ರೈಲ್ವೆ ಮುಂಗಡ ಬುಕಿಂಗ್ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಕೆ ಮಾಡಲಾಗಿದ್ದು, ನವಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಇನ್ನು ಮುಂದೆ ಮುಂಗಡ ಕಾಯ್ದಿರಿಸುವಿಕೆಯ ಅವಧಿಯ (ಎಆರ್‌ಪಿ) ಅಡಿಯಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲು ನಿರ್ಧರಿಸಿದ ಪ್ರಯಾಣದ ದಿನಾಂಕಕ್ಕಿಂತ ನಾಲ್ಕು ತಿಂಗಳ ಮುಂಚಿತವಾಗಿ ಸಾಧ್ಯವಾಗುವುದಿಲ್ಲ.
ಆದಾಗ್ಯೂ, ಅಕ್ಟೋಬರ್ 10, 2024ರವರೆಗೂ 120 ದಿನಗಳಿಗೆ ಬುಕಿಂಗ್ ಮಾಡಲಾಗಿದ್ದ ಅವಧಿಯು ಹಾಗೆಯೆ ಉಳಿದುಕೊಳ್ಳಲಿದೆ. ಹಾಗೆಯೇ 60 ದಿನಗಳ ಮುಂಗಡ ಕಾಯ್ದಿರಿಸುವಿಕೆ ಅವಧಿಯನ್ನು(ಎಆರ್‌ಪಿ) ಮೀರಿ ಮಾಡಲಾದ ಬುಕಿಂಗ್‌ಅನ್ನು ರದ್ದುಗೊಳಿಸುವುದನ್ನು ಕೂಡ ಅನುಮತಿಸಲಾಗುತ್ತದೆ.
ಮುಂಗಡ ಕಾಯ್ದಿರಿಸುವಿಗೆ ಅವಧಿಯು ತಾಜ್ ಎಕ್ಸ್‌ಪ್ರೆಸ್, ಗೋಮತಿ ಎಕ್ಸ್‌ಪ್ರೆಸ್ ಸೇರಿದಂತೆ ಮುಂತಾದ ನಿರ್ದಿಷ್ಟ ಹಗಲಿನ ವೇಳೆಯಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿರುವುದಿಲ್ಲ. ಅದೇ ರೀತಿ ವಿದೇಶಿ ಪ್ರವಾಸಿಗರಿಗೆ 365 ದಿನಗಳ ಮಿತಿಯಲ್ಲಿಯೂ ಕೂಡ ಯಾವುದೇ ಬದಲಾವಣೆಯಿರುವುದಿಲ್ಲ ಎಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆ ಇಲಾಖೆಯು, ಎಪಿಆರ್ ಮಿತಿಯನ್ನು 2015ರ ಮಾರ್ಚ್ 25ರಂದು 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮಹಾ’ ಚುನಾವಣೆಗಾಗಿ ಒಂದಾದ ಮನುವಾದಿಗಳು, ಒಂದಾಗದ ಜಾತ್ಯತೀತರು
