ಭಾರತದ 20ಕ್ಕೂ ಹೆಚ್ಚು ವಿಮಾನಗಳಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. ಇಂಡಿಗೊ, ವಿಸ್ತಾರ, ಏರ್ ಇಂಡಿಯಾ ಹಾಗೂ ಆಕಾಶ ಏರ್ ಸಂಸ್ಥೆಯ ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡಿಗೊ ಸಂಸ್ಥೆಯ 6E58 ವಿಮಾನ (ಜೆಡ್ಡಾ–ಮುಂಬೈ), 6E87 (ಕೋಯಿಕೋಡ್– ದಮಾಮ್), 6E11 (ದೆಹಲಿ– ಇಸ್ತಾನ್‌ಬುಲ್), 6E17 (ಮುಂಬೈ– ಇಸ್ತಾನ್‌ಬುಲ್), 6E133 (ಪುಣೆಯಿಂದ – ಜೋಧಪುರ), ಮತ್ತು 6E112 (ಗೋವಾ–ಅಹಮದಾಬಾದ್) ವಿಮಾನ ಹಾಗೂ ವಿಸ್ತಾರ ಸಂಸ್ಥೆಯ UK25 (ದೆಹಲಿ–ಫ್ರಾಂಕ್‌ಫರ್ಟ್), UK106 (ಸಿಂಗಪುರ–ಮುಂಬೈ), UK146 (ಬಾಲಿ–ದೆಹಲಿ), UK116 (ಸಿಂಗಪುರ–ದೆಹಲಿ), UK110 (ಸಿಂಗಪುರ–ಪುಣೆ) ಮತ್ತು UK107 (ಮುಂಬೈ–ಸಿಂಗಪುರ) ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾ ಮತ್ತು ಆಕಾಶ ಏರ್ ಸಂಸ್ಥೆಯ ಕೆಲವು ವಿಮಾನಗಳಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ, ತುರ್ತು ಪ್ರತಿಕ್ರಿಯೆ ತಂಡಗಳು ವಿಮಾನಗಳಲ್ಲಿ ಪರಿಶೀಲನೆ ನಡೆಸುತ್ತಿವೆ.
ಈ ವಾರ, ಈವರೆಗೆ ಸುಮಾರು 90ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಎಲ್ಲವೂ ಹುಸಿ ಬೆದರಿಕೆ ಎಂದು ತಿಳಿದುಬಂದಿದೆ.