- ವಿಧಾನಸೌಧದ ಪಡಸಾಲೆಗೆ ಕೈ ಪಕ್ಷದ 35 ಹೊಸ ಮುಖಗಳು
- ಘಟಾನುಘಟಿಗಳಿಗೆ ಸೋಲುಣಿಸಿದ ನೂತನ ಅಭ್ಯರ್ಥಿಗಳು
ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಬುಡಮೇಲು ಮಾಡಿರುವ ರಾಜ್ಯ ಕಾಂಗ್ರೆಸ್ ಬರೋಬ್ಬರಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.
ಕೈಪಕ್ಷದ ಈ ಸಾಧನೆಯಲ್ಲಿ ಹೊಸ ಮುಖಗಳ ಕೊಡುಗೆಯೂ ಇದೆ. ನಾಡಿನ ಜನ ಹೊಸತನ ಬಯಸಿದ್ದರ ಫಲವಾಗಿ ಘಟಾನುಘಟಿ ನಾಯಕರುಗಳನ್ನೇ ಬದಿಗೆ ಸರಿಸಿ, ದಾಖಲೆ ಬರೆದು ವಿಧಾನಸೌಧದ ಮೆಟ್ಟಿಲೇರಿದ್ದಾರೆ.
ಹೀಗೆ ಟಿಕೆಟ್ ಪಡೆದ 42 ಮಂದಿಯಲ್ಲಿ ಗೆದ್ದು ಶಕ್ತಿಸೌಧದ ಕಡೆ ಹೊರಟವರು ಬರೋಬ್ಬರಿ 35 ಮಂದಿ. ಅವರ ಪಟ್ಟಿ ಈ ಕೆಳಗಿನಂತಿದೆ:
1.ಕುಡಚಿ: ಮಹೇಂದ್ರ ಕೆ.ತಮ್ಮಣ್ಣನವರ್,
2.ಬೆಳಗಾವಿ ಉತ್ತರ: ಆಸಿಫ್ ಸೇಟ್,
3 ಕಿತ್ತೂರು: ಬಾಬಾಸಾಹೇಬ್ ಪಾಟೀಲ್,
4.ಸವದತ್ತಿ ಯಲ್ಲಮ್ಮ: ವಿಶ್ವಸ್ ವಸಂತವೈದ್ಯ,
5.ಬಾದಾಮಿ: ಭೀಮಸೇನ್ ಬಿ ಚಿಮ್ಮನಕಟ್ಟಿ
6.ನಾಗಾಥನ್: ಎಸ್ಸಿ, ವಿಠಲ ಕಟಕದೊಂಡ
7.ಸಿಂದಗಿ: ಅಶೋಕ್ ಎಂ. ಮನಗೂಳಿ
8.ಗುಲ್ಬರ್ಗ ದಕ್ಷಿಣ: ಅಲ್ಲಮಪ್ರಭು ಪಾಟೀಲ್
9.ಶಿರಸಿ :ಭೀಮಣ್ಣ ನಾಯಕ್,
10.ರಾಣೆಬೆನ್ನೂರು: ಪ್ರಕಾಶ್ ಕೋಳಿವಾಡ
11.ಬಳ್ಳಾರಿ ನಗರ: ನಾರಾ ಭಾರತ ರೆಡ್ಡಿ
12.ಕೂಡ್ಲಿಗಿ: ಎಸ್ಟಿ, ಡಾ. ಶ್ರೀನಿವಾಸ್ ಎನ್.ಟಿ
13.ಚಿತ್ರದುರ್ಗ: ಕೆಸಿ ವೀರೇಂದ್ರ
14.ದಾವಣಗೆರೆ -ಜಗಳೂರು: ಬಿ. ದೇವೇಂದ್ರಪ್ಪ
15.ಮಾಯಕೊಂಡ: ಕೆ.ಎಸ್. ಬಸವರಾಜು
16.ಚನ್ನಗಿರಿ: ಬಸವರಾಜು ವಿ ಶಿವಗಂಗಾ
17.ಮೂಡಿಗೆರೆ: ಎಸ್ಸಿ, ನಯನಾ ಮೋಟಮ್ಮ(ಜ್ಯೋತಿ ಝಾವರ್)
18.ಚಿಕ್ಕಮಗಳೂರು: ಎಚ್.ಡಿ. ತಮ್ಮಯ್ಯ
19.ಕಡೂರು: ಆನಂದ್ ಕೆ ಎಸ್
20.ಪಾವಗಡ: ಎಚ್.ವಿ. ವೆಂಕಟೇಶ್
21.ಚಿಕ್ಕಬಳ್ಳಾಪುರ: ಪ್ರದೀಪ್ ಈಶ್ವರ್ ಅಯ್ಯರ್
22.ಪುಲಕೇಶಿನಗರ: ಎಸ್ಸಿ, ಎ.ಸಿ. ಶ್ರೀನಿವಾಸ್
23.ದೇವನಹಳ್ಳಿ: ಕೆಎಚ್ ಮುನಿಯಪ್ಪ, ಮಾಜಿ ಸಂಸದ
24.ನೆಲಮಂಗಲ: ಶ್ರೀನಿವಾಸಯ್ಯ ಎನ್
25.ರಾಮನಗರ: ಇಕ್ಬಾಲ್ ಹುಸೇನ್ ಎಚ್.ಎ.
26.ಮದ್ದೂರು: ಕೆ.ಎಂ. ಉದಯ
27.ಮೇಲುಕೋಟೆ : ದರ್ಶನ್ ಪುಟ್ಟಣ್ಣಯ್ಯ
28.ಮಂಡ್ಯ: ರವಿಕುಮಾರ್ ಗಾಣಿಗ
29.ಪುತ್ತೂರು, ಅಶೋಕ್ ಕುಮಾರ್ ರೈ
30.ಕೊಡಗು-ಮಡಿಕೇರಿ: ಡಾ ಮಂಥರ್ ಗೌಡ
31.ವಿರಾಜಪೇಟೆ: ಎ.ಎಸ್. ಪೊನ್ನಣ್ಣ
32.ಕೃಷ್ಣರಾಜನಗರ: ಡಿ. ರವಿಶಂಕರ್
33.ನಂಜನಗೂಡು: ದರ್ಶನ್ ಧ್ರುವನಾರಾಯಣ
34. ಕೃಷ್ಣರಾಜನಗರ : ಕೆ.ಹರೀಶ್ ಗೌಡ
35.ಗುಂಡ್ಲುಪೇಟೆ: ಎಚ್.ಎಂ. ಗಣೇಶ್ ಪ್ರಸಾದ್
ಇದೇ ರೀತಿ ಬಿಜೆಪಿ ಹೊಸತನದ ಪ್ರಯೋಗವಾಗಿ 72 ಹೊಸ ಮುಖಗಳಿಗೆ ಅವಕಾಶ ನೀಡಿತ್ತು. ಇದರಲ್ಲಿ 19 ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.