- ಕೋಮುದ್ವೇಷದ ಕಿಡಿಯ ನಡುವೆ ಗೆದ್ದ ಮುಸ್ಲಿಂ ಅಭ್ಯರ್ಥಿಗಳು
- ಬಿಜೆಪಿ ಅಪಪ್ರಚಾರ ನಡೆಸಿದ ಹತ್ತು ಕ್ಷೇತ್ರಗಳಲ್ಲೂ ಗೆಲುವು
ಕರ್ನಾಟಕ ಜನಮತದಂತೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತ ಪಡೆದು ಗೆಲುವು ದಾಖಲಿಸಿದೆ.
ಬಿಜೆಪಿಯ ಕೋಮುವಾದ ಹಾಗೂ ಅಲ್ಪಸಂಖ್ಯಾತರ ಕಡೆಗಣನೆಯ ವಿಚಾರದಿಂದ ಬಳಲಿದ್ದ ಮುಸಲ್ಮಾನ ಸಮುದಾಯಕ್ಕೆ ಕಾಂಗ್ರೆಸ್ ಗೆಲುವು ಹುರುಪಿನ ಟಾನಿಕ್ ನೀಡಿದೆ.
ಕೈ ಪಡೆಯಿಂದ ಕಣಕ್ಕಿಳಿದಿದ್ದ ಅಲ್ಪಸಂಖ್ಯಾತ ಅಭ್ಯರ್ಥಿಗಳಲ್ಲಿ 10 ಮಂದಿ ಗೆಲುವು ಕಂಡಿದ್ದಾರೆ.
ರಹೀಮ್ ಖಾನ್ – ಬೀದರ್, ರಿಜ್ವಾನ್ ಅರ್ಷದ್ – ಶಿವಾಜಿನಗರ, ಎನ್.ಎ. ಹ್ಯಾರಿಸ್ – ಶಾಂತಿನಗರ, ಜಮೀರ್ ಅಹ್ಮದ್ ಖಾನ್ – ಚಾಮರಾಜಪೇಟೆ, ಇಕ್ಬಾಲ್ ಹುಸೇನ್ – ರಾಮನಗರ, ಯು.ಟಿ. ಖಾದರ್ – ಮಂಗಳೂರು (ಉಳ್ಳಾಲ), ತನ್ವೀರ್ ಸೇಟ್- ನರಸಿಂಹರಾಜ, ಮಹಮ್ಮದ್ ಶಾಲಂ – ರಾಯಚೂರು, ಕನೀಜ್ ಫಾತೇಮಾ- ಗುಲ್ಬರ್ಗ ಉತ್ತರ, ಆಸಿಫ್ ಸೇಟ್ – ಬೆಳಗಾವಿ ಉತ್ತರ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಅಪ್ಪ – ಮಕ್ಕಳು ಹಾಗೂ ಸಹೋದರರ ಸವಾಲ್‌ನಲ್ಲಿ ಯಾರಿಗೆ ಗೆಲುವು, ಯಾರಿಗೆ ಸೋಲು?
ಹಲಾಲ್ ಕಟ್, ಆಜಾನ್ , ಹಿಜಾಬ್ ಹಾಗೂ ಮುಸಲ್ಮಾನ ವ್ಯಾಪಾರಿಗಳಿಗೆ ನಿರ್ಬಂಧ ಹಾಗೂ ಲವ್ ಜಿಹಾದ್‌ನಂತಹ ವಿಚಾರಗಳ ನಡುವೆಯೂ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲುವಿನ ನಗು ಬೀರಿರುವುದು ನಮ್ಮ ನಾಡಿನ ಭಾವೈಕ್ಯದ ಸಂಕೇತವಾಗಿದೆ.