ವಿಜಯಪುರ | ಪರಿಹಾರ ಸಿಗದ್ದಕ್ಕೆ ರಸ್ತೆಯಲ್ಲೇ ಕೃಷಿ ಮಾಡಿದ ಜಮೀನು ಮಾಲೀಕ: ಸಂಕಷ್ಟಕ್ಕೆ ಸಿಲುಕಿದ 30ಕ್ಕೂ ಹೆಚ್ಚು ರೈತರು!

Date:

Advertisements

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಸೋಮನಾಳ ಗ್ರಾಮದಲ್ಲಿ ಸರ್ವೆ ನಂಬರ್ 30 ರಲ್ಲಿಯ ಲಾಟರಲ್ ಕಾಲುವೆ ಬಲಬದಿಯ ಸರ್ವಿಸ್ ರಸ್ತೆಯನ್ನು ಜಮೀನು ಮಾಲೀಕ ಹನುಮಂತ ಪೂಜಾರಿ ಬಂದ್ ಮಾಡಿ, ತೊಗರಿ ಬಿತ್ತನೆ ಮಾಡಿರುವುದರಿಂದ ಆ ಜಮೀನಿನ ಕೆಳಗಿರುವ 30ಕ್ಕೂ ಹೆಚ್ಚು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಪರಿಹಾರ ಧನ ಸಿಗದಿದ್ದಕ್ಕೆ ಜಮೀನು ಮಾಲೀಕ ಈ ರೀತಿಯ ಸವಾಲನ್ನು ಅಧಿಕಾರಿಗಳಿಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಆಗದಂತಹ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಎದುರಿಸುತ್ತಿದ್ದು, ಅಧಿಕಾರಿಗಳ ಎಚ್ಚರಿಕೆಗೂ ಕೂಡ ಜಮೀನು ಮಾಲೀಕ ಬಗ್ಗದ್ದರಿಂದ, ಸಮಸ್ಯೆ ಅನುಭವಿಸುವಂತಾಗಿದೆ.

Advertisements

ಸರ್ವೆ ನಂಬರ್ 30ರ ಹಣಮಂತ ಪೂಜಾರಿ ತನ್ನ ಹೊಲದಲ್ಲಿ ಹೋಗಿರುವ ಲ್ಯಾಟರಲ್ ಸರ್ವಿಸ್ ರಸ್ತೆ ಬಂದ್ ಮಾಡಿ, ಲ್ಯಾಟರಲ್ ರಸ್ತೆಯನ್ನು ಕೃಷಿಗೆ ಬಳಕೆ ಮಾಡಿಕೊಂಡಿರುವುದರಿಂದ ಇತರೆ ರೈತರಿಗೆ ಸಮಸ್ಯೆಯಾಗುತ್ತಿದೆ.

ಇದರಿಂದ ಸತತವಾಗಿ ಮೂರು ವರ್ಷಗಳಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತ ರೈತರ ನಿಯೋಗವು ಸಾಕಷ್ಟು ಬಾರಿ ಕೆಬಿಜಿಎನ್ಎಲ್ ಅಧಿಕಾರಿಗಳಿಗೆ ಹೇಳಿದರೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಬೇಸತ್ತ ರೈತರು ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಸೋಮನಾಳದ ರೈತರು ಹನುಮಂತಪ್ಪ ಪೂಜಾರಿ ಅವರಿಗೆ ರಸ್ತೆಯ ವಿಷಯವಾಗಿ ಹಲವು ಬಾರಿ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಅದರ ರೈತ ಬಗ್ಗಲಿಲ್ಲ. ಇದರಿಂದ ಅಸಹಾಯಕರಾಗಿದ್ದ ರೈತರು ಪ್ರಕರಣವನ್ನು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.

1002117480

ಈ ಬಗ್ಗೆ ಈ ದಿನ.ಕಾಮ್ ಮುದ್ದೇಬಿಹಾಳದ ಕೆಬಿಜಿಎನ್ಎಲ್ ಸಹಾಯಕ ಎಇಇ ಅವರನ್ನು ಮಾತನಾಡಿಸಿದಾಗ, “ಸರ್ವೆ ನಂಬರ್ 30ರ ರೈತ ರಸ್ತೆ ಬಂದ್ ಮಾಡಿದ್ದು ಮೊದಲ ತಪ್ಪು. ರಸ್ತೆ ಮೇಲೆ ಬಿತ್ತನೆ ಮಾಡಿರುವುದು ಇನ್ನೊಂದು ತಪ್ಪು. 2013-14ರಲ್ಲಿ ಕಾಲುವೆ ಕಾಮಗಾರಿ ಮುಗಿದಿದೆ. ಇವರು ಒಂಬತ್ತು ವರ್ಷಗಳ ನಂತರ ಕೋರ್ಟಿಗೆ ಹೋಗಿದ್ದಾರೆ. ರಸ್ತೆ ಬಂದ್ ಆದಾಗಿನಿಂದ ಇತರೆ ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ನಾವು ಅವರಿಗೆ ಪರಿಹಾರದ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಇದಕ್ಕೂ ಮಣಿಯದ ಹೋದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದು ಮಾಹಿತಿ ನೀಡಿದರು.

ಜಮೀನು ಮಾಲೀಕ, ರೈತ ಹಣಮಂತ ಪೂಜಾರಿ ಮಾತನಾಡಿ, ನನ್ನ ಜಮೀನಿನಲ್ಲಿ ಲೆಟರ್ ಕಾಲುವೆ ಹೋಗಿದೆ. ಅದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಪರಿಹಾರ ಕೊಡುವುದನ್ನು ಬಿಟ್ಟು ರೈತರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷವಾದರೂ ಪರಿಹಾರ ಸಿಕ್ಕಿಲ್ಲ. ನನಗೆ ಪರಿಹಾರ ಕೊಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

1002117467

ಈ ಬಗ್ಗೆ ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರರಾದ ಬಲರಾಮ ಕಟ್ಟಿಮನಿ ಅವರು ಮಾತನಾಡಿ, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ರೈತನಿಗೆ ಮನವರಿಕೆ ಮಾಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಸ್ತೆಯ ಸಮಸ್ಯೆಗೊಳಗಾಗಿರುವ ರೈತರು ಅಧಿಕಾರಿಗಳನ್ನು ಮತ್ತು ಪೊಲೀಸ್ ಇಲಾಖೆಯವರನ್ನು ಕರೆಸಿದ್ದು, ರಸ್ತೆಯ ಸಮಸ್ಯೆ ಇತ್ಯರ್ಥಗೊಳಿಸಿದ್ದಾರೆಂದು ಕೆಲವು ರೈತರು ಈ ದಿನದ ಕಾಂಗೆ ಮಾಹಿತಿ ನೀಡಿದ್ದಾರೆ.

ಮೂರು ವರ್ಷವಾದರೂ ಸರ್ಕಾರ ಜಮೀನು ತೆಗೆದುಕೊಂಡಿರುವುದು ಮತ್ತು ಕಾಮಗಾರಿ ಮುಗಿಸಿರುವುದು ಒಳ್ಳೆಯದು, ಆದರೆ ಪರಿಹಾರ ಇಲ್ಲಿಯವರೆಗೂ ಕೊಡದಿರುವುದು ದುರಂತವೇ ಸರಿ. ಇನ್ನಾದರೂ ಪರಿಹಾರ ಕೊಡುವರೇ ಕಾದು ನೋಡಬೇಕಾಗಿದೆ.

1002117479
ರಮೇಶ್ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
+ posts

ವಿಜಯಪುರ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X