ಜಪ್ತಿ ಮಾಡಿದ ₹25 ಸಾವಿರ ಕೋಟಿ ಮೌಲ್ಯದ ಮಾದಕ ದ್ರವ್ಯ ಪಾಕ್‌ನಿಂದ ಬಂದಿದ್ದು: ಎನ್‌ಸಿಬಿ

Date:

Advertisements

ಕೊಚ್ಚಿಯ ಕರಾವಳಿಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಭಾನುವಾರ (ಮೇ 15) ವಶಪಡಿಸಿಕೊಂಡಿದ್ದ ₹25 ಸಾವಿರ ಕೋಟಿ ಮೌಲ್ಯದ 2,525 ಕೆಜಿ ಮೆಥಾಂಫೆಟಮೈನ್ ಎಂಬ ಮಾದಕ ದ್ಯವ್ಯವು ಪಾಕಿಸ್ತಾನದ ಮಾದಕದ್ರವ್ಯ ಕಿಂಗ್‌ಪಿನ್ ಹಾಜಿ ಸಲೀಂ ತಂಡದಿಂದ ಸರಬರಾಜಾಗಿದೆ.

ವಶಪಡಿಸಿಕೊಂಡ ಮೆಥಾಂಫೆಟಮೈನ್ ಮಾದಕದ್ತವ್ಯದ ಬೆಲೆ ಅಕ್ರಮ ಮಾರುಕಟ್ಟೆಯಲ್ಲಿ ₹12,000 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಎನ್‌ಸಿಬಿ ಈ ಹಿಂದೆ ಹೇಳಿತ್ತು. ಆದರೆ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಿದಾಗ ಇದರ ಬೆಲೆ ₹25 ಸಾವಿರ ಕೋಟಿಗೂ ಹೆಚ್ಚಿದೆ ಎಂದು ಎನ್‌ಸಿಬಿ ತಿಳಿಸಿದೆ. ಇದು ದೇಶದ ಅತೀ ದೊಡ್ಡ ರವಾನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಪ್ರಸ್ತುತ ವಶಪಡಿಸಿಕೊಂಡಿರುವ ಮಾದಕದ್ರವ್ಯ ಅಕ್ರಮ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಶುದ್ಧ ಬಿಳಿ ಸ್ಫಟಿಕ ರೂಪದಲ್ಲಿದೆ. ಹೀಗಾಗಿ, ಇದರ ಮಾರುಕಟ್ಟೆ ಮೌಲ್ಯ ₹25,000 ಕೋಟಿ ರೂಪಾಯಿ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisements

“ಈ ಮಾದಕದ್ರವ್ಯವು ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳಿಗೆ ಸರಬರಾಜು ಮಾಡಲು ರವಾನೆಯಾಗಿದೆ. ಕಿಂಗ್‌ಪಿನ್ ಹಾಜಿ ಸಲೀಂ ತಂಡದ ಸದಸ್ಯನಾಗಿ ಕೆಲಸ ಮಾಡುತ್ತಿದ್ದ 29 ವರ್ಷದ ಪಾಕಿಸ್ತಾನದ ಪ್ರಜೆಯನ್ನು ನಾವು ಬಂಧಿಸಿದ್ದೇವೆ. ಬಂಧಿತ ವ್ಯಕ್ತಿಯು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಗುಂಪುಗಳ ಭಾಗವಾಗಿದ್ದ”ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಹಾಜಿ ಸಲೀಂ ಗುಂಪಿನ ಮಾದಕವಸ್ತು ಕಳ್ಳಸಾಗಣೆ ಪ್ರಯತ್ನಗಳನ್ನು ಎನ್‌ಸಿಬಿ ಭೇದಿಸಿದ್ದರೂ, ಇಷ್ಟು ದೊಡ್ಡ ಪ್ರಮಾಣದ ಮಾದಕದ್ರವ್ಯ ವಶಪಡಿಸಿಕೊಂಡಿರುವುದು ಇದೇ ಮೊದಲಾಗಿದೆ.

ಈ ಸುದ್ದಿ ಓದಿದ್ದೀರಾ? ಸಿಬಿಐ ನಿರ್ದೇಶಕರಾಗಿ ನೇಮಕರಾದ ಡಿಜಿಪಿ ಪ್ರವೀಣ್‌ ಸೂದ್‌

ಇರಾನ್ ಗಡಿಗೆ ಸಮೀಪದಲ್ಲಿರುವ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಬಂದರು ಪಟ್ಟಣವಾದ ಜಿವಾನಿಯಿಂದ ಈ ಮಾದಕವಸ್ತು ಬಂದಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.

“ಮೆಥಾಂಫೆಟಮೈನ್ ತಯಾರಿಸಲು ಬಳಸುವ ಸ್ಯೂಡೋಫೆಡ್ರಿನ್ ಎಂಬ ರಾಸಾಯನಿಕ ವಸ್ತುವು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸುಲಭವಾಗಿ ಲಭ್ಯವಿದೆ. ಈ ಪ್ರದೇಶದಲ್ಲಿ ಮೆಥಾಂಫೆಟಮೈನ್ ತಯಾರಿಕೆಯಲ್ಲಿ ತೊಡಗಿರುವ ಸ್ಥಳೀಯ ಪ್ರಯೋಗಾಲಯಗಳಿವೆ. ಇದನ್ನು ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ, ಸಣ್ಣ ದೋಣಿಗಳ ಮೂಲಕ ಲೋಡ್ ಮಾಡಿ ಹಡಗಿನ ಮೂಲಕ ಅಂತಾರಾಷ್ಟ್ರೀಯ ಸಮುದ್ರಗಡಿಗೆ ರವಾನಿಸಲಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಮೆಥಾಂಫೆಟಮೈನ್ ಕೊಕೇನ್‌ಗಿಂತ ಅಗ್ಗವಾಗಿದೆ, ಆದ್ದರಿಂದ ಇದನ್ನು ಬಡವರ ಕೊಕೇನ್ ಎಂದೂ ಕರೆಯುತ್ತಾರೆ. ದಕ್ಷಿಣ ಭಾರತದಲ್ಲಿ ಮೆಥಾಂಫೆಟಮೈನ್ ವಶಪಡಿಸಿಕೊಂಡ ಹಲವಾರು ನಿದರ್ಶನಗಳಿವೆ’’ ಎಂದು ಎನ್‌ಸಿಬಿ ತಿಳಿಸಿವೆ.

“2022ರ ಫೆಬ್ರವರಿಯಲ್ಲಿ ನಾವು ಆಪರೇಷನ್ ಸಮುದ್ರಗುಪ್ತ್ ಎಂಬ ಕಾರ್ಯಾಚರಣೆ ಆರಂಭಿಸಿದ್ದೇವೆ. ಈ ಕಾರ್ಯಾಚರಣೆಯಡಿ, ಎನ್‌ಸಿಬಿ ತಂಡವು ಇದುವರೆಗೆ ಸುಮಾರು 4000 ಕೆಜಿಯಷ್ಟು ವಿವಿಧ ರೀತಿಯ ಮಾದಕದ್ರವ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ, ಫೆಬ್ರವರಿ 2022 ರಲ್ಲಿ, ಎನ್‌ಸಿಬಿ ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯ ಮೂಲಕ ಗುಜರಾತ್ ಕರಾವಳಿಯಿಂದ 529 ಕೆಜಿ ಹಶಿಶ್, 221 ಕೆಜಿ ಮೆಥಾಂಫೆಟಮೈನ್ ಮತ್ತು 13 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X