ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ನೀಡುವ ಪರಿಣಾಮ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲು ಕಾರಣವಾಗುತ್ತದೆ ಎಂದು ಧಾರವಾಡದಲ್ಲಿ ಶಾಸಕ ಮತ್ತು ವಿರೋಧ ಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನಗರದ ಕೆಲಗೇರಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು ಹುಬ್ಬಳ್ಳಿಯ ತೋಳನಕೆರೆ ಅಭಿವೃದ್ಧಿ ಮಾಡಿದಂತೆ ಕೆಲಗೇರಿ ಕೆರೆಯನ್ನೂ ಅಭಿವೃದ್ಧಿಗೊಳಿಸಲು ಯೋಜನೆಯ ಮಾಡಲಾಗಿದೆ. ಅದಕ್ಕಾಗಿ ಸುಮಾರು 50 ಕೋಟಿ ಹಣ ಖರ್ಚಾಗಬಹುದು. ಈಗಾಗಲೇ 11 ಕೋಟಿ ಅನುದಾನ ಈ ಕೆರೆ ಅಭಿವೃದ್ಧಿಗೆ ಎತ್ತಿಡಲಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಸರ್ಕಾರ ಕಡಿಮೆ ಅನುದಾನ ಸಿಗುವ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದರು.
ಇದನ್ನು ಓದಿದ್ದೀರಾ? ‘ಬಸವಣ್ಣ ಸಾಂಸ್ಕೃತಿಕ ನಾಯಕ’ನೆಂದು ಘೋಷಿಸಿದ್ದೇ ಮನುವಾದಿಗಳಿಗೆ ತಳಮಳ!
ಕೆರೆಯ ಸ್ವಶ್ಚತೆಗಾಗಿ ಎಲ್ಲರ ಸಹಕಾರ ಮುಖ್ಯವಾಗುತ್ತದೆ. ಅಂತರಂಗೆಯಿಂದ ಕೆರೆಯು ನಾಶಗೊಳಿಸುವುದಿಲ್ಲ. ಬದಲಾಗಿ ಕೆರೆಯು ಸ್ವಶ್ಚವಾಗಿರಲು ಸಹಕಾರಿ ಆಗುತ್ತದೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದನಂತರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಿದೆ. ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ಅನುದಾನ ನೀಡುತ್ತದೆ. ಹಾಗಾಗಿ ಬಿಜೆಪಿ ಶಾಸಕರ ಕೆಲಸಗಳು ನಿಧಾನಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಕೆಲೆಗೇರಿ ಕೆರೆಯನ್ನು ದೇಶವೇ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಲಾಗುವುದು ಎಂದರು.