ಅಯೋಧ್ಯೆ ವಿವಾದ | ಮೂಲದಾವೆಯಲ್ಲಿ ದೇವರೇ ಕಕ್ಷಿದಾರ; ದೇವರನ್ನೇ ಪರಿಹಾರ ಕೇಳಿದ ಸಿಜೆಐ

Date:

Advertisements

ಕಳೆದ 70 ವರ್ಷಗಳ ಅತ್ಯಂತ ವಿವಾದಾತ್ಮಕ ತೀರ್ಪಿನ ಬಗ್ಗೆ ಮೂರು ತಿಂಗಳ ಕಾಲ ವಿಚಾರಣೆ ನಡೆಸಿ, ದೇವರನ್ನು ನೆನೆದು ತೀರ್ಪನ್ನು ನೀಡಿದ್ದೆ ಎಂದು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.

ಮಹಾರಾಷ್ಟ್ರದ ಪುಣೆಯ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಚಂದ್ರಚೂಡ್ ಅವರು, “ನಾವು ತೀರ್ಪು ನೀಡಬೇಕಾದ, ಆದರೆ ಪರಿಹಾರವನ್ನು ತಲುಪಲು ಸಾಧ್ಯವಾಗದ ಪ್ರಕರಣಗಳು ಆಗಾಗ್ಗೆ ನಮ್ಮ ಮುಂದಿರುತ್ತವೆ. ಆದರೆ, ನಿರ್ಣಯಕ್ಕೆ ಬರಲು ಸಾಧ್ಯವಾಗುವುದಿಲ್ಲ. ನನ್ನ ಮುಂದೆ ಮೂರು ತಿಂಗಳಿನಿಂದ ಇದ್ದ ಅಯೋಧ್ಯೆ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ವಿವಾದ ಪ್ರಕರಣದ ಸಂದರ್ಭದಲ್ಲಿಯೂ ಇದೇ ರೀತಿಯ ಸನ್ನಿವೇಶ ಎದುರಾಗಿತ್ತು. ಆಗ ನಾನು ದೇವರ ಮುಂದೆ ಕುಳಿತು, ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ್ದೆ. ದೇವರು ತನ್ನ ಮೇಲೆ ನಂಬಿಕೆ ಇಟ್ಟಿರುವವರಿಗೆ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾನೆ” ಎಂದಿದ್ದಾರೆ.

ಆಗಿನ ಸಿಜೆಐ ರಂಜನ್ ಗೊಗೊಯ್, ಹಾಲಿ ಸಿಜೆಐ ಡಿವೈ ಚಂದ್ರಚೂಡ್, ನಿವೃತ್ತರಾಗಿರುವ ಸಿಜೆಐ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಸ್ ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಐವರು ನ್ಯಾಯಮೂರ್ತಿಗಳ ನ್ಯಾಯಪೀಠವು ಬಾಬ್ರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಅದೂ, ಐವರು ನ್ಯಾಯಮೂರ್ತಿಗಳೂ ಒಮ್ಮತದ ತೀರ್ಪು ನೀಡುದ್ದರು. ಈಗ ಆ ತೀರ್ಪಿನ ಬಗೆಗಿನ ಚಂದ್ರಚೂಡ್ ಅವರ ಹೇಳಿಕೆಗಳು ‘ದೇವರೇ ಪ್ರತ್ಯಕ್ಷವಾಗಿ ಪ್ರಕರಣದ ಪರಿಹಾರ ನೀಡಿದ್ದ’ ಎಂದು ಎಲ್ಲರೂ ಕಲ್ಪಿಸಿಕೊಳ್ಳಬೇಕಾದಂತಹ ಚಿತ್ರಣವನ್ನು ನೀಡಿತ್ತದೆ. ಮಾತ್ರವಲ್ಲದೆ, ‘ನನಗೆ ಇನ್ನೊಂದು ದೇವಸ್ಥಾನ ಬೇಕು, ಇನ್ನೊಂದು ದೇವಸ್ಥಾನವನ್ನ ಹೊಂದಲು ನನಗೆ ಭೂಮಿಯನ್ನ ನೀಡು’ ಎಂದು ದೇವರೇ ಕೇಳಿರುವಂತೆ ಕಾಣುತ್ತಿದೆ.

