ತಾಯಿಯ ನೆನೆದು ಭಾವುಕ ಪತ್ರ ಬರೆದ ನಟ ಸುದೀಪ್

Date:

Advertisements

ನ್ಯುಮೋನಿಯದಿಂದ ಬಳಲುತ್ತಿದ್ದ ನಟ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ನಿಧನರಾದರು. ಅ.20ರಂದು ಸಂಜೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು.

ತಮ್ಮ ತಾಯಿಯನ್ನು ಕಳೆದುಕೊಂಡಿರುವ ಸುದೀಪ್ ಭಾವುಕರಾಗಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪತ್ರವನ್ನು ಬರೆದುಕೊಂಡಿದ್ದಾರೆ.

ಸುದೀಪ್‌ ಪತ್ರದ ಸಾರಾಂಶ

Advertisements

“ನನ್ನ ತಾಯಿ, ಯಾವುದೇ ಪಕ್ಷಪಾತವಿಲ್ಲದ, ಅತ್ಯಂತ ಪ್ರೀತಿಯ, ಕ್ಷಮಿಸುವ, ಕಾಳಜಿ ವಹಿಸುವ ಮತ್ತು ಪ್ರೀತಿಯನ್ನು ನೀಡುವ ನನ್ನ ಬದುಕಿನಲ್ಲಿ ಮೌಲ್ಯಯುತವಾದನ್ನು ತೋರಿಸಿದವಳು ಮತ್ತು ಯಾವಾಗಲೂ ಅದನ್ನು ಪಾಲಿಸುವ ಮೌಲ್ಯವನ್ನು ಹೇಳಿಕೊಟ್ಟ ಜೀವವದು. ಬದುಕಿನಲ್ಲಿ ನನ್ನ ಪಕ್ಕದಲ್ಲಿಯೇ ಇದ್ದ ನನ್ನಮ್ಮ ಮಾನವ ರೂಪದ ನಿಜವಾದ ದೇವರಾಗಿದ್ದರು.

ನನಗೆ ಯಾವುದೇ ಸಡಗರ ಎಂದರೆ ಅದು ನನ್ನ ತಾಯಿ. ನನ್ನ ಮೊದಲ ಅಭಿಮಾನಿ, ಹಿತೈಷಿ ಎಲ್ಲವೂ ಅವರಾಗಿದ್ದರು. ಕೆಟ್ಟ ಕೆಲಸವನ್ನೂ ಇಷ್ಟಪಟ್ಟವರು, ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ತಟ್ಟಿ ಸಂಭ್ರಮಿಸಿದವರು. ಈಗ ಆ ಎಲ್ಲ ಸುಂದರ ಘಳಿಗೆಗಳು ನೆನಪು ಮಾತ್ರ.

ನಾನೀಗ ಅನುಭವಿಸುತ್ತಿರುವ ಸಂಕಟವನ್ನು ಹಂಚಿಕೊಳ್ಳಲು ನನ್ನಲ್ಲಿ ಪದಗಳಿಲ್ಲ. ಅವರಿಲ್ಲದ ಶೂನ್ಯವನ್ನು ಒಪ್ಪಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ಕೇವಲ 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು.
ಪ್ರತಿನಿತ್ಯವೂ ನನ್ನ ಮೊಬೈಲ್‌ಗೆ ಬೆಳಗ್ಗೆ 5.30ಕ್ಕೆ ಮೊದಲ ಸಂದೇಶ ಬರುವುದು ಅದು ನನ್ನ ತಾಯಿಯಿಂದಲೇ. `ಗುಡ್ ಮಾರ್ನಿಂಗ್ ಕಂದ’ ಎಂಬ ಸಂದೇಶ ಬರುತ್ತಿತ್ತು. ಅಮ್ಮನಿಂದ ನನಗೆ ಕೊನೆಯ ಸಲ ಸಂದೇಶ ಬಂದಿದ್ದು, ಅಕ್ಟೋಬರ್ 18ರಂದು. ಮಾರನೇ ದಿನ ಬೆಳಗ್ಗೆ ನಾನು ಬಿಗ್‌ಬಾಸ್ ಮನೆಯ ಸೆಟ್‌ನಲ್ಲಿದ್ದೆ. ಅಂದು ಅಮ್ಮನ ಸಂದೇಶ ನನಗೆ ತಲುಪಲೇ ಇಲ್ಲ. ಕಳೆದ ಹಲವು ವರ್ಷಗಳಿಂದ ನಾನು ಯಾವತ್ತೂ ಸಂದೇಶವನ್ನು ಮಿಸ್ ಮಾಡಿಕೊಂಡವನು ಅಲ್ಲ. ಇದೇ ಮೊದಲ ಬಾರಿಗೆ ಅಮ್ಮ ಸಂದೇಶ ಕಳುಹಿಸಲಿಲ್ಲ.

