ಬಿಜೆಪಿಯ ಹರಕೆ ಕುರಿಯಾದ ಸೋಮಣ್ಣ

Date:

Advertisements

ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ವಸತಿ ಸಚಿವ ವಿ ಸೋಮಣ್ಣ ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸೋಲುಂಡಿದ್ದಾರೆ. ಶಾಸಕನಾಗಿ ವಿಧಾನಸೌಧ ಮೆಟ್ಟಿಲು ಹತ್ತಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರು ಈ ಸೋಲು ಬಿಜೆಪಿಯೇ ಬಯಸಿ ತಂದುಕೊಟ್ಟ ಸೋಲು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರಿನ ಗೋವಿಂದರಾಜ ನಗರವನ್ನು ಪ್ರತಿನಿಧಿಸುತ್ತಿದ್ದ ಸೋಮಣ್ಣ ಅವರು ತಮ್ಮ ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅತ್ಯಂತ ಕಠಿಣ ಚುನಾವಣೆಯನ್ನು ಈ ಬಾರಿ ಎದುರಿಸಿದ್ದರು. ಅಹಿಂದ ಪ್ರಬಲ ನಾಯಕ ಸಿದ್ದರಾಮಯ್ಯ ವಿರುದ್ಧ ವರುಣಾದಲ್ಲಿ ಹಾಗೂ ಕಾಂಗ್ರೆಸ್‌ ಮುಖಂಡ ಪುಟ್ಟರಂಗಶೆಟ್ಟಿ ವಿರುದ್ಧ ಚಾಮರಾಜನಗರ – ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಇದೊಂದು ರೀತಿಯ ಪನಿಶ್ಮೆಂಟ್‌ ಟ್ರಾನ್ಸ್‌ಫರ್‌ ಎಂದು ಹೇಳಲಾಗಿತ್ತು. ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಹೀನಾಯ ಸೋಲು ಕಂಡಿದ್ದಾರೆ.

ಚುನಾವಣೆ ಘೋಷಣೆಯಾದ ಸಮಯದಲ್ಲಿ ವರುಣಾದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ವಿಜಯೇಂದ್ರರನ್ನು ಅಲ್ಲಿಂದ ಕಣಕ್ಕಿಳಿಸಲು ಯಡಿಯೂರಪ್ಪ ಹಿಂದೇಟು ಹಾಕಿದ್ದರು. ವಿಜಯೇಂದ್ರರನ್ನು ಶಿಕಾರಿಪುರದಿಂದ ಕಣಕ್ಕಿಳಿಸಿರುವ ಪಕ್ಷ, ವರುಣಾದಲ್ಲಿ ಕಣಕ್ಕಿಳಿಸಬೇಕೆಂಬ ನಿರ್ಧಾರದಿಂದ ಹಿಂದೆ ಸರಿದಿತ್ತು.

Advertisements

ಅಲ್ಲದೆ, ಚುನಾವಣೆ ವಸ್ತಿಲಿನಲ್ಲಿದ್ದಾಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾದಲ್ಲಿ ಟಿಕೆಟ್ ಘೋಷಿಸಿತ್ತು. ಆ ವೇಳೆಗಾಗಲೇ, ಚುನಾವಣೆಗೆ ಕೇವಲ 25 ದಿನಗಳಷ್ಟೇ ಬಾಕಿ ಇದ್ದವು. ಈ ಕಡಿಮೆ ಅವಧಿಯಲ್ಲಿ ಸೋಮಣ್ಣ ಎರಡೂ ಕ್ಷೇತ್ರಗಳ ಸುಮಾರು 400 ಹಳ್ಳಿಗಳನ್ನು ಸುತ್ತಿ, ಮತ ಯಾಚಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಜೊತೆಗೆ, ವಿಜಯೇಂದ್ರರೇ ವರುಣಾದಲ್ಲಿ ಸ್ಪರ್ಧಿಸುತ್ತಾರೆಂದು ನಿರೀಕ್ಷೆಯಲ್ಲಿದ್ದ ಅಲ್ಲಿನ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿತ್ತು. ಕ್ಷೇತ್ರದಲ್ಲಿ ಪ್ರಚಾರ ಮಾಡಿ, ಮತದಾರರನ್ನು ಒಲಿಸಿಕೊಳ್ಳುವುದಕ್ಕೂ ಮುನ್ನ, ಸೋಮಣ್ಣ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ಮತ್ತು ಉತ್ಸಾಹದಿಂದ ಕೆಲಸ ಮಾಡುವಂತೆ ಸ್ಪೂರ್ತಿ ತುಂಬುವ ಕೆಲಸವನ್ನೂ ಮಾಡಿದ್ದರು. ಅಲ್ಲದೆ, ಒಂದೆಡೆ, ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತರು, ಮತ್ತೊಂದೆಡೆ ಎಸ್‌ಸಿ/ಎಸ್‌ಟಿಗಳು ಮತ್ತು ಇತರ ಸಮುದಾಯಗಳನ್ನು ಬಿಜೆಪಿಯತ್ತ ಸೆಳೆಯಲು ಸೋಮಣ್ಣ ಭಾರೀ ಕಸರತ್ತು ನಡೆಸಿದ್ದರು. ಆದರೆ, ಅದಾವುದೂ ಫಲಿಸಲಿಲ್ಲ.

