ಬಾಳೆ ಸಮಗ್ರ ರೋಗ- ನಿರ್ವಹಣಾ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವಲ್ಲಿ ಮೊದಲ ಸಾಲಿನ ರಕ್ಷಣೆ ಒದಗಿಸುವ ಬಗ್ಗೆ ಹಾಗೂ ಬಾಳೆಹಣ್ಣಿನ ಅಂಗಾಂಶ ಕೃಷಿ ಬಗ್ಗೆ ತರಬೇತಿ ಶಿಬಿರವನ್ನು ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿ ಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ವಿದ್ಯಾಲಯದಲ್ಲಿ ಅಯೋಜಿಸಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಕೃಷಿಯನ್ನು ಶಾಲಾ ಕಾಲೇಜುಗಳಲ್ಲಿ ಮುಖ್ಯವಾಗಿ ಕಲಿಕೆಯಾಗಿ ಮುಂದುವರಿಸಬೇಕಾಗಿದೆ. ಕೃಷಿಯಲ್ಲಿ ಬರುವ ತೋಟಗಾರಿಕೆ ಬೆಳೆಯಾದ ಬಾಳೆ ಬಗ್ಗೆ ಹಾಗೂ ವಿವಿಧ ಬಾಳೆ ತಳಿಗಳ ಕುರಿತು ಒಳ್ಳೆಯ ಮಾಹಿತಿಯನ್ನು ಶಿಬಿರದಲ್ಲಿ ತಿಳಿಸಲಾಯಿತು.
ವಿಶಿಷ್ಟವಾಗಿ ಗಿಡಗಳನ್ನು ಬೆಳೆಯುವ ಶೈಲಿಯನ್ನು ಮತ್ತು ಕೃಷಿಯು ಪ್ರಸರಣ ತಂತ್ರವಾಗಿ ರೋಗ-ಮುಕ್ತ ನೆಟ್ಟ ವಸ್ತುಗಳನ್ನು ತಯಾರಿಸಲು ದೃಢವಾದ ವಿಧಾನ ಒದಗಿಸುವ ಬಗ್ಗೆ ಕಲಿಸಿಕೊಡಲಾಯಿತು.
ಈ ಸುದ್ದಿ ಓದಿದ್ದೀರಾ? ಹಾಸನ | ಬಾಡಿಗೆಗೆ ಕರೆದೊಯ್ಯುವ ವಿಚಾರ: ಆಸ್ಪತ್ರೆ ಆವರಣದಲ್ಲೇ ಬಡಿದಾಡಿಕೊಂಡ ಆ್ಯಂಬುಲೆನ್ಸ್ ಚಾಲಕರು!
ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಿಗೆ ಅಂಗಾಂಶ ಕೃಷಿ , ಬಾಳೆ ತಯಾರಿಸುವ ವಿವಿಧ ಹಂತಗಳ ಬಗ್ಗೆ ಹಾಗೂ ಅಂಗಾಂಶ ಕೃಷಿಯಲ್ಲಿ ಉಪಯೋಗಿಸುವ ತಾಯಿ ಸಸ್ಯದ ಭಾಗಗಳು ಯಾವುವು, ಸಾಮಾನ್ಯವಾಗಿ ಬಾಳೆ ಮತ್ತು ಅಂಗಾಂಶ ಬಾಳೆಗೆ ಇರುವ ವ್ಯತ್ಯಾಸ ಏನು ಮತ್ತು ಯಾವ ರೀತಿ ಅಂಗಾಂಶ ಬಾಳೆಯು ಕೀಟ ಮತ್ತು ರೋಗ ರಹಿತವಾಗಿ ಮುಕ್ತಗೊಳಿಸುವ ಬಗ್ಗೆ ತಿಳಿಸಲಾಯಿತು.
ಸಾಮಾನ್ಯ ಬಾಳೆ ಮತ್ತು ಅಂಗಾಂಶ ಬಾಳೆಗೆ ಇರುವ ವ್ಯತ್ಯಾಸ ಏನು ಮತ್ತು ಯಾವ ರೀತಿ ಅಂಗಾಂಶ ಬಾಳೆಯು ಕೀಟ ಮತ್ತು ರೋಗ ರಹಿತ ಬೆಳೆಗಳಾವುವು, ಅಂಗಾಂಶ ಕೃಷಿ ಬಾಳೆ ತಳಿಗಳು ಮತ್ತು ಅವುಗಳು ಸಿಗುವ ಸ್ಥಳಗಳ ಬಗ್ಗೆ ಜೈವಿಕ ತಂತ್ರಜ್ಞಾನ ವಿಭಾಗ ಮುಖ್ಯಸ್ಥರಾದ ಡಾ. ಗೀತಾ ಗೋವಿಂದರವರು ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಶಿಬಿರದಲ್ಲಿ ಮಾಹಿತಿ ತಿಳಿಸಿಕೊಟ್ಟರು.
