ನಟ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸುದೀಪ್ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ.
ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್ರ ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ. ಸುದೀಪ್ ಅವರ ತಾಯಿಯವರು ಕಳೆದ ಕೆಲ ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇಶಾ ಫೌಂಡೇಷನ್ ಆಶ್ರಮದ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಮಾಜಿ ಉದ್ಯೋಗಿಯಿಂದ ಗಂಭೀರ ಆರೋಪ
ಸುದೀಪ್ ಅವರ ತಾಯಿ ಉಡುಪಿಯ ಕಾರ್ಕಳ ಮೂಲದವರು, ಒಮ್ಮೆ ತಮ್ಮ ತಾಯಿ ಬಗ್ಗೆ ಮಾತನಾಡಿದ್ದ ಸುದೀಪ್, “‘ನನ್ನ ತಾಯಿ ಕಾರ್ಕಳ ಮೂಲದವರು, ಅವರ ಮಾತೃಭಾಷೆ ತುಳು” ಎಂದಿದ್ದರು

ಕನ್ನಡ ಚಿತ್ರ ರಂಗಕ್ಕೆ ಒಬ್ಬ ಕಲಾ ಚಕ್ರವರ್ತಿಯನ್ನು ಭೂಮಿಗೆ ಜನ್ಮ ನೀಡಿ ಚಿರ ನಿದ್ರೆಗೆ ಜಾರಿದ ಕಿಚ್ಚ ಸುದೀಪ್ ತಾಯಿಗೆ ನಮ್ಮ 💐😭 ನಮನ.
ಸುದೀಪ್ ರವರ ತಾಯಿಯ ನಿಧನಕ್ಕೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳು. ಹಾಗೂ. ತಾಯಿಯನ್ನು ಕಳೆದುಕೊಂಡಿರುವ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತನು ಕರುಣಿಸಲಿ ಎಂದು
ಬೇಡುವೆವು.
ಕೆ. ಎನ್. ಅಣ್ಣಪ್ಪ
ಜಿಗಳಿ ಗ್ರಾಮ
ಹರಿಹರ ತಾಲ್ಲೂಕು.
ಮೊ 9901321886
ಕಿಚ್ಚನಂತಹ ಕನ್ನಡ ನಾಡಿನ ಕುಡಿಯನ್ನು ಬೆಳೆಸಿ ಹೆಮ್ಮ ರವಾಗಿ ಮಾಡಿ ಈ ನಾಡು ನುಡಿಗೆ ಬಳುವಳಿಯನ್ನಾಗಿ ಕೊಟ್ಟ ಮಹಾತಾಯಿ ನೀನು. ನಿನಗೆ ಸಾವಿರ ಸಾಷ್ಟಾಂಗ ನಮಸ್ಕಾರಗಳು ತಾಯಿ
Om shanthi 🙏🙏🙏🙏