ಈ ಸುದ್ದಿ ಓದಿದ್ದೀರಾ?: ಕರ್ನಾಟಕ ಚುನಾವಣೆ 2023 | ಅಹಂಕಾರಿಗಳಿಗೆ ಅಂಕುಶ ಹಾಕಿದ ಮತದಾರ

ವರುಣಾವನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯ ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ಸಿದ್ದರಾಮಯ್ಯ 1,19,430 ಮತಗಳನ್ನು ಪಡೆದು ಜಯಭೇರಿ ಬಾರಿಸಿದರೆ, ಸೋಮಣ್ಣ 73,424 ಮತಗಳನ್ನು ಪಡೆದು ಭಾರೀ ಅಂತರದಲ್ಲಿ ಸೋಲುಂಡಿದ್ದಾರೆ.

ಅಂತೆಯೇ, ಚಾಮರಾಜನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತ, ಉಪ್ಪಾರ ಸಮುದಾಯದ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧವೂ ಸೋಮಣ್ಣ ಭಾರೀ ಅಂತರದಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಶೆಟ್ಟಿ 83,136 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೋಮಣ್ಣ 75,753 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಚಾಮರಾಜನಗರದಲ್ಲಿ ಆರಂಭದಿಂದಲೂ ಸೋಮಣ್ಣಗೆ ವಿರೋಧ ವ್ಯಕ್ತವಾಗಿತ್ತು. ಸೋಮಣ್ಣ ಕ್ಷೇತ್ರಕ್ಕೆ ಬರಬಾರದೆಂದು ಬಿಜೆಪಿಯ ಸ್ಥಳೀಯರ ಮುಖಂಡರೇ ಪ್ರತಿಭಟನೆ, ಪತ್ರಿಕಾಗೋಷ್ಟಿ ನಡೆಸಿದ್ದರು. ಮಾಜಿ ಎಂಎಲ್‌ಸಿ ಮಲ್ಲಿಕಾರ್ಜುನಪ್ಪ ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿದ್ದರು. ಅವರಲ್ಲದೆ, ಪಕ್ಷದಲ್ಲಿ ಕಳೆದ ಕೆಲವು ವರ್ಷಗಳಿಂದ ಅವಿರತವಾಗಿ ಕೆಲಸ ಮಾಡಿದ್ದ ಮತ್ತು ಟಿಕೆಟ್‌ ಆಕಾಂಕ್ಷಿಗಳಾಗಿದ್ದ ರುದ್ರೇಶ್ ಕೂಡ ಮುನಿಸಿಕೊಂಡಿದ್ದರು. ಬಿಜೆಪಿ ವಕ್ತಾರ ಆಯ್ಯನಪುರ ಶಿವಕುಮಾರ್‌ ಬಹಿರಂಗವಾಗಿಯೇ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಕ್ಷೇತ್ರದ ಅಮಚವಾಡಿ ಮತ್ತು ಚನ್ನಪ್ಪನಪುರ ಗ್ರಾಮಗಳ ಜನರು ‘ಗೋ ಬ್ಯಾಕ್‌ ಸೋಮಣ್ಣ‘ ಎಂಬ ಬ್ಯಾನರ್‌ ಕಟ್ಟಿ, ಸೋಮಣ್ಣ ವಿರುದ್ಧ ಗುಡುಗಿದ್ದರು.

