ಹಲವು ಕ್ಷೇತ್ರಗಳಲ್ಲಿ ಹಲವಾರು ಉತ್ಪನ್ನಗಳ ಮೂಲಕ ತಮ್ಮದೇ ಆದಂತಹ ಹೊಸ ಛಾಪನ್ನು ಮೂಡಿಸಿದಂತಹವರು ರತನ್ ಟಾಟಾ. ಅವರು ಸದಾ ಬಡವರಿಗಾಗಿ ತುಡಿಯುತ್ತಿದ್ದಂತಹ ಮನಸ್ಸು. ಶ್ರೀಸಾಮಾನ್ಯ ವ್ಯಕ್ತಿಗೂ ದಕ್ಕುವ ದರಗಳಲ್ಲಿ ಅವರ ಉತ್ಪನ್ನಗಳು ದೊರೆಯುತ್ತಿದ್ದವು. ರೈತರೂ ಕಾರಿನಲ್ಲಿ ಓಡಾಡುವ ಕನಸು ಕಂಡಂತಹ ಭಾರತದ ಹೆಮ್ಮೆಯ ಪುತ್ರ ಎಂದು ರಾಮನಗರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಟಿ.ದಿನೇಶ್ ಬಿಳಗುಂಬ ತಿಳಿಸಿದರು.
ರಾಮನಗರದಲ್ಲಿ ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿಕೊಂಡಿದ್ದಂತಹ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಪ್ರೇಮಿ ಬಿ.ಟಿ. ರಾಜೇಂದ್ರ ಮಾತನಾಡಿ, ಮದ್ಯಪಾನ, ಧೂಮಪಾನ ಹೊರತುಪಡಿಸಿ ಮಿಕ್ಕುಳಿದ ಎಲ್ಲಾ ಉತ್ಪನ್ನಗಳಲ್ಲಿಯೂ ತಮ್ಮದೇ ಹೊಸ ಬ್ರಾಂಡ್ ಕಟ್ಟಿಕೊಟ್ಟವರು ರತನ್ ಟಾಟಾ ಎಂದು ತಿಳಿಸಿದರು.
ಸಮದ್ ಮಾತನಾಡಿ, ನನ್ನ ಸ್ನೇಹಿತ ಟಾಟಾ ಎಸ್ ಗಾಡಿ ತಗೊಂಡು ಬದುಕು ರೂಪಿಸಿ ಇಂದು ಮೂರು ಮಹಡಿಯ ಮನೆ ನಿರ್ಮಿಸಿದ್ದಾನೆ. ಅಂತಹ ಬ್ರಾಂಡ್ ನಮ್ಮ ಉದ್ಯಮಿಗಳು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಸೇಡಂ | ಕುಡಿಯುವ ನೀರಿಗಾಗಿ ಪರದಾಟ: ಸ್ಲಮ್ಬೋರ್ಡ್ ಬಡಾವಣೆ ನಿವಾಸಿಗಳ ಗೋಳು ಕೇಳದ ಅಧಿಕಾರಿಗಳು!
ಕಾರ್ಯಕ್ರಮದಲ್ಲಿ ಮಾತನಾಡಿದ ಅರುಣ್ ಕವಣಾಪುರ, ರತನ್ ಟಾಟಾರ ಬದುಕು ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಅವರ ಸಂಪಾದನೆಯಲ್ಲಿ ಶೇಕಡಾ ಅರವತ್ತು ಭಾಗ ದೇಶಕ್ಕಾಗಿ ಮುಡಿಪಿಟ್ಟವರು. ನವ ಭಾರತದ ಕನಸನ್ನು ಸಾಕಾರಗೊಳಿಸುವ ಕೆಲಸವನ್ನು ಮುಂದಿನ ಉದ್ಯಮಿಗಳಾದರೂ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಎಂ.ಬೈರೇಗೌಡರು, ಲಕ್ಕಸಂದ್ರ ಮಹದೇವು, ಆರೋಗ್ಯ ಇಲಾಖೆಯ ಸುರೇಶ್, ಸಮಾಜ ಸೇವಕಿ ವೀಣಾ, ನಂಜುಂಡಿ ಬಾನಂದೂರು, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
