ಷೇರು ಮಾರುಕಟ್ಟೆಯಲ್ಲಿ ಕಂಪನಿಗಳ ಷೇರುಗಳನ್ನು ಕೊಂಡುಕೊಂಡರೆ ಒಂದರ್ಥದಲ್ಲಿ ಆ ಕಂಪನಿಗೆ ಷೇರುದಾರರು ಮಾಲೀಕನಾಗುತ್ತಾರೆ. ಅಂದರೆ, ಆ ಕಂಪನಿಯ ಲಾಭ ನಷ್ಟದಲ್ಲಿಯೂ ಪಾಲುದಾರನಾಗಿರುತ್ತಾರೆ. ಹಾಗಾಗಿ ಹೂಡಿಕೆ ಮಾಡುವಾಗ ಅಥವಾ ಷೇರುಗಳನ್ನು ಖರೀದಿಸುವಾಗ ಕಂಪನಿಗಳ ಬಗ್ಗೆ ಹೆಚ್ಚಾದ ಅಧ್ಯಯನ ನಡೆಸಬೇಕಾಗುತ್ತದೆ.
ಮುಖ್ಯವಾಗಿ ನಾವು ಷೇರು ಮಾರುಕಟ್ಟೆಯಲ್ಲಿ ದೀರ್ಘಾವಧಿ ಹೂಡಿಕೆ ಮಾಡುವಾಗ ಟೆಕ್ನಿಕಲ್ ಅನಾಲಿಸಿಸ್ ಮಾಡದೇ ಇದ್ದರು, ಮುಖ್ಯವಾಗಿ stockಗಳ Fundamental ಅನಾಲಿಸಿಸ್ ಮಾಡಬೇಕಾಗುತ್ತದೆ. ಹೂಡಿಕೆ ಮಾಡುವ ಕಂಪನಿಯ ಆದಾಯ, ವ್ಯಾಪ್ತಿ, ಮತ್ತು ಮುಂದಿನ ಯೋಜನೆಗಳನ್ನು ಶೋಧಿಸಬೇಕಾಗುತ್ತದೆ. ಅಂತಹ ಕೆಲವು ನಿರ್ದಿಷ್ಟ ಅಂಶಗಳನ್ನು ಈ ಕೆಳಗಿನಂತೆ ನೋಡಬಹುದು.
- ಕಂಪನಿಯ ಚಾರ್ಟ್: ಮೊದಲಿಗೆ ಕಂಪನಿಯ ಪಾರ್ಟಿಸಿಪೇಟ್ ಚಾರ್ಟ್ಅನ್ನು ದೀರ್ಘಾವಧಿ ಅಂಶವಾಗಿ ನೋಡಬೇಕು. ಉದಾಹರಣೆಗೆ: A ಕಂಪನಿಯು ಷೇರು ಮಾರುಕಟ್ಟೆಯ ಪಟ್ಟಿಯಲ್ಲಿ ನೊಂದಾಯಿಸಿಕೊಂಡ ದಿನದಿಂದ ಇಲ್ಲಿಯವೆರೆಗಿನ ಗ್ರಾಫ್ ಚಾರ್ಟ್ ಅನ್ನು ನೋಡಬೇಕು. ಅದರಲ್ಲಿ ನಿಧಾನಗತಿಯಲ್ಲಿ ಏರುಮುಖವಾಗಿ ಇದ್ದಲ್ಲಿ A ಕಂಪನಿಯು ಕಾಲಕಾಲಕ್ಕೆ ಅಭಿವೃದ್ದಿ ಕಾಣುತ್ತಿದೆ ಎಂದು ಪರಿಗಣಿಸಬೇಕಾಗುತ್ತದೆ.
- ಬ್ಯಾಲೆನ್ಸ್ ಶೀಟ್: ಇದು ಹೆಚ್ಚಾಗಿ ಗಮನಿಸಬೇಕಾಗಿರುವ ಅಂಶಗಳಲ್ಲಿ ಒಂದು. ಯಾವುದೇ ಕಂಪನಿಯ ಆದಾಯ ಮತ್ತು ಸಾಲ ಹಾಗೂ ಚಿರಾಸ್ತಿಗಳನ್ನು ಗಮನಿಸಿಯೇ ಹೂಡಿಕೆ ಮಾಡಬೇಕಾಗುತ್ತದೆ. ಮುಖ್ಯವಾಗಿ ವಾರ್ಷಿಕ ಆದಾಯದಲ್ಲಿ ಹೆಚ್ಚೆಚ್ಚು ಆದಾಯ ಮಾಡದಿದ್ದರೂ, ಸರಾಸರಿ ಆದಾಯವನ್ನು ಹೆಚ್ಚಿಸಿಕೊಂಡ ಕಂಪನಿಯನ್ನೇ ಆಯ್ದುಕೊಳ್ಳಬೇಕು. ಹಾಗೆಯೇ ಕಂಪನಿಯ ಸಾಲ ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡುತ್ತಾ ಬಂದಿರಬೇಕು. ಒಂದು ವೇಳೆ ಕಂಪನಿಯು ಸಾಲ ಪಡೆಯುತ್ತಿದ್ದರೆ ಕಂಪನಿಯ ವಿಸ್ತರಣೆಯನ್ನೇನಾದರು ಮಾಡುವ ಉದ್ದೇಶ ಹೊಂದಿದ್ದಾರೆಯೇ? ಇದಕ್ಕೆ ತಕ್ಕಂತೆ ಕಂಪನಿಯ ಆಸ್ತಿ ಬೆಳವಣಿಗೆ ಹೊಂದಿದೆಯೇ ಎನ್ನುವ ಅಂಶವನ್ನು ನೋಡಬೇಕಾಗುತ್ತದೆ.
