ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಜಾತಿ ನಿಂದನೆ, ಕೊಲೆ ಬೆದರಿಕೆಯ ಆರೋಪದಲ್ಲಿ ಪ್ರೀತಂ ಮತ್ತು ಮನೋಜ್ ಜೈಲು ಪಾಲಾಗಿದ್ದಾರೆ. ಸಂತ್ರಸ್ತ ಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ ಹಿನ್ನಲೆಯಲ್ಲಿ, ಆರೋಪಿ ಪ್ರೀತಂನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಕರಣದ ವಿವರಗಳು: 2024ರ ಅಕ್ಟೋಬರ್ 19ರಂದು ಬೆಳಗ್ಗೆ 10.30ರ ಸುಮಾರಿಗೆ, ಹಾನುಬಾಳು ಗ್ರಾಮದಲ್ಲಿ ಸಂತ್ರಸ್ತ ಕುಮಾರ್ ನಿಂತಿದ್ದಾಗ, ಬಣಾಲು ಗ್ರಾಮದ ಮನೋಜ್ ಎಂಬಾತನು “ನೀನು ನಮ್ಮ ಹೋಸ್ಟ್‌ಗೆ ಯಾಕೆ ಕಾರು ಕಳುಹಿಸುತ್ತಿಲ್ಲ?” ಎಂದು ಕೇಳಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾನೆ. ಈ ಘಟನೆ ನಂತರ, ಕುಮಾರ್ ಅವರಿಗೆ ತೀವ್ರ ಆಘಾತ ಮತ್ತು ಎದೆನೋವು ಉಂಟಾಯಿತು.
ಆದೇ ದಿನ ಮಧ್ಯಾಹ್ನ 2.25ರ ಹೊತ್ತಿಗೆ, ಕುಮಾರ್ ಅವರು ಚಿಕಿತ್ಸೆಗಾಗಿ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾಗ, ಮನೋಜ್‌ನ ಸ್ನೇಹಿತ ಪ್ರೀತಂ ಅಲ್ಲಿ ಬಂದು, ಮತ್ತೆ ಜಾತಿ ನಿಂದನೆ ಮಾಡಿ, “ಇನ್ನೊಂದು ಬಾರಿ ಸಿಕ್ಕರೆ ನಿನ್ನನ್ನು ಕೊಲೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದನೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪೋಲೀಸರ ಕಾರ್ಯಾಚರಣೆ: ಪ್ರೀತಂ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿದ್ದರೂ, ಅವರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲು ಬಂದಿದ್ದರು. ಈ ವೇಳೆ, ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದರು.
ಶಾಸಕ ಸಿಮೆಂಟ್ ಮಂಜು ಅವರಿಗೂ ನಿಂದನೆ: ಪೊಲೀಸರು ಪ್ರೀತಂನನ್ನ ಬಂಧಿಸುವ ಮುನ್ನ, ಪೊಲೀಸ್ ಠಾಣೆಗೆ ಬರುವಂತೆ ಪತ್ರಕರ್ತರನ್ನು ಆಹ್ವಾನಿಸುವ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜುರವರನ್ನು ಏಕವಚನದಲ್ಲಿ ನಿಂದಿಸಿ ಮಾತನಾಡಿರುವ ಒಂದು ಆಡಿಯೋ ವೈರಲ್ ಆಗಿದೆ.
ಈ ಸುದ್ದಿ ಓದಿದ್ದೀರಾ? ತುರುವೇಕೆರೆ | ನೊಳಂಬ ಲಿಂಗಾಯತ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಕೆರಗೋಡಿ ರಂಗಾಪುರ ಶ್ರೀ ಆಗ್ರಹ
“ಶಾಸಕ ಸಿಮೆಂಟ್ ಮಂಜು, ಸಿಮೆಂಟ್ ಮಾರಲು ಮಾತ್ರ ಯೋಗ್ಯ. ಆಡಳಿತ ನಡೆಸುವ ಯೋಗ್ಯತೆ ಇಲ್ಲ,
ನಾಲಾಯಕ್, ಯೋಗ್ಯತೆ ಇಲ್ಲದ ಮನುಷ್ಯ, ದನ ಕಾಯುವ ಯೋಗ್ಯತೆಯು ಇಲ್ಲ, ಗಾಂಜಾ ದಂಧೆ ವಿರುದ್ಧ ಒಂದು ಹೇಳಿಕೆ ಕೊಡುತ್ತಿಲ್ಲ. ಚಾಲೆಂಜ್ ಮಾಡುತ್ತೇನೆ ಮುಂದಿನ ಬಾರಿ ಗೆಲ್ಲಲು ಬಿಡುವುದಿಲ್ಲ. ಸಾಮಾನ್ಯ ಜ್ಞಾನವಿಲ್ಲ, ಮುಂದೆ ನನಗೇನಾದರೂ ಆದರೆ ಶಾಸಕ ಹೊಣೆ, ಮುರಳಿ ಮೋಹನ್‌ಗೆ ಶಾಸಕ ಹೆದರಿ ಸಾಯುತ್ತಾನೆ, ಎಂಎಲ್ಎ ಯೋಗ್ಯತೆ ಇಷ್ಟೇ, ಪ್ರಯೋಜನ ಇಲ್ಲದ ಎಂಎಲ್ಎ ಎನ್ನುತ್ತ ಕಾಂಗ್ರೆಸ್ ಮುಖಂಡ ಮುರಳಿಯ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾನೆ. ಮುರಳಿ ಮೋಹನ್‌ಗಿಂತಲೂ ಹೆಚ್ಚಿನ ತಪ್ಪು ಶಾಸಕ ಸಿಮೆಂಟ್ ಮಂಜುದು. ಮಂಜುಗೆ ವೋಟು ಕೊಟ್ಟು ತಪ್ಪು ಮಾಡಿದ್ದೇವೆ. ಇವರು ರಾಜೀನಾಮೆ ಕೊಡಬೇಕು” ಎಂಬಂತೆ ಮನಸ್ಸೋ ಇಚ್ಛೆ ಪ್ರೀತಂ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.