ನ್ಯೂಜಿಲೆಂಡ್‌ನ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ದಾಳಿಗೆ ಟೀಂ ಇಂಡಿಯಾ ಬ್ಯಾಟರ್‌ಗಳು ಸರದಿ ಸಾಲಿನಂತೆ ಪೆವಿಲಿಯನ್‌ನ ಹಾದಿ ಹಿಡಿದರು. ಪುಣೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ದಿನವಾದ ಇಂದು 16/1 ರನ್‌ನೊಂದಿಗೆ ಮೊದಲ ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಮಿಚೆಲ್ ಸ್ಯಾಂಟನರ್ ಸ್ಪಿನ್‌ಗೆ ಸವಾಲು ಒಡ್ಡಲಾಗದೆ 45.3 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಆಯಿತು.
ಇದರೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಹಿನ್ನಡೆ ಅನುಭವಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ನೀಡಿದ 259 ರನ್‌ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕಿವೀಸ್‌ನ ಮಿಚೆಲ್ ಸ್ಯಾಂಟನರ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.
ಯಶಸ್ವಿ ಜೈಸ್ವಾಲ್(30), ಶುಭಮನ್ ಗಿಲ್ (30) ಹಾಗೂ ರವೀಂದ್ರ ಜಡೇಜಾ (38) ಹೊರತುಪಡಿಸಿದರೆ ಉಳಿದ ಆಟಗಾರರಿಂದ ಪ್ರತಿರೋಧ ವ್ಯಕ್ತವಾಗಲಿಲ್ಲ.
ಅದ್ಭುತ ಬೌಲಿಂಗ್ ಮಾಡಿದ ಮಿಚೆಲ್ ಸ್ಯಾಂಟನರ್ 53 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸಿದರು. ಇನ್ನುಳಿದಂತೆ ಗ್ಲೆನ್ ಫಿಲಿಪ್ಸ್ 26/2 ಹಾಗೂ ಟಿಮ್ ಸೌಥಿ 18/1 ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಆಲೌಟ್ ಮಾಡಿದರು.
