ಉಪಾಹಾರದ ಕೈ ಚೀಲಕ್ಕಾಗಿ ಇಬ್ಬರ ನಡುವೆ ವಾಗ್ವಾದ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡಕಟ್ಟಿ ಗ್ರಾಮದಲ್ಲಿ ನಡೆದಿದೆ.
ರುದ್ರಪ್ಪ (64) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರುದ್ರಪ್ಪ ತನ್ನ ಉಪಾಹಾರದ ಕೈಚೀಲವನ್ನು ಗ್ರಾಮ ಪಂಚಾಯಿತಿ ಕಟ್ಟೆಯ ಮೇಲಿಟ್ಟು ಮತ್ತೊಬ್ಬ ಕೂಲಿ ಕಾರ್ಮಿಕನನ್ನು ಕರೆಯಲು ಹೋಗಿದ್ದ. ಈ ಸಂದರ್ಭದಲ್ಲಿ ರುದ್ರಪ್ಪನ ಊಟದ ಕೈ ಚೀಲವನ್ನು ಆರೋಪಿ ಮಲ್ಲಪ್ಪ ತೆಗೆದುಕೊಂಡು ಬುಡರಕಟ್ಟಿ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ.
ತನ್ನ ಉಪಾಹಾರದ ಕೈ ಚೀಲವನ್ನೂ ಕಸಿದುಕೊಂಡಿದ್ದರಿಂದ ಆಕ್ರೋಶಗೊಂಡ ರುದ್ರಪ್ಪ, ವಾಗ್ವಾದ ನಡೆಸಿದ್ದಾನೆ. ಈ ವೇಳೆ ಮಲ್ಲಪ್ಪ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ರುದ್ರಪ್ಪನ ಮುಖಕ್ಕೆ ಮತ್ತು ತಲೆಗೆ ಬಲವಾಗಿ ಹೊಡೆದ ಪರಿಣಾಮ ತೀವ್ರವಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಬೆಳಗಾವಿ | ನಷ್ಟದ ಆತಂಕ ಎದುರಿಸುತ್ತಿರುವ ಸೋಯಾಬೀನ್ ಬೆಳೆದ ಬೆಳೆಗಾರರು!
ಆರೋಪಿ ಮಲಪ್ಪನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ದೊಡ್ಡವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.