ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಕೊಗ್ರೆ ಮುಖ್ಯರಸ್ತೆ ಪಿಡಬ್ಲ್ಯೂಡಿ ಇಲಾಖೆಯ ಅವೈಜ್ಞಾನಿಕ ಕಾರ್ಯ ನಿರ್ವಹಣೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಸರೀಕಟ್ಟೆಯ ಕಳಸ ವೃತ್ತ ಬಳಿ ರಸ್ತೆ ತಡೆಮಾಡಿ ಕ್ಷೇತ್ರದ ಶಾಸಕರ ವಿರುದ್ಧವಾಗಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, “ಪ್ರತಿದಿನ ಓಡಾಡುವ ಗ್ರಾಮದ ಸಾರ್ವಜನಿಕರು, ವಿದ್ಯಾಭ್ಯಾಸಕ್ಕೆ ಹೋಗುವ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ, ವಯಸ್ಸಾದ ವೃದ್ಧರಿಗೆ ಸರಿಯಾದ ರಸ್ತೆಯಿಲ್ಲದಂತಾಗಿದೆ. ಹಾಗೆಯೇ ರಸ್ತೆ ಇಲ್ಲವೆಂದು ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ರಸ್ತೆಯೆಲ್ಲ ಕೆಸರಿನಿಂದ ಕೂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಜಾತಿ ಜನಗಣತಿ ವರದಿ ಅಂಗೀಕರಿಸಿ, ಶೀಘ್ರ ಅನುಷ್ಠಾನಗೂಳಿಸಿ: ಗುರುಪ್ರಸಾದ್ ಕೆರಗೋಡು ಆಗ್ರಹ
ಗ್ರಾಮದ ಮುಖಂಡ ಮಣಿಕಂಠ ಈ ದಿನ.ಕಾಮ್‌ಗೆ ಮಾತನಾಡಿ, “ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಾಗಿಲ್ಲ, ನಮ್ಮ ಸುತ್ತಮುತ್ತಲಿನ ರಸ್ತೆ ಕೆಟ್ಟ ಪರಿಸ್ಥಿತಿಗೆ ತಲುಪಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.