Advertisements

ದೇವರೇ ಈ ರೀತಿ ಹೇಳಿದ ಬಳಿಕ ನ್ಯಾಯಾಧೀಶರಿಗೆ ಉಳಿದಿದ್ದ ಏಕೈಕ ಕೆಲಸವೆಂದರೇ, ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಈ ‘ಪರಿಹಾರ’ಕ್ಕೆ ನ್ಯಾಯಾಂಗದ ತಾರ್ಕಿಕತೆಯನ್ನು ಲೇಪಿಸಿ ತೀರ್ಪನ್ನು ಪ್ರಕಟಿಸುವುದು. ದೇವರಿಗೆ ತನ್ನ ದೇವಸ್ಥಾನ ಭದ್ರಗೊಂಡ ಬಳಿಕ ದೇವರು ತನ್ನ ದೈವಿಕ ತೀರ್ಪಿನಲ್ಲಿ ಭಾಗಿಯಾಗಿದ್ದ ಐವರು ನ್ಯಾಯಾಧೀಶರನ್ನು ಗೌರವಿಸುತ್ತಿದ್ದಾನೆ. ಆ ಕಾರಣಕ್ಕಾಗಿಯೇ, ಅಂದಿನ ಸಿಜೆಐ ರಂಜನ್ ಗೊಗೊಯ್ ಅವರನ್ನು ದೇವರು ರಾಜ್ಯಸಭೆಗೆ ಕಳುಹಿಸಿದ್ದಾನೆ ಎಂದೂ ನಾವು ಭಾವಿಸಬಹುದು/ನಂಬಬಹುದು.

ಜೊತೆಗೆ, ತೀರ್ಪು ನೀಡಿದ ಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರನ್ನು ಬಳಿಕ ಸಿಜೆಐ ಹುದ್ದೆಗೇರಿಸಿದ್ದ. ಓರ್ವ ನ್ಯಾಯಾಧೀಶರು ನಿವೃತ್ತಿಯ ಬಳಿಕ ರಾಜ್ಯಪಾಲರಾಗುವಂತೆ ಹಾಗೂ ಇನ್ನೋರ್ವ ನ್ಯಾಯಾಧೀಶರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಇದೆಲ್ಲವೂ ದೇವರ ಚಮತ್ಕಾರವೇ…. ಗಮನಾರ್ಹವೆಂದರೆ, ಬಾಬ್ರಿ ಮಸೀದಿ ತೀರ್ಪಿನಲ್ಲಿನ ನಿಗೂಢತೆಗಳ ಪೈಕಿ ಒಂದು ಅಂಶವನ್ನು ನಾವು ಗಮನಿಸಬಹುದು. ಸುಪ್ರೀಂ ಕೋರ್ಟ್‌ ಪ್ರಕರಟಿಸಿರುವ ಎಲ್ಲ ತೀರ್ಪುಗಳ ಪೈಕಿ, ಈವೊಂದು ಪ್ರಕರಣದ ತೀರ್ಪಿನ ಪ್ರತಿಯಲ್ಲಿ ಯಾವುದೇ ನ್ಯಾಯಾಧೀಶರ ಸಹಿ ಇರಲಿಲ್ಲ. ಹೇಗಿದ್ದರೂ, ಈ ತೀರ್ಪು ದೇವರ ಪವಾಡವಲ್ಲವೇ? ಆ ಕಾರಣಕ್ಕಾಗಿಯೇ ಸಹಿ ಹಾಕದೇ ಇರಬಹುದು.

ಚಂದ್ರಚೂಡ್ ಅವರ ಹೇಳಿಕೆಯನ್ನು ತಮಾಷೆಯಾಗಿ ನಾವು ನೋಡುತ್ತಿದ್ದೇವೆ. ಆದರೆ, ಅವರ ಹೇಳಿಕೆಯಲ್ಲಿ ದೇವರು ಎನ್ನುವ ವಿಚಾರವನ್ನ ಬದಿಗಿಟ್ಟು ನೋಡಿದ್ರೆ, ಅವರ ಹೇಳಿಕೆ ನಿಜಕ್ಕೂ ಆತಂಕಕಾರಿಯಾಗಿದೆ.

