ಬಾಗಲಕೋಟೆ | ರಸ್ತೆ ದಟ್ಟಣೆ ಕಡಿಮೆ ಮಾಡಿ ಕಬ್ಬು ಸಾಗಣೆ ಹೆಚ್ಚಿಸಲು ₹12 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಯೋಜನೆಗೆ ಚಾಲನೆ

Date:

Advertisements

ಕಬ್ಬು ಸಾಗಣೆಯನ್ನು ಹೆಚ್ಚಿಸಲು ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಚಿವ ಆರ್ ಬಿ ತಿಮ್ಮಾಪುರ ಅವರು ಲೋಕೋಪಯೋಗಿ ಇಲಾಖೆಯಿಂದ ₹12 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಯೋಜನೆಗೆ ಚಾಲನೆ ನೀಡಿದರು.  

ಲೋಕೋಪಯೋಗಿ ಇಲಾಖೆಯಿಂದ ಭೂಮಿ ನೀಡಿದ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, “ಈ ಯೋಜನೆಯು ಯರಗಟ್ಟಿ ಬಬಲೇಶ್ವರ ರಸ್ತೆ 55 ಮತ್ತು ಮುಧೋಳ ನಿಪ್ಪಾಣಿ 18 ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಅಲ್ಲದೆರ ಇತರೆ ಸಾಗಣೆಯನ್ನು ಸಾರಿಗೆಗೆ  ಸುವ್ಯವಸ್ಥಿತಗೊಳಿಸುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆಗೆ ಕಡಿಮೆ ವೆಚ್ಚದಲ್ಲಿ ಈ ರಸ್ತೆ ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ ಸುಧಾರಿತ ರಸ್ತೆ ಸುರಕ್ಷತೆ, ಕಡಿಮೆ ಟ್ರಾಫಿಕ್ ಪ್ರಮಾಣದಿಂದಾಗಿ ಅಪಘಾತಗಳ ಪ್ರಮಾಣ ಮತ್ತು ಅಪಾಯಗಳು ಕಡಿಮೆ ಆಗಬಹುದಾಗಿದೆ” ಎಂದರು.

“ಮಹಾಲಿಂಗಪುರ ರಸ್ತೆ, ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ. ಮೂಲಸೌಕರ್ಯ ಉತ್ತೇಜನದಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಣೆಯನ್ನು ಸರಾಗಗೊಳಿಸುವ ಮತ್ತು ನಗರದ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಬೈಪಾಸ್ ನಿರ್ಮಾಣ ಕಳೆದ 25 ವರ್ಷದ ಹಿಂದೆ ಎಪಿಎಂಸಿ ಮಂತ್ರಿಯಾಗಿದ್ದಾನಿಂದ ಕನಸಾಗಿತ್ತು. ನೀವು ಮತ ನೀಡಿ ಗೆಲ್ಲಿಸಿರುವುದಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ” ಎಂದರು.

Advertisements

“ಭೂಮಿ ನೀಡಿದ ರೈತರಾದ ಸದಾಶಿವ ಕದಂ, ಶಾಂತವ ಹೊಸಮನಿ, ಯುವರಾಜ ಘೋರ್ಪಡೆಯವರಿಂದ 7.27 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರ ಕೂಡಾ ಒದಗಿಸಲಾಗಿದೆ” ಎಂದು ಸಚಿವ ತಿಮ್ಮಾಪೂರ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚನ್ನಗಿರಿ | ಟ್ರ್ಯಾಕ್ಟರ್ ನೋಂದಣಿಗೆ ರೈತನಿಂದ ಲಂಚ: ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಉಪತಹಶೀಲ್ದಾರ್

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಅಧ್ಯಕ್ಷ ಸುನಂದಾ ತೇಲಿ, ಉಪಾಧ್ಯಕ್ಷ  ಭಗವಾನ್ ಗೋವಿಂದಪ್ಪ ಗುಜ್ಜನವರ, ಶಿವಾನಂದ್ ಉದುಪುಡಿ, ರಾಘು ಮೋಕಾಸಿ, ಪಿಡಬ್ಲ್ಯೂಡಿ ಅಧಿಕಾರಿ ಮಾಚಕನೂರ, ತಹಶೀಲ್ದಾರ್‌ ಮಹದೇವ ಸನಮುರಿ, ಸಿಪಿಐ ಮಾಹಾದೇವ ಶಿರಹಟ್ಟಿ, ಉಮೇಶ್ ಶಿದ್ನಾಳ ಸೇರಿದಂತೆ ರೈತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X