ಹೀಗಾಗಿ, ಚಾಮರಾಜನಗರದಲ್ಲೂ ಸೋಮಣ್ಣಗೆ ಸಕಾರಾತ್ಮಕವಾದ ಸ್ಪಂದನೆ ದೊರೆತಿರಲಿಲ್ಲ. ಆದರೂ, ಬಿಜೆಪಿ ಹೈಕಮಾಂಡ್‌ನ ನಿರ್ಧಾರಕ್ಕೆ ಮಣಿದು ಸೋಮಣ್ಣ ಚಾಮರಾಜನಗರದಲ್ಲೂ ಸ್ಪರ್ಧೆ ಮಾಡಿದ್ದರು. ತನ್ನದಲ್ಲದ ಎರಡು ದೋಣಿಯ ಮೇಲೆ ಕಾಲಿಟ್ಟು, ಯಾವ ದೋಣಿಯಲ್ಲೂ ದಡ ಸೇರಲಾಗದ ಪರಿಸ್ತಿತಿಯಲ್ಲಿಯೂ ಸೋಮಣ್ಣ ಚುನಾವಣೆಯ ನದಿಗಿಳಿಸಿದ್ದರು. ಅಂತಿಮವಾಗಿ ದಡ ಸೇರಲಾಗದೆ, ಮುಳುಗಿ ಸೋಲುಂಡಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಶಾಸಕ ಸ್ಥಾನವಿಲ್ಲದೆ, ಕಾಲಿ ಉಳಿದಿದ್ದಾರೆ. ಇನ್ನು, ಬಿಜೆಪಿ ಅವರನ್ನು ಎಂಎಲ್‌ಸಿ ಮಾಡುವುದಿಲ್ಲ. ಅವರ ರಾಜಕೀಯ ಇಲ್ಲಿಗೆ ಅಂತ್ಯವಾಗಲಿದೆ ಎಂಬ ಮಾತುಗಳೂ ಇವೆ.

ಈ ಮಾತಿಗೆ ಕಾರಣವೂ ಇದೆ. ಬಿಜೆಪಿ ಹೈಕಮಾಂಡ್‌ ಉದ್ದೇಶ ಪೂರ್ವಕವಾಗಿಯೇ ಅವರನ್ನು ಈ ಎರಡು ದೋಣಿಗಳ ಮೇಲೆ ಕಾಲಿಡುವ ಪರಿಸ್ಥಿತಿಗೆ ದೂಡಿತ್ತು ಎಂದು ಹೇಳಲಾಗುತ್ತಿದೆ. ಮೂರು ಪಕ್ಷಗಳಲ್ಲೂ ಆಡಿಕೊಂಡು ಬಂದಿರುವ ಸೋಮಣ್ಣ, ಬಿಜೆಪಿಯಲ್ಲಿದ್ದುಕೊಂಡೇ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಆಗಾಗ್ಗೆ ಗುಡುಗುತ್ತಿದ್ದರು. ತಮ್ಮ ಮಗನಿಗೆ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಸೋಮಣ್ಣ, ಯಡಿಯೂರಪ್ಪ-ವಿಜಯೇಂದ್ರ ವಿರುದ್ಧವೂ ಮಾತನಾಡಿದ್ದರು. ಹೀಗಾಗಿ, ಸೋಮಣ್ಣರನ್ನು ಬಲಿಯಾಕಬೇಕೆಂದು ಬಿಜೆಪಿ ನಾಯಕರು ನಿರ್ಧರಿಸಿದ್ದರು. ಅಂತೆಯೇ, ಎರಡೆರಡು ಕ್ಷೇತ್ರಗಳಲ್ಲಿ ಟಿಕೆಟ್‌ ಕೊಟ್ಟು ಹರಕೆಯ ಕುರಿಯಾಗಿಸಿ ಬಲಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X