ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಚಿಕ್ಕಮಗಳೂರು ಜಿಲ್ಲೆಯ ಹೆಚ್.ಎಂ ನಾರಾಯಣ್ ಅವರಿಗೆ ಕನ್ನಡ ಸೇನೆ ಕಚೇರಿಯಲ್ಲಿ ಕಾರ್ಯಕರ್ತರಿಂದ ಸನ್ಮಾನಿಸಿ ಗೌರವಿಸಲಾಯಿತು.
“ಕನ್ನಡ ಸೇವೆಯಲ್ಲಿ ನಿರಂತರ ಶ್ರಮಿಸಿದ ಅನೇಕರಿಗೆ ರಾಜ್ಯ ಮಟ್ಟದಲ್ಲಿ ಉನ್ನತ ಸ್ಥಾನಮಾನಗಳು ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ಸನ್ನಡತೆ ಹಾಗೂ ಸಹಬಾಳ್ವೆ ಹೊಂದುವ ವ್ಯಕ್ತಿತ್ವದ ಮನುಷ್ಯ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಾರಾಯಣ್ ಅವರು ಬಡವರು, ನಿವೇಶನ ರಹಿತರು, ಹಿಂದುಳಿದ ಹಾಗೂ ಶೋಷಿತರ ಪರವಾಗಿ ಉತ್ತಮ ಕೆಲಸ ನಿರ್ವಹಿಸಲಿ. ತಮ್ಮ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಕೀರ್ತಿ ಎತ್ತಿ ಹಿಡಿಯುವಂತಾಗಲಿ” ಎಂದು ಕನ್ನಡ ಸೇನೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ತಿಳಿಸಿದರು.
ರಾಜ್ಯದಲ್ಲಿ ಯಾವುದೇ ಮಂಡಳಿ, ಸರ್ಕಾರ ನೇಮಕಗೊಳಿಸುವ ಸ್ಥಾನಗಳಲ್ಲಿ ಅರ್ಹರಾದವರು ಸಮಸಮಾಜ ನಿರ್ಮಿಸುವ ದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧರ ಆಶಯಗಳನ್ನು ನೆಲೆಯೂರಿಸಲು ಸಾಧ್ಯ ಎಂದು ಕನ್ನಡ ಸೇನೆ ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ ತಿಳಿಸಿದರು.
ಇದನ್ನೂ ಓದಿದ್ದೀರಾ: ಚಿಕ್ಕಮಗಳೂರು | ಗೌರಿ ಲಂಕೇಶ್ ಕೊಲೆ ಪಾತಕರಿಗೆ ಸನ್ಮಾನ; ಎದ್ದೇಳು ಕರ್ನಾಟಕದಿಂದ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಕನ್ನಡ ಸೇನೆ ಚಿಕ್ಕಮಗಳೂರು ನಗರ ಘಟಕದ ಉಪಾಧ್ಯಕ್ಷ ಅನ್ವರ್, ಸಂಘಟನಾ ಕಾರ್ಯದರ್ಶಿ ಸತೀಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರ, ಕಾರ್ಯಕರ್ತರಾದ ಹರಿಶಂಕರ್, ದೇವರಾಜ್, ವಿನಯ್, ಶಾಹೀದ್, ಸುಜಿತ್, ರೋಹನ್, ಬಾಬಣ್ಣ ಇನ್ನಿತರರು ಭಾಗವಹಿಸಿದ್ದರು.
