ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಮೇಲೆ ಲಯೇ ಬಿಜೆಪಿ ಭ್ರಷ್ಟಾಚಾರ ಜನತಾ ಪಾರ್ಟಿಯಾಗಿದೆ. ಎರಡು ಬಾರಿ ಮುಖ್ಯಮಂತಿಯಾದ ಯಡಿಯೂರಪ್ಪ ಭ್ರಷ್ಟಾಚಾರಗಳ ಕಾರಣದಿಂದಲೇ ಐದು ವರ್ಷಗಳ ಅವಧಿ ಪೂರೈಸದೆ ರಾಜೀನಾಮೆ ನೀಡಬೇಕಾಯಿತು. ಅವರು ಕಣ್ಣೀರಧಾರೆಗೆ ಅವರ ಮಕ್ಕಳೇ ಕಾರಣ ಎಂದು ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಬಹಿರಂಗ ಚರ್ಚೆ ಬನ್ನಿ ಎಂದು ಪಂಥಾಹ್ವಾನ ನೀಡಿದರಲ್ಲದೆ, ಬಿಜೆಪಿ ರಾಘವೇಂದ್ರ, ವಿಜಯೇಂದ್ರ ಬಂದ ನಂತರ ಭ್ರಷ್ಟಾಚಾರ ಜನತ ಪಕ್ಷವಾಗಿದೆ ಎಂದು ದೂರಿದರು.
ಬಿ.ವೈ. ರಾಘವೇಂದ್ರ ಅವರೇ ನೀವು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಕೋಟಿ ರೂ.ಗಳ ಬೇನಾಮಿ ಆಸ್ತಿಗಳನ್ನು ಟ್ರಸ್ಟ್‌ಗಳ ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಕೊಂಡಿದ್ದೀರಾ. ಹಣದ ಮೂಲವನ್ನು ತಾವು ಪ್ರಕಟ ಮಾಡಬಹುದಾ? ಭ್ರಷ್ಟಾಚಾರದ ಆರೋಪದ ಮೇಲೆ ಒಬ್ಬ ಹೋರಾಟಗಾರನ ಅಂತ್ಯ ಆಗಿದೆ. ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವಂತೆ ಯಡಿಯೂರಪ್ಪ ಅವರನ್ನು ಬಲಿತೆಗೆದುಕೊಂಡಿದ್ದು ಬಿಜೆಪಿಯ ಭ್ರಷ್ಟಾಚಾರವೇ ಹೊರತು, ಬೇರಾವ ಜನಾಂದೋಲನಗಳಲ್ಲ. ತಮ್ಮ ಮತ್ತು ಕುಟುಂಬದ ಭ್ರ್ರಷ್ಟಾಚಾರದ ಕಾರಣದಿಂದ ಹೈಕಮಾಂಡ್ ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ದ ಮಾತು ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದರು.
ಮಹಾಸಭಾ ಸಭೆ ಗೊಂದಲ:
ಜಾತಿಗಣತಿ ಕುರಿತಂತೆ ಆಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾ ಕರೆದಿರುವ ಸಭೆ ಗೊಂದಲದಿಂದ ಕೂಡಿದೆ ಎಂದು ಆಯನೂರು ಮಂಜು ನಾಥ್ ಪ್ರತಿಕ್ರಿಯಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾದ ಅಧ್ಯಕ್ಷರಾಗಿ ಮತ್ತು ಕಾಂಗ್ರೆಸ್ ನ ಮುಖಂಡರಾಗಿಯೂ ಇದ್ದಾರೆ. ಅವರು ಒಂದು ಸ್ಪಷ್ಟ ನಿಲುವು ಹೊಂದಬೇಕು. ಜಾತಿಗಣತಿ ಆಗ ಬೇಕೆಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ. ಇದಕ್ಕೆ ಎಲ್ಲರೂ ಬದ್ದರಾಗಿರಬೇಕು. ಜಾತಿಗಣತಿ ಬಗ್ಗೆ ವೀರಶೈವ- ಲಿಂಗಾಯತ ಮಹಾಸಭೆ ಕರೆದಿರುವ ಸಭೆಯ ಹಿಂದೆ ಬಿಜೆಪಿಯ ಕೈವಾಡವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಇದಾಗಿದೆ ಎಂದರು.
ವೀರಶೈವ-ಲಿಂಗಾಯಿತ ಮಹಾಸಭಾ ನಾವು ಹಿಂದೂಗಳಲ್ಲ. ನಮ್ಮದು ಲಿಂಗಾಯಿತ ಧರ್ಮ ಎಂದು ಈಗಾಗಲೆ ನಿರ್ಧಾರ ತೆಗೆದುಕೊಂಡಿದೆ. ನಾಳೆ ನಡೆಯಲಿರುವ ವೀರಶೈವ-ಲಿಂಗಾಯಿತ ಮಹಾಸಭಾದ ಸಭೆಗೆ ಹೋಗುವ ಮುನ್ನ ಯಡಿಯೂರಪ್ಪ ಮತ್ತವರ ಮಕ್ಕಳು ಜಾತಿ ಗಣತಿ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯಿತ ಅಂತರೆ ಬರೆಸುತ್ತೀರೋ? ಅಥವಾ ಬಿಜೆಪಿಯ ಹಿಂದೂ ಎಂದು ಬರೆಸುತ್ತೀರೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜಾತಿಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾ ಬಂದಿರುವ ಯಡಿಯೂರಪ್ಪ ಕುಟುಂಬ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುತ್ತಿದೆ. ಅವರು ಇದಕ್ಕೆ ಉತ್ತರ ಕೊಡಬೇಕು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ, ಶಂಕರಘಟ್ಟ ರಮೇಶ್, ಶಿ.ಜು. ಪಾಶಾ, ಜಿ. ಪದ್ಮನಾಭ್, ಸೋಮಶೇಖರ್, ಬಾಲಾಜಿ ಇತರರು ಉಪಸ್ಥಿತರಿದ್ದರು.