ಮುಖ್ಯವಾಗಿ, ಕಳೆದ 70 ವರ್ಷಗಳ ವಿವಾದಕ್ಕೆ ನ್ಯಾಯಪೀಠ ಪರಿಹಾರವನ್ನ ಕಂಡುಕೊಂಡಿರಲಿಲ್ಲ. ಈ ವಿವಾದಕ್ಕೆ ತಾವೇ ಪರಿಹಾರ ಕಂಡುಕೊಂಡಿದ್ದೇವೆ ಎಂದು ನ್ಯಾಯಮೂರ್ತಿಯೊಬ್ಬರು ಹೇಳಿಕೊಳ್ಳುವುದು ಅಪ್ರಾಮಾಣಿಕವಾಗಿದೆ. ದೇವರು ಪರಿಹಾರ ನೀಡಿದ ಎನ್ನುವುದು ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಧ್ವಂಸಗೊಳಿಸಿದ ಪ್ರಬಲ ಗುಂಪಿನ ಪರವಾಗಿ ಅವರು ಒಲವು ಹೊಂದಿದ್ದರು ಎಂಬುದನ್ನು ಸೂಚಿಸುತ್ತದೆ. ಪ್ರಬಲ ವಿಧ್ವಂಸಕರು ತಾವು ಅಕ್ರಮವಾಗಿ ತೆರುವುಗೊಳಿಸಿದ ಭೂಮಿಯನ್ನ ಅವರೇ ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುವುದು ಅಥವಾ ‘ಮೈಟ್ ಈಸ್ ರೈಟ್’ (ಬಲವುಳ್ಳವನು ಮಾಡಿದ್ದೇ ಸರಿ) ಎಂಬುದನ್ನು ಪರಿಹಾರ ಎಂದು ಕರೆಯಲಾಗುವುದಿಲ್ಲ.

ಇನ್ನು, ಹೊಸ ಮಸೀದಿಗಾಗಿ ಅಯೋಧ್ಯೆಯ ಹೊರಗೆ ಐದು ಎಕರೆ ಭೂಮಿ ಒದಗಿಸುವಂತೆ ಸರ್ಕಾರಕ್ಕೆ ನ್ಯಾಯಪೀಠದ ನಿರ್ದೇಶನವು ಒಂದು ರೀತಿಯ ದೈವಿಕ ನ್ಯಾಯವನ್ನು ಪ್ರತಿನಿಧಿಸುತ್ತದೆ ಎಂಬುದಾಗಿ ನಾವು ನಂಬಬೇಕು ಎನ್ನುವ ನ್ಯಾ.ಚಂದ್ರಚೂಡ್ ಅವರ ವಾದವು ನಗು ತರಿಸುತ್ತದೆ. ಪೀಠದ ಮುಂದಿದ್ದ ವಿಷಯವೆಂದರೆ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಮಸೀದಿ ಇದೆಯೇ? ಎಂಬುದಲ್ಲ. ಆದರೆ, ವಿಧ್ವಂಸಕರು ಓರ್ವ ವ್ಯಕ್ತಿ ಅಥವಾ ಸಮುದಾಯವನ್ನು ಹಿಂಸಾತ್ಮಕವಾಗಿ ಹೊರಹಾಕಲು ಕಾನೂನಿನಲ್ಲಿ ಅನುಮತಿ ಇದೆಯೇ? ಎನ್ನುವುದು. ಈ ಪ್ರಶ್ನೆಗೆ ಆಯೋಧ್ಯೆ ಪೀಠ (ನ್ಯಾಯಪೀಠ) ಭಾರತೀಯ ನ್ಯಾಯಾಂಗಕ್ಕೆ ಶಾಶ್ವತ ಅವಮಾನವೆಂಬಂತೆ ಉತ್ತರಿಸಿದೆ. ಅದನ್ನು ಚಂದ್ರಚೂಡ್ ಅವರ ಹೇಳಿಕೆ ಪ್ರತಿಬಿಂಬಿಸುತ್ತಿದೆ.

