ಕೊಡಗು | ಬಿಜೆಪಿ ಭದ್ರಕೋಟೆ ಛಿದ್ರ; ದಶಕಗಳ ಬಳಿಕ ಕಾಂಗ್ರೆಸ್ ತೆಕ್ಕೆಗೆ ಜಿಲ್ಲೆ

Date:

Advertisements
  • ಅಪ್ಪಚ್ಚು ರಂಜನ್‌ ಅಧಿಪತ್ಯ ಅಂತ್ಯ
  • ಬೋಪಯ್ಯಗೆ ಬ್ರೇಕ್‌ ಹಾಕಿದ ಕಾಂಗ್ರೆಸ್

ಬಿಜೆಪಿಯ ಭದ್ರಕೋಟೆ ಎನಿಸಿದ್ದ ಕೊಡಗಿನಲ್ಲಿ ಈ ಬಾರಿ ಅಚ್ಚರಿ ಎಂಬಂತೆ ʻಕೈʼ ಮೇಲುಗೈ ಸಾಧಿಸಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್‌ ಅಧಿಪತ್ಯಕ್ಕೆ ಮಂಥರ್ ಗೌಡ ಅಂತ್ಯ ಹಾಡಿದ್ದಾರೆ. ಮತ್ತೊಂದೆಡೆ ವಿರಾಜಪೇಟೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ಸರದಾರ ಕೆ.ಜಿ ಬೋಪಯ್ಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್‌ನ ಎ.ಎಸ್‌ ಪೊನ್ನಣ್ಣ ಬ್ರೇಕ್‌ ಹಾಕಿದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ 7ನೇ ಬಾರಿ ಚುನಾವಣಾ ಕಣದಲ್ಲಿದ್ದ 5 ಬಾರಿಯ ಶಾಸಕ ಅಪ್ಪಚ್ಚು ರಂಜನ್, ಕಾಂಗ್ರೆಸ್‌ನ ಯುವ ನಾಯಕ ಮಂಥರ್ ಗೌಡ ವಿರುದ್ಧ 4,520 ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ವಿಶೇಷವೆಂದರೆ ಪಕ್ಕದ ಅರಕಲಗೂಡು ಕ್ಷೇತ್ರದಲ್ಲಿ ಮಂಥರ್‌ ಗೌಡ ಅವರ ತಂದೆ ಮಾಜಿ ಸಚಿವ ಎ. ಮಂಜು ಅವರು ಜೆಡಿಎಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

Advertisements

ಡಾ. ಮಂಥರ್ ಗೌಡ 53,767 ಮತಗಳನ್ನು ಪಡೆದರೆ ಅಪ್ಪಚ್ಚು ರಂಜನ್ 48,975 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಕ್ಷೇತ್ರದಲ್ಲಿದ್ದ ಉಳಿದ ಎಲ್ಲ ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ. ಜೆಡಿಎಸ್​ನಿಂದ ಸ್ಪರ್ಧಿಸಿದ್ದ ನಾಪಂಡ ಮುತ್ತಪ್ಪ ಕೇವಲ 4,642 ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಹಾಲಿ ಶಾಸಕರ ವಿರುದ್ಧದ ಜನಾಭಿಪ್ರಾಯ, ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಹಾಗೂ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಮಡಿಕೇರಿ; ವಿಧಾನಸಭಾ ಚುನಾವಣೆ 2023 ಫಲಿತಾಂಶ ವಿವರ:

  • ಕಾಂಗ್ರೆಸ್: ಡಾ. ಮಂಥರ್ ಗೌಡ– 53,767 ಮತಗಳು
  • ಬಿಜೆಪಿ: ಡಾ. ಅಪ್ಪಚ್ಚುರಂಜನ್– 48,975 ಮತಗಳು
  • ಜೆಡಿಎಸ್: ನಾಪಂಡ ಮುತ್ತಪ್ಪ– 4,642 ಮತಗಳು
  • ಗೆಲುವಿನ ಅಂತರ: 4520 ಮತಗಳು

ಈ ಸುದ್ದಿ ಓದಿದ್ದೀರಾ?: ಹಾಸನ | ಬಿಜೆಪಿಗೆ ಶಾಕ್; ಇದ್ದ ಒಂದು ಕ್ಷೇತ್ರವನ್ನು…

ಬೋಪಯ್ಯಗೆ ಬ್ರೇಕ್‌ ಹಾಕಿದ ಕಾಂಗ್ರೆಸ್!

ವಿರಾಜಪೇಟೆಯಲ್ಲಿ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದ ಹಾಲಿ ಶಾಸಕ ಮತ್ತು ಮಾಜಿ ಸ್ಪೀಕರ್‌ ಕೆ.ಜಿ ಬೋಪಯ್ಯ ಸೋಲು ಕಂಡಿದ್ದಾರೆ. ಇಲ್ಲಿ ಎ.ಕೆ ಸುಬ್ಬಯ್ಯ ಅವರ ಪುತ್ರ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್‌ ಪೊನ್ನಣ್ಣ 4,291 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿನ 20 ವರ್ಷಗಳ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಕಾಂಗ್ರೆಸ್ ಬ್ರೇಕ್‌ ಹಾಕಿದೆ.

ಕೊಡಗು ಜಿಲ್ಲೆಯಲ್ಲಿ 4,56,313 ಮತದಾರರ ಪೈಕಿ ಈ ಬಾರಿ 3,41,046 ಮಂದಿ ಮತ ಚಲಾಯಿಸುವ ಮೂಲಕ ಒಟ್ಟು ಶೇ.74.74 ಮತದಾನವಾಗಿತ್ತು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹೊರತು ಪಡಿಸಿ ಜಿಲ್ಲೆಯಲ್ಲಿ ಇತರೆ 10 ರಾಜಕೀಯ ಪಕ್ಷಗಳ ಒಟ್ಟು 29 ಮಂದಿ ಕಣದಲ್ಲಿದ್ದರು..  

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X