ಈ ಸುದ್ದಿ ಓದಿದ್ದೀರಾ? ನಟ ಸುದೀಪ್ ತಾಯಿ ಸರೋಜಾ ಸಂಜೀವ್ ನಿಧನ

ನಾನೇ ಅಮ್ಮನ ಮೊಬೈಲ್‌ಗೆ ಸಂದೇಶ ಕಳುಹಿಸಿದೆ. ಕರೆ ಮಾಡಿ ಈ ಕುರಿತು ವಿಚಾರಿಸೋಣವೆಂದರೆ, ಬಿಗ್‌ಬಾಸ್ ಚಿತ್ರೀಕರಣದ ಒತ್ತಡದಲ್ಲಿದ್ದೆ. ಹಾಗಾಗಿ ಸಾಧ್ಯವಾಗಲಿಲ್ಲ. ಶನಿವಾರದ ಬಿಗ್‌ಬಾಸ್ ಎಪಿಸೋಡ್ ಚಿತ್ರೀಕರಣಕ್ಕಾಗಿ ಇನ್ನೇನು ವೇದಿಕೆಯ ಮೇಲೆ ಹತ್ತಬೇಕು ಎನ್ನುವಷ್ಟರಲ್ಲಿ ಅಮ್ಮನಿಗೆ ಹುಷಾರಿಲ್ಲದ, ಅವರು ಆಸ್ಪತ್ರೆಗೆ ದಾಖಲಾಗಿರುವ ಸಂದೇಶ ಬಂತು. ಕೂಡಲೇ ಅಕ್ಕನಿಗೆ ಕರೆ ಮಾಡಿ, ಡಾಕ್ಟರ್ ಜೊತೆ ಮಾತನಾಡಿ ನಾನು ಸ್ಟೇಜ್ ಮೇಲೆ ಹತ್ತಿದೆ.

ನಾನು ಚಿತ್ರೀಕರಣದಲ್ಲಿ ಇರುವಾಗಲೇ ಅಮ್ಮನ ಆರೋಗ್ಯ ಸ್ಥಿತಿ ಗಂಭೀರ ಅಂತ ನನ್ನ ತಂಡದವರು ತಿಳಿಸಿದರು. ಎಂತಹ ಅಸಹಾಯಕ ಸ್ಥಿತಿ ನನ್ನದು. ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶ ನನಗೆ ಎದುರಾಗಿದ್ದು. ಶೂಟಿಂಗ್ ಮಾಡುತ್ತಿರುವಾಗಲೇ ನನ್ನ ತಲೆಯಲ್ಲಿ ಹಲವಾರು ವಿಷಯಗಳು ಚಲಿಸುತ್ತಿದ್ದವು. ಸಾಕಷ್ಟು ಭಯವಿತ್ತು. ಶನಿವಾರದ ಸಂಚಿಕೆ ಮುಗಿಸಲೇಬೇಕು ಎನ್ನುವ ಒತ್ತಡವೂ ಇತ್ತು. ಎಲ್ಲವನ್ನೂ ನಿಭಾಯಿಸಬೇಕಿತ್ತು. ಮನಸ್ಸನ್ನು ಶಾಂತಚಿತ್ತಕ್ಕೆ ತಂದುಕೊಂಡು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟೆ. ಇದೆಲ್ಲವೂ ಸಾಧ್ಯವಾಗಿದ್ದು, ನನ್ನ ತಾಯಿ ಹೇಳಿಕೊಟ್ಟ ಪಾಠದಿಂದ.

