ಕನ್ನಡರಾಜ್ಯೋತ್ಸವ 50ರ ಸಂಭ್ರಮದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ನೃತ್ಯ ತಂಡಗಳ ಸ್ಪರ್ಧೆಗಳಿಗೆ ಆಹ್ವಾನಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಅಕ್ಟೋಬರ್ 30 ಮತ್ತು 31ರಂದು ಪ್ರದರ್ಶನ ನಡೆಯಲಿವೆ” ಎಂದು ತಿಳಿಸಿದ್ದಾರೆ.
“ಅಕ್ಟೋಬರ್ 30ರಂದು ಪ್ರೌಢ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಖಾಸಗಿ ನೃತ್ಯ ತಂಡದವರು ಪ್ರದರ್ಶನ ನೀಡುವವರು. 31ರಂದು ಪದವಿ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ ಹಾಗೂ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಹಾಗೂ ಖಾಸಗಿ ನೃತ್ಯ ತಂಡಗಳು ಭಾಗವಹಿಸಬಹುದಾಗಿದೆ. ಒಂದು ತಂಡ ಒಂದೇ ನೃತ್ಯ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಲಾಗಿದೆ” ಎಂದರು.
“ಭಾಗವಹಿಸಿದ ಎಲ್ಲ ತಂಡಗಳಿಗೆ ಪ್ರಮಾಣ ಪತ್ರ ನೀಡುವ ಜತೆಗೆ ಪ್ರೌಢ ಹಾಗೂ ಪ.ಪೂ. ಕಾಲೇಜಿನ ತಂಡಗಳಿಗೆ ಪ್ರಥಮ ಬಹುಮಾನ ₹10,000, ದ್ವಿತೀಯ ಬಹುಮಾನ ₹7,500 ಮತ್ತು ತೃತೀಯ ಬಹುಮಾನ ₹5,000 ನೀಡಲಾಗುವುದು. ಪದವಿ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಮಹಿಳಾ ವಿಶ್ವವಿದ್ಯಾಲಯ ಹಾಗೂ ಖಾಸಗಿ ನೃತ್ಯ ತಂಡಗಳಿಗೆ ಪ್ರಥಮ ಬಹುಮಾನಕ್ಕೆ ₹10,000, ದ್ವಿತೀಯ ಬಹುಮಾನ ₹7,500 ಮತ್ತು ತೃತೀಯ ಬಹುಮಾನಕ್ಕೆ ₹5,000 ನೀಡಲಾಗುವುದು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಕ್ಸಿಬಿಷನ್‌ನಲ್ಲಿ ರೇಂಜರ್ ಸ್ವಿಂಗ್‌ನಿಂದ ಬಿದ್ದು ಯುವತಿ ಸಾವು; ಐವರ ಬಂಧನ
“ಭಾಗವಹಿಸುವವರು ಕನ್ನಡ ನಾಡು-ನುಡಿಯ ಸಾಹಿತ್ಯ, ಚಲನಚಿತ್ರ ಹಾಗೂ ಕವಿಗಳು ಬರೆದ ಕನ್ನಡ ಹಾಡುಗಳನ್ನೇ ಹಾಡಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ಮಾಧವ ಗುಡಿ ಮೊ.- 7204278432 ಮತ್ತು ಸುರೇಶ ಜತ್ತಿ – 7795751224ಕ್ಕೆ ಸಂಪರ್ಕಿಸಬಹುದು” ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ.