ಬೆಳಗಾವಿಯ ಖಾನಾಪುರ ತಾಲೂಕಿನ ಜಾಂಬೋಟಿ ಹತ್ತಿರವಿರುವ ಅಮಟೆ ಬಳಿ ಕಂಟೇನರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕೋಡಿ ನಗರದ ನಿವಾಸಿ ನಿಖಿಲ ಬಾಬಾಬಗೌಡ ಪಾಟೀಲ (19) ಮೃತ ಯುವಕನೆಂದು ಗುರುತಿಸಲಾಗಿದೆ. ಮತ್ತೊಬ್ಬ ಯುವಕ ನಿಖಿಲ್ ರಮೇಶ ಬೆಳಕೋಡ ಮೂಡಲಗಿ ಪಟ್ಟಣದ ನಿವಾಸಿಯಾಗಿದ್ದು ಆತನಿಗೆ ಗಂಭೀರ ಗಾಯಗಳಾಗಿವೆ.
ಇದನ್ನು ಓದಿದ್ದೀರಾ? ‘ಬಸವಣ್ಣ ಸಾಂಸ್ಕೃತಿಕ ನಾಯಕ’ನೆಂದು ಘೋಷಿಸಿದ್ದೇ ಮನುವಾದಿಗಳಿಗೆ ತಳಮಳ!
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.