ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬಸವಾಪುರ ಗ್ರಾಮದ ರೈತ ರಾಜೇಗೌಡ ಅವರ ಮನೆಯ ಕೊಟ್ಟಿಗೆಯಲ್ಲಿದ್ದ ಗರ್ಭಿಣಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿದೆ.
ಸೋಮವಾರ ಹಸುವಿನ ಮಾಲೀಕ ರಾಜೇಗೌಡ ಮಲಗುವ ಮುನ್ನ ಮೇವು ಹಾಕಿ ಹೋಗಿದ್ದರು. ಮಂಗಳವಾರ ಬೆಳಗಿನ ಜಾವದಂದು ಚಿರತೆ ದಾಳಿ ಮಾಡಿ ಗರ್ಭಿಣಿ ಹಸುವಿನ ಹೊಟ್ಟೆ ಭಾಗವನ್ನು ಸೀಳಿದೆ. ಮಾಲೀಕ ಎದ್ದು ಕೊಟ್ಟಿಗೆಯಲ್ಲಿ ನೋಡಿದಾಗ ಹಸು ಮೃತಪಟ್ಟಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಎಐಟಿಯುಸಿ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ; ಮೈಸೂರಿಗೆ ಆಗಮಿಸಿದ ಜಾಥಾ
“ಚಿರತೆ ದಾಳಿಗೆ ಹಸು ಬಲಿಯಾಗಿರುವುದು ಖಚಿತ ಪಡಿಸಿದಾಗ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಕಳೆದ ಹಲವು ತಿಂಗಳಿಂದ ಚಿರತೆ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಕೂಲಿ ಮಾಡುವ ರೈತರೊಬ್ಬರ ಬೆಲೆ ಬಾಳುವ ಹಸು ಬಲಿಯಾಗಿದೆ. ನಾಳೆ ಅದೇ ಚಿರತೆ ಮನುಷ್ಯರ ಮೇಲೆ ದಾಳಿ ಮಾಡುತ್ತದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.