ಮೈಸೂರು ನಗರದಲ್ಲಿ ನಡೆಯಲಿರುವ ಎಐಟಿಯುಸಿ ರಾಜ್ಯ ಮಟ್ಟದ 4ನೇ ಕಾರ್ಮಿಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಚಾಮರಾಜನಗರದಿಂದ ಬಿಡದಿಯವರೆಗೂ ಪ್ರಚಾರ ಜಾಥಾ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಮೈಸೂರಿಗೆ ಆಗಮಿಸಿದ ಜಾಥಾವನ್ನು ಸ್ವಾಗತಿಸಲಾಯಿತು.
ಚಿಕ್ಕಗಡಿಯಾರದ ವೃತ್ತದಲ್ಲಿ ಸ್ವಾಗತಿಸಿದ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಮಾತನಾಡಿ, “ದೇಶಕ್ಕೆ ಅನ್ನ ಹಾಕುವ ರೈತರಂತೆ, ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಾರ್ಮಿಕರೂ ಕೂಡಾ ಬಹುಮುಖ್ಯ. ಆದರೆ ಇಂದು ಕಾರ್ಮಿಕರ ಕಾಯ್ದೆಗಳನ್ನು ರದ್ದುಗೊಳಿಸುವ ಮೂಲಕ ಸರ್ಕಾರಗಳು ಕಾರ್ಮಿಕರ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಲೇ ಬಂದಿವೆ” ಎಂದು ಆರೋಪಿಸಿದರು.
“ದುಡಿಯುವ ಜನರ ಬದುಕು ಸಂಕಟಮಯವಾಗಿರುವ ಈ ಸಂದರ್ಭದಲ್ಲಿ ಆಳುವ ಸರ್ಕಾರಗಳು ಬಡಜನರ, ಕಾರ್ಮಿಕರ ವಿರುದ್ಧ ಅನುಸರಿಸುವ ನೀತಿ ನಿಲುವುಗಳ ವಿರುದ್ಧ ಬಲಿಷ್ಠ ಹೋರಾಟ ರೂಪಿಸಲು ಕಾರ್ಮಿಕ ವರ್ಗ ಸಜ್ಜಾಗಬೇಕಾಗಿದೆ. ಆ ನಿಟ್ಟಿನಲ್ಲಿ ಈ ಸಮ್ಮೇಳನದ ಜಾಥಾ ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಮದಾಪುರ ಕಾನನಕ್ಕೆ ಮರು ನಾಮಕರಣ: ಈಶ್ವರ್ ಖಂಡ್ರೆ
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎ ದೇವದಾಸ್, ಸೆಕ್ರಟರಿಯಟ್ ಸದಸ್ಯರಾದ ಎಂ ಉಮಾದೇವಿ, ಹನುಮೇಶ್ ಜಿಲ್ಲಾ ಅಧ್ಯಕ್ಷ ಯಶೋಧರ್, ಕಾರ್ಯದರ್ಶಿ ಚಂದ್ರಶೇಖರ ಮೇಟಿ ಸೇರಿದಂತೆ ಇತರರು ಇದ್ದರು.