ಸಿಜೆಐ ಅವರು ಈ ವಿವಾದಕ್ಕೆ ದೈವಿಕವಾಗಿ ನೇಮಿಸಲ್ಪಟ್ಟ ಪರಿಹಾರ ನೀಡಿರುವುದಾಗಿ ಭಾವಿಸಿದ್ದಾರೆ ಎಂಬ ಅಂಶದ ಆಧಾರದ ಮೇಲೆ, 1991ರ ಪೂಜಾ ಸ್ಥಳಗಳ ಕಾಯಿದೆಯ ಹೊರತಾಗಿಯೂ ಜ್ಞಾನವ್ಯಾಪಿ ವಿವಾದ ಯಾಕೆ ಮುನ್ನೆಲೆಗೆ ಬರುತ್ತಿದೆ ಎಂಬ ಬಗ್ಗೆ ವಿವರಿಸಬಹುದು. ದೇಶದಾದ್ಯಂತ ಇರುವ ಮುಸ್ಲಿಂ ಆರಾಧನಾ ಸ್ಥಳಗಳ ಮೇಲೆ ಹಿಂದುತ್ವದ ಗುಂಪುಗಳು ನಿರಂತರವಾಗಿ ಹಕ್ಕುಗಳನ್ನ ಮಂಡಿಸುತ್ತಿರುವುದು ನಮ್ಮ ನ್ಯಾಯಾಲಯಗಳು ನಿಸ್ಸಂದೇಹವಾಗಿ ಅನುಸರಿಸಬಹುದಾದ ದೈವಿಕವಾಗಿ ನಿಯೋಜಿತ ಪರಿಹಾರಗಳ ಸೂಚಕವಾಗಿ ಈಗ ಕಾಣಿಸುತ್ತಿದೆ.

ಇನ್ನು ಸಿಜೆಐ ಅವರು ಈ ತಿಂಗಳ ಆರಂಭದಲ್ಲಿಯೇ ತನ್ನ ಕೆಲಸಗಳನ್ನು ಇತಿಹಾಸವು ಹೇಗೆ ನೆನಪಿಸಿಕೊಳ್ಳಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹಿಂದುತ್ವ ಸಂಘಟನೆಗಳ ನೂರಾರು ವಿಧ್ವಂಸಕ ಹಕ್ಕು ಪ್ರತಿಪಾದನೆಗಳಿಗೆ ಅವರು ಅವಕಾಶಗಳ ಬಾಗಿಲು ತೆರೆದಿದ್ದಾರೆ. ಆ ಪ್ರಕರಣಗಳಲ್ಲಿಯೂ ನ್ಯಾ. ಚಂದ್ರಚೂಡ್ ಅವರು ತೀರ್ಪು ನೀಡುವಾಗ ಇದೇ ದೈವಿಕ ನಿಯೋಜನೆಯು ಕೆಲಸ ಮಾಡಬಹುದು. ತಮ್ಮ ವಿವೇಚನೆಯ ನ್ಯಾಯದಾನವನ್ನು ಹೊಸದಾಗಿ ಅನಾವರಣಗೊಂಡ ‘ನ್ಯಾಯದೇವತೆ’ಯ ಪಾದಗಳ ಬಳಿ ಇರಿಸಬಹುದು.

ಇನ್ನು ಪ್ರಮುಖವಾಗಿ ಈ ‘ಬಾಬ್ರಿ ಮಸೀದಿ’ ವಿವಾದದ ಮೂಲದಾವೆಯಲ್ಲಿ ದೇವರೇ ಕಕ್ಷಿಯಾಗಿರುವಾಗ ಸಿಜೆಐ ಚಂದ್ರಚೂಡ್ ಅವರು ಈ ವಿವಾದಕ್ಕೆ ಪರಿಹಾರ ನೀಡುವಂತೆ ದೇವರನ್ನೇ ಕೇಳಬಹುದೇ? ಇದು ಹಿತಾಸಕ್ತಿಯ ಸಂಘರ್ಷವಲ್ಲವೇ? ಪಕ್ಷಪಾತವಾಗುವುದಿಲ್ಲವೇ?

