ಧಾರವಾಡ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಈ ಕುರಿತು ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ, ಪರಿಶೀಲನೆ ನಡೆಸಿ, ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಗ್ರಾಮಗಳ ರೈತರನ್ನು, ಸಾರ್ವಜನಿಕರನ್ನು ಭೇಟಿಯಾಗಿ ವಿವಿಧ ಮನವಿ ಸ್ವೀಕರಿಸಿದರು. ಬೆಳೆಹಾನಿ ಬಗ್ಗೆ ತುರ್ತಾಗಿ ಜಂಟಿ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಹಾಗೂ ಮನೆ ಹಾನಿ ಮತ್ತು ಮನೆಗಳಿಗೆ ನೀರು ನುಗ್ಗಿ ಹಾನಿ ಆಗಿರುವ ಬಗ್ಗೆ ವರದಿ ಸಲ್ಲಿಸಿ, ಅದಕ್ಕೆ ಪರಿಹಾರ ಕ್ರಮ ಜರುಗಿಸಲು ಗ್ರಾಮ ಪಂಚಾಯತ ಮತ್ತು ತಹಶೀಲ್ದಾರರಿಗೆ ಸೂಚಿಸಿದರು.
ತುಪ್ಪರಿಹಳ್ಳದ ನೆರೆ ಹಾವಳಿಯಿಂದ ಶಿರೂರ ಗ್ರಾಮದ ಶಾಲೆ ಆವರಣ ಹಾಗೂ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ಬಂದಿದೆ. ಇದನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಬೇಕು. ಹಾಳಾಗಿರುವ ರಸ್ತೆ ದುರಸ್ತಿ ಮಾಡಬೇಕು. ಹೆಚ್ಚುವರಿ ಆಗಿ ಹೆಸರು ಕಾಳು ಖರೀದಿ ಮಾಡಬೇಕು ಮತ್ತು ಬೆಳೆ ಹಾನಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಶಾಲಾ ಆವರಣ, ಮನೆಗಳಿಗೆ ನೀರು ಬಂದಿರುವ ಕುರಿತು ಸ್ವಚ್ಛತೆ ಕೈಗೊಳ್ಳಲು ತಾಲ್ಲೂಕು ಪಂಚಾಯತ ಇಓ ಹಾಗೂ ಬಿಇಓ ಅವರಿಗೆ ಈಗಾಗಲೇ ಪಿ.ಆರ್.ಇ.ಡಿ ವಿಭಾಗಗಳಿಗೆ ತಿಳಿಸಲಾಗಿದೆ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಿ ಅದರ ವರದಿಯನ್ನು ಗ್ರಾಮ ಪಂಚಾಯತ್, ತಹಶೀಲ್ದಾರ ಕಚೇರಿ, ರೈತ ಸಂಪರ್ಕ ಕೇಂದ್ರ, ಜಿಲ್ಲಾಧಿಕಾರಿಗಳ ಕಚೇರಿ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗುತ್ತದೆ. ಹೆಸರು ಬಿಟ್ಟು ಹೋಗಿದ್ದರೆ ರೈತರು ಆಕ್ಷೇಪಣೆ ಸಲ್ಲಿಸಲು ಒಂದು ವಾರದ ಅವಕಾಶ ನೀಡಲಾಗಿರುತ್ತದೆ. ರೈತರು ಪರಿಶೀಲಿಸಿ, ತಮ್ಮ ಹೆಸರು, ಜಮೀನು ಬೆಳೆಹಾನಿ ವಿವರ ಪ್ರಕಟವಾಗಿರದಿದ್ದಲ್ಲಿ ಮನವಿ ಆಕ್ಷೇಪಣೆ ಸಲ್ಲಿಸಬೇಕು. ಮರು ಸಮೀಕ್ಷೆ ಮಾಡಿ ಅರ್ಹವಿದ್ದಲ್ಲಿ ಪಟ್ಟಿಗೆ ಸೆರ್ಪಡೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಅಮ್ಮಿನಭಾವಿ-ಶಿರೂರ ರಸ್ತೆ ನಿರ್ಮಾಣದ ಬಗ್ಗೆ ದೂರುಗಳಿದ್ದಲ್ಲಿ ಲಿಖಿತವಾಗಿ ಸಲ್ಲಿಸಿದರೆ ಪರಿಶೀಲಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಶಿರೂರ ಗ್ರಾಮ ಪಂಚಾಯತ ಉಪಾಧ್ಯಕ್ಷ ಸಂಗನಗೌಡ ತೋಟದ, ಸದಸ್ಯ ಈರಣ್ಣ ಕಡೆಮನಿ, ರೈತ ಮುಖಂಡ ಮಲ್ಲನಗೌಡ ಸೇರಿದಂತೆ ಇತರರು ಇದ್ದರು.
ಇದನ್ನು ಓದಿದ್ದೀರಾ? ಧಾರವಾಡ | ಧಾರಾಕಾರ ಮಳೆಗೆ ಮನೆ ಕುಸಿತ: ಮಹಿಳೆ ಸಾವು
ಹಾನಿಗೆ ಒಳಗಾದ ಬೆಳೆಗಳನ್ನು ಸರಿಯಾಗಿ ಸಮೀಕ್ಷೆ ಮಾಡಿ, ದಾಖಲಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು; ಅಮ್ಮಿನಭಾವಿ, ಶಿರೂರು, ಮೊರಬ, ಅರೇಕುರಹಟ್ಟಿ, ಯಮನೂರು, ಕಿರೆಸೂರ, ತೀರ್ಲಾಪುರ ವಿವಿಧ ಗ್ರಾಮಗಳಿಗರ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಮತ್ತು ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದಲ್ಲಿ ಮಳೆ ಹೆಚ್ಚಾಗಿ ಮನೆಗಳು ಗೋಡೆ ಕುಸಿತ