿಗೆ ಸಿಂಹಪಾಲು ಕೊಡುಗೆ ನೀಡಿದೆ” ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, “ದೇಶದಲ್ಲಿ ಸಹಕಾರ ಚಳುವಳಿ ದೊಡ್ಡ ಕ್ರಾಂತಿ ಮಾಡಿದೆ. ಅದರಲ್ಲೂ ಭಾರತದ ಪ್ರಗತಿಯಲ್ಲಿ ಸಹಕಾರ ಬ್ಯಾಂಕ್‌ಗಳ ಕೊಡುಗೆ ಆಪಾರವಾಗಿದೆ” ಎಂದರು.
ಅಮೃತಾನಂದ ಶ್ರೀಗಳು ಮಾತನಾಡಿ, “ಸಹಕಾರಿ ಬ್ಯಾಂಕ್ ಯಶಸ್ವಿಯಾಗಲು ಠೇವಣೆದಾರರ ಜತೆಗೆ, ಸಕಾಲಕ್ಕೆ ಸಾಲ ಮರುಪಾವತಿ ಮಾಡುವ ಸಾಲಗಾರರು ಮುಖ್ಯವಾಗಿದ್ದು, ಅವರಿಗೆ ಗೌರವ ಸಲ್ಲಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ಇವನಾರವ ಎನ್ನದೇ ಇವ ನಮ್ಮವ ಎನ್ನುವಂತೆ ವೀರಶೈವ ಲಿಂಗಾಯಿತ ಸಮಾಜ ಬಾಳಬೇಕಿದೆ : ಕೇಂದ್ರ ಸಚಿವ ವಿ. ಸೋಮಣ್ಣ
ಬ್ಯಾಂಕ್‌ನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಬ್ಯಾಂಕಿನ ಸಿಇಒ ಎಸ್ ಡಿ ಬಿರಾದಾರ, ಆರ್ ಎಂ ಬಣಕಾರ, ಎಂ ಎಸ್ ಹತ್ತೂರಕರ, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಶಂಕ್ರಪ್ಪ ಸಿದ್ರಾಮಶೆಟ್ಟಿ, ಗ್ರಾಪಂ ಅಧ್ಯಕ್ಷೆ ಕಲಾವತಿ ಬಿರಾದಾರ, ವೇಂಕಟೇಶ ಕುಲಕರ್ಣಿ, ಸಿದ್ದಣ್ಣ ಬೂದಿಹಾಳ ವಕೀಲರು, ಪುಷ್ಟಾವತಿ ಮರೋಟ, ಸಹಕಾರಿ ಸಂಘ ಉಪನಿಬಂಧಕ ಭಾಗ್ಯಶ್ರೀ, ಕೆ ಎಚ್ ವಡ್ಡರ, ಎಂ ಆರ್ ಪಾಟೀಲ, ಶ್ರೀಮಂತ ಇಂಡಿ, ಗಣೇಶಲಿಂಗ ಮಹಾರಾಜರು ಸೇರಿದಂತೆ ಇತರರು ಇದ್ದರು.