ಬುದ್ಧ ಮತ್ತು ಅಂಬೇಡ್ಕರ್ ಮಾರ್ಗವೇ ನಮಗೆ ಆದರ್ಶವಾಗಬೇಕು ಎಂದು ತಕ್ಷಶಿಲ ಬುದ್ದವಿಹಾರ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಬೋದಿಸತ್ವ ಬೆಟ್ಟದಲ್ಲಿ
ಸೀಗೆ ಹುಣ್ಣುಮೆ ಅಂಗವಾಗಿ ಹಮ್ಮಿಕೊಂಡಿದ್ದ ಬುದ್ದ ವಂದನೆ, ಧಮ್ಮ ಧ್ಯಾನ, ಸಸಿಗಳನ್ನು ನೆಡುವ ಹಾಗೂ ಅನ್ನದಾನ ಕಾರ್ಯಕ್ರಮ ಮಾತನಾಡಿದರು.
“ಬುದ್ದ ಮತ್ತು ಅಂಬೇಡ್ಕರ್ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಮಾರ್ಗವೇ ನಮಗೆ ದಾರಿ ದೀಪವಾಗಿದೆ. ಅನ್ಯ ಧರ್ಮಗಳಲ್ಲಿ ಸ್ವಾತಂತ್ರ್ಯ ಮತ್ತು ಸಾಮರಸ್ಯದ ಕೊರತೆಯನ್ನು ಕಾಣಬಹುದು. ಹಾಗೂ ಅನೇಕ ರೀತಿಯ ಮೂಢನಂಬಿಕೆಗಳಿಂದ ಕಂದಾಚಾರಗಳು ಮನೆ ಮಾಡಿವೆ. ಆದರೆ ಬುದ್ದರ ಹಾದಿ ವೈಚಾರಿಕತೆಯಿಂದ ಕೂಡಿದ್ದು, ಸಕಲ ಜೀವರಾಶಿಗಳ ನೆಮ್ಮದಿಯನ್ನು ಬಯಸಿದೆ” ಎಂದರು.
“ಬುದ್ದ ವಂದನೆ, ಧಮ್ಮ ಧ್ಯಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ ನವೀನ್ ಮೌರ್ಯ ಧಮ್ಮ ದಾನ ನೆರವೇರಿಸಿ ಮಾತನಾಡಿ, “ಜಗತ್ತಿಗೆ ಧ್ಯಾನವನ್ನು ಪರಿಚಯಿದವರೇ ಬುದ್ದರಾಗಿದ್ದಾರೆ. ಧ್ಯಾನದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಧೃಢಗೊಳ್ಳುತ್ತದೆ. ಜಗತ್ತಿನಲ್ಲಿರುವ ಸರ್ವ ಜೀವಿಗಳ ಲೇಸನ್ನು(ಒಳ್ಳೆಯದು) ಧಮ್ಮ ನೀಡುತ್ತದೆ.
ಮಾನಸಿಕವಾಗಿ ಆರೋಗ್ಯ, ದೈಹಿಕ ಆರೋಗ್ಯಕ್ಕೆ ಪ್ರೇರಣೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು: ಡಾ.ಶರಣಬಸವಪ್ಪ ಕ್ಯಾತನೂರ
ಉಪಾಧ್ಯಕ್ಷ ಆರ್ ಸೋಮಣ್ಣ, ಸಹ ಕಾರ್ಯದರ್ಶಿ ಆರ್ ಡಿ ಉಲ್ಲಾಸ್, ಟ್ರಸ್ಟ್ ನಿರ್ದೇಶಕರುಗಳಾದ ಎಂ ಎನ್ ಸಂಪತ್, ಎಂ ಶ್ರೀನಿವಾಸ್, ಮುತ್ತಣ್ಣ, ರಾಜೇಂದ್ರ, ಶಾಂತ್ ಕುಮಾರ್, ಮಂಜುನಾಥ್, ನಾಗಸ್ವಾಮಿ, ಮಲ್ಲೇಶ್, ಶೀರಯ್ಯ, ಜೆ ಸ್ವಾಮಿ, ಶಿವ ಕುಮಾರ್, ದೇಶ ಲಿಂಗು, ರಮೇಶ್ ಹಾಗೂ ಮುದ್ದಯ್ಯ, ಉಪಾಸಕರುಗಳಾದ ಮೂಖಳ್ಳಿ ಗೋಪಾಲ್, ರವಿ ಬಲಚವಾಡಿ ಗಿರೀಶ್, ಕೊಡಸೋಗೆ ಪ್ರಸಾದ್, ಚಿನ್ನಸ್ವಾಮಿ ಬೆಂಡರವಾಡಿ ಹಾಗೂ ಗ್ರಾಮದ ಬೌದ್ಧ ಉಪಾಸಕ ಬಂಧುಗಳು ಇದ್ದರು.