ಎಲ್ಲ ಒತ್ತಡವನ್ನೂ ನಿಭಾಯಿಸಿಕೊಂಡು ಶನಿವಾರದ ಎಪಿಸೋಡ್ ಮುಗಿಸಿಕೊಟ್ಟು ಕೂಡಲೇ ಆಸ್ಪತ್ರೆಯತ್ತ ಧಾವಿಸಿದೆ. ನಾನು ಆಸ್ಪತ್ರೆ ತಲುಪುವ ಮುನ್ನವೇ ಅಮ್ಮನನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಅತ್ಯಂತ ನೋವಿನ ಸಂಗತಿ ಅಂದರೆ, ನನ್ನ ತಾಯಿ ಪ್ರಜ್ಞೆಯಲ್ಲಿರುವಾಗ ಕೊನೆಯ ಬಾರಿಗೆ ಅವರನ್ನು ನೋಡಲು ಆಗಲೇ ಇಲ್ಲ. ಅವರು ಕೊನೆಯುಸಿರೆಳೆಯುವ ಮುನ್ನ ಅಮ್ಮ ನೋವಿನಲ್ಲೇ ಸಾಕಷ್ಟು ಹೋರಾಡಿದ್ದಳು. ಕೆಲವೇ ಕೆಲವು ಗಂಟೆಗಳಲ್ಲಿ ಏನೆಲ್ಲ ಬದಲಾವಣೆ ಆಗಿದ್ದವು.

ಅಮ್ಮ ಇಲ್ಲ ಅನ್ನುವುದು ಸತ್ಯ. ಆದರೆ, ವಾಸ್ತವವನ್ನು ಹೇಗೆ ಸ್ವೀಕರಿಸಬೇಕು ಅನ್ನೋದು ಗೊತ್ತಾಗಲಿಲ್ಲ. ಮೊನ್ನೆಯಷ್ಟೇ ಚಿತ್ರೀಕರಣಕ್ಕೆ ಹೊರಡುವ ಮುನ್ನ ಬಿಸಿ ಅಪ್ಪುಗೆಯೊಂದನ್ನು ಕೊಟ್ಟು ಕಳುಹಿಸಿದ್ದರು. ಕೆಲವೇ ಕೆಲವು ಗಂಟೆಗಳಲ್ಲಿ ಇಲ್ಲವಾಗಿ ಹೋದರು. ನಾನು ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ. ಪ್ರಕೃತಿಯು ಈ ಭೂಮಿಯಿಂದ ನನ್ನ ತಾಯಿಯನ್ನು ಕರೆದುಕೊಂಡು ಹೋಗಿದೆ ಎಂದು ಸಮಾಧಾನಿಸಿಕೊಳ್ಳುವೆ. ನನ್ನ ಬದುಕಿನ ಅತ್ಯಂತ ಬೆಲೆಕಟ್ಟಲಾಗದ ಮತ್ತೊಂದು ನನ್ನಿಂದ ಜಾರಿಹೋಗಿದೆ. ನನ್ನ ತಾಯಿ ಶಾಂತಿಯಿಂದಲೇ ತುಂಬಿರೋ ಮಡಿಲನ್ನು ಸೇರಿದ್ದಾರೆ ಎಂದು ಖಾತ್ರಿಯಿದೆ.

ಅಮ್ಮನಿಗೆ ಗೌರವ ಸಲ್ಲಿಸಲು ಆಗಮಿಸಿದ್ದ ಪ್ರತಿಯೊಬ್ಬರಿಗೂ ನಾನು ಋಣಿ ಮತ್ತು ಧನ್ಯವಾದಗಳನ್ನು ತಿಳಿಸುತ್ತೇನೆ. ಇದು ನಿಜವಾಗಿಯೂ ನಿಮ್ಮೆಲ್ಲರ ಕರುಣೆಯಾಗಿತ್ತು. ನನ್ನ ತಾಯಿ ಆತ್ಮಕ್ಕೆ ಶಾಂತಿ ಕೋರಿದ ಎಲ್ಲರಿಗೂ ಧನ್ಯವಾದಗಳು

ಅಮ್ಮ, ಚೆನ್ನಾಗಿ ವಿಶ್ರಾಂತಿ ಪಡೆಯಿರಿ
ನಾನು ನಿಮ್ಮನ್ನು ಸದಾ ಪ್ರೀತಿಸುತ್ತೇನೆ ಮತ್ತು ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದೇನೆ.
-ದೀಪು

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X