- EPS (Earning per share): ಹೆಸರೇ ಹೇಳುವಂತೆ ನಾವು ಕೊಳ್ಳುವ ಷೇರುಗಳು ಎಷ್ಟು ಲಾಭಗಳಿಸಬಹುದು ಎನ್ನುವ ಲೆಕ್ಕಾಚಾರವಷ್ಟೆ. ಇದು ಕೂಡ ವರ್ಷದಿಂದ ವರ್ಷಕ್ಕೆ ಸರಾಸರಿ ಪ್ರಮಾಣದಲ್ಲಿ ಏರಿಕೆ ಹೊಂದುತ್ತಿರಬೇಕಾಗಿರುತ್ತದೆ. ಕಂಪನಿಯ ಖರ್ಚುವೆಚ್ಚ ಹಾಗೂ ತೆರಿಗೆ ಎಲ್ಲವನ್ನು ಕಳೆದು, ಉಳಿದ ಲಾಭಾಂಶದಲ್ಲಿ ಕಂಪನಿಯ ಶೇರುಗಳನ್ನು ಭಾಗಿಸಿದರೆ EPS ಸಿಗುತ್ತದೆ. (EPS=Earning per share/Number Of share)
- Market Capitalization: ದೀರ್ಘಾವಧಿ ಹೂಡಿಕೆಗೆ ಮತ್ತೊಂದು ಮುಖ್ಯ ಅಂಶ ಈ ಮಾರುಕಟ್ಟೆ ಬಂಡವಾಳ. ಅಧಿಕವಾದ ಬಂಡವಾಳ ಇರುವ ಕಂಪನಿಗಳು ದೀರ್ಘಾವಧಿ ಹೂಡಿಕೆಗೆ ಹೆಚ್ಚು ಉಪಯುಕ್ತ. ಈ ಮಾರ್ಕೆಟ್ ಕ್ಯಾಪ್ ಹೇಗೆ ನಿರ್ಧಾರ ಆಗುತ್ತದೆ ಎಂದರೆ, ಕಂಪನಿಯ ಒಟ್ಟು ಶೇರುಗಳಿಂದ ಈಗಿನ ಶೇರು ಬೆಲೆಯಿಂದ ಗುಣಿಸಿದಾಗ ಇದರ ಒಟ್ಟು ಮೊತ್ತ ಸಿಗುತ್ತದೆ. (Market Cap= Total number Of Shares* Share price)
- PE (Price to Earning): ನಾವು ಯಾವುದೇ ಷೇರುಗಳನ್ನ ತೆಗೆದುಕೊಂಡಾಗ ಆ ಕಂಪನಿಯಿಂದ ನಾವು ಒಂದು ರೂಪಾಯಿಯನ್ನು ದುಡಿಯಬೇಕು ಎಂದಾದರೆ, ಕಂಪನಿಗೆ ನಾವು ಎಷ್ಟು ಹಣ ಕೊಡಬೇಕು ಎಂಬುದನ್ನೇ PE Ratio ಎನ್ನುವುದು. ಇದು ಆದಷ್ಟು ಕಮ್ಮಿ ಇದ್ದರೆ ಒಳಿತು. ಇಂದಿನ ಷೇರು ಬೆಲೆಯನ್ನು EPS ನಿಂದ ಭಾಗಿಸಿದರೆ PE Ratio ಸಿಗುತ್ತದೆ. (PE=Share price/EPS)
- Book Value: ಒಂದು ವೇಳೆ ಕಂಪನಿಯು ಷೇರು ಮಾರುಕಟ್ಟೆಯ ಪಟ್ಟಿಯಿಂದ ಹೊರಹೋದರೆ ಕಂಪನಿಯ ಶೇರುದಾರರಿಗೆ ಕೊನೆಗೆ ಪ್ರತೀ ಷೇರಿಗೆ ಎಷ್ಟು ಪರಿಹಾರ ಕೊಡಲಾಗುತ್ತದೆ ಎಂದು ತಿಳಿಸುವುದೇ ಬುಕ್ ವ್ಯಾಲ್ಯು.
- ROCE(Return on capital employed): ಈ ಅಂಶವೂ ಕೂಡ ಹೆಚ್ಚು ಪ್ರಮುಖವಾದುದ್ದು. ಕಂಪನಿಯು ತೆರಿಗೆ ಕಟ್ಟುವ ಮುಂಚೆ ಮತ್ತು ಖರ್ಚು ಮಾಡುವ ಮುಂಚೆ ಎಷ್ಟು ಆದಾಯ ಗಳಿಸಿದೆಯೋ ಅದರಿಂದ ಅಸೆಟ್ ಉಳಿತಾಯದಿಂದ ಭಾಗಿಸಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಅಂದರೆ, ಕಂಪನಿಯ ನೆಟ್ ಪ್ರಾಫಿಟ್ನಿಂದ ಒಟ್ಟು ಅಸೆಟ್ಅನ್ನು ಭಾಗಿಸಿದರೆ ROCE ಸಿಗುತ್ತದೆ. (ROCE= Total Earnings/Capital)