ಈ ಸುದ್ದಿ ಓದಿದ್ದೀರಾ? ಇದೇನಾ ಮೋದಿಯ ಡಿಜಿಟಲ್ ಇಂಡಿಯಾ?

ಈ ಬಗ್ಗೆ ನೀವೆಲ್ಲರೂ ಒಂದು ಬಾರಿ ಯೋಚನೆ ಮಾಡಲೇಬೇಕು. ಅದೇ ಸಿಜೆಐ ಅವರ ಸ್ಥಾನದಲ್ಲಿ ಮುಸ್ಲಿಂ ನ್ಯಾಯಾಧೀಶರೊಬ್ಬರು ಇದ್ದಾಗ, ಇದೇ ರೀತಿಯ 70 ವರ್ಷದ ಹಿಂದು – ಮುಸ್ಲಿಂ ವಿವಾದದಲ್ಲಿ ಮುಸ್ಲಿಂ ಪರವಾಗಿ ತೀರ್ಪು ನೀಡಿ, ಈ ಪರಿಹಾರ ಅಲ್ಲಾಹ್ ನಿಂದ ಸಿಕ್ಕಿತು ಎಂದು ಹೇಳಿದ್ದರೇ, ಏನಾಗುತ್ತಿತ್ತು. ಇದು ‘ಪಕ್ಷಪಾತ’ ಎಂಬ ಮೊದಲು ಕೂಗು ಯಾರಾದ್ದಾಗಿತ್ತು?

ಸಿಜೆಐ ಚಂದ್ರಚೂಡ್ ಅವರಿಗೆ ಅಯೋಧ್ಯೆ ವಿಷಯದ ತೀರ್ಪು ತನ್ನ ನೆರವಿನಿಂದ ಹೊರಬಿದ್ದಿದೆ ಎಂದು ಹೇಳಿಕೊಳ್ಳುವುದು ಕಾನೂನುಬದ್ದವಾಗಿ ಸಮರ್ಥನೀಯವಲ್ಲ ಎಂದು ತಿಳಿದಿದೆ. ಹಾಗಾಗಿಯೇ, ದೈವಿಕ ತರ್ಕಬದ್ಧತೆಯ ಆಶ್ರಯ ಪಡೆಯುತ್ತಿದ್ದಾರೆ. ಸಿಜೆಐ ಅವರು ಈ ರೀತಿ ಮಾಡುವುದರಿಂದ ದೇವರಿಗೂ ದೊಡ್ಡ ಅನ್ಯಾಯವನ್ನೇ ಮಾಡುತ್ತಿದ್ದಾರೆ.

ತಮ್ಮದೇ ದೋಷಪೂರಿತ ತಾರ್ಕಿಕತೆಯ ಜವಾಬ್ದಾರಿಯನ್ನ ಒಪ್ಪಿಕೊಳ್ಳಲು ಬಯಸದೇ ತಮ್ಮ ಅಚಾತುರ್ಯದ ತೀರ್ಪಿನ ಹೊಣೆಯನ್ನ ದೇವರ ಮೇಲೆ ಹೊರಿಸಲಾಗುತ್ತಿದೆ. ಸಿಜೆಐ ಅವರು ತಮ್ಮ ಸ್ವಂತ ನಿರ್ಧಾರ ಮತ್ತು ಜವಾಬ್ದಾರಿಗಳಿಗೆ ತಾವೇ ಹೊಣೆಯೆಂದು ಒಪ್ಪಿಕೊಳ್ಳುವುದನ್ನು ಕಲಿಯಬೇಕಾಗಿದೆ. ಇದನ್ನ ಕಲಿಯಲು ಚಂದ್ರಚೂಡ ಅವರಿಗೆ ಇಂದಿನ ಸಮಯ ಸುಸಮಯವಾಗಿದೆ.

ಇನ್ನು ಸಂವಿಧಾನ ಮತ್ತು ಶಾಸನ ಪುಸ್ತಕದಲ್ಲಿನ ನಿಗದಿತ ಕಾನೂನುಗಳ ಮೇರೆಗೆ ನ್ಯಾಯದಾನ ಮಾಡುವುದಾಗಿ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ನ್ಯಾಯಾಧೀಶರು ತಮ್ಮ ವೈಯಕ್ತಿಕ ಬದುಕುಗಳಲ್ಲಿ ದೇವತೆಗಳು ಅಥವಾ ಪವಿತ್ರ ಗ್ರಂಥಗಳನ್ನ ನಂಬಲು ಮತ್ತು ಅವರ ಆದೇಶಗಳಲ್ಲಿ ಮೌಖಿಕ ವಿವೇಚನೆಗಳನ್ನ ಅನುಸರಿಸಲು ಸ್ವತಂತ್ರರಾಗಿರುತ್ತಾರೆ. ಆದರೆ, ಅದೇ ನ್ಯಾಯಾಧೀಶರು ನ್ಯಾಯವನ್ನ ನೀಡುವ ಸಂದರ್ಭದಲ್ಲಿ ಯಾವುದೇ ದೇವರು ಸಂವಿಧಾನಕ್ಕಿಂತ ಮೇಲಿರಲು ಅಥವಾ ನಿರ್ಧಾರದ ಮೂಲವಾಗಿರಲು ಸಾಧ್ಯವಿಲ್ಲ. ಇದನ್ನ ನ್ಯಾಯಾಧೀಶರು ಗಮನಿಸಬೇಕು.

ಹೌದು, ದೇವರ ಮೇಲಿನ ನಂಬಿಕೆಯು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಧೈರ್ಯವನ್ನು ನೀಡುತ್ತದೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಆ ಭೂಮಿಯ ಮೇಲೆ ಹಿಡಿತ ಸಾಧಿಸಲು ಎಂದಿಗೂ ಅನುಮತಿಸುವುದಿಲ್ಲ ಎಂದು ತೀರ್ಪು ನೀಡಲು ಅಪಾರ ಧೈರ್ಯ ಅಗತ್ಯವಾಗಿತ್ತು. ಆದರೆ, ಚುನಾವಣಾ ಸಂದರ್ಭದಲ್ಲಿ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷ ಚುನಾವಣಾ ಅಸ್ತ್ರವಾಗಿ ರಾಮಮಂದಿರವನ್ನು ನಿರ್ಮಾಣ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದ ಸಂದರ್ಭದಲ್ಲಿ ಅಯೋಧ್ಯೆ ಪೀಠದ ತೀರ್ಪು ಯಾವುದೇ ಧೈರ್ಯವನ್ನು ಒಳಗೊಂಡಿರಲಿಲ್ಲ.

ದೇವರ ಜತೆಗೆ ನೇರವಾಗಿ ಸಂವಹನ ನಡೆಸುವ ಮತ್ತು ದೇವರ ಇಚ್ಛೆ ಹಾಗೂ ಸೂಚನೆಗಳನ್ನ ಅನುಸರಿಸುತ್ತೇನೆ ಎಂದು ಹೇಳಿಕೊಳ್ಳುವ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ. ತಾವು ಜೈವಿಕವಾಗಿ ಹುಟ್ಟಿಲ್ಲವೆಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಸರಿಸಮನಾಗಿ ದೈವಿಕ ಇಚ್ಛೆಯಿಂದ ತೀರ್ಪು ನೀಡುವ ಮುಖ್ಯ ನ್ಯಾಯಾಧೀಶರು ಈ ದೇಶದಲ್ಲಿದ್ದಾರೆ. ಇಂತಹ ದುರಂತದ ಸಮಯದಲ್ಲಿ, ನ್ಯಾಯಾಲಯದ ನ್ಯಾಯದೇವತೆ ಕಣ್ಣಿಗೆ ಕಟ್ಟಿದ ಕಪ್ಪು ಬಟ್ಟೆ ಮಾತ್ರವಲ್ಲದೇ, ನಮ್ಮೆಲ್ಲರ ಕಣ್ಣುಗಳಿಗೂ ಇದ್ದ ಕಪ್ಪು ಪಟ್ಟಿಯನ್ನೂ ತೆಗೆದು, ಸತ್ಯದ ಅರಿವುಕೊಟ್ಟ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ನಾವು ಧನ್ಯವಾದ ಹೇಳಲೇಬೇಕು.

ಮಾಹಿತಿ ಮೂಲ: ದಿ ವೈರ್

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X