ಇರಾನ್ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಲು ಇಸ್ರೇಲ್ ಮುಂದಾಗಿದ್ದು ಅದರಂತೆ ಇಂದು (ಅ. 26) ರಂದು ಬೆಳಿಗ್ಗೆ ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ.
ಅಕ್ಟೋಬರ್ 1ರ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, “ಇರಾನ್ ನಡೆಸಿದ ದಾಳಿಗೆ ಸರಿಯಾದ ಬೆಲೆ ತೆರಬೇಕಾಗುತ್ತದೆ, ಇರಾನ್ ನಡೆಸುವ ದಾಳಿಯನ್ನು ಎದುರಿಸಲು ನಾವು ತಯಾರಿದ್ದೇವೆ. ಆದರೆ ನಮ್ಮ ದಾಳಿಯನ್ನು ಎದುರಿಸಲು ನೀವು ತಯಾರಿದ್ದೀರಾ” ಎಂದು ಇರಾನ್‌ಗೆ ಎಚ್ಚರಿಕೆ ನೀಡಿದ್ದರು.
ಶನಿವಾರ ಬೆಳಗ್ಗೆ ಇರಾನ್‌ನ ಟೆಹರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿರುವ ಸೇನಾ ನೆಲಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.
ಇಸ್ರೇಲ್ ವಿರುದ್ಧ ಇರಾನ್ ಆಡಳಿತವು ನಿರಂತರವಾಗಿ ನಡೆಸುತ್ತಿರುವ ದಾಳಿಗೆ ಪ್ರತಿದಾಳಿ ನಡೆಸುತ್ತಿದ್ದೇವೆ. ದೇಶವನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗೆ ಇದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಹೇಳಿದೆ.
ಇಸ್ರೇಲ್ ಸೇನೆ, ಇರಾನ್ ವಿರುದ್ಧ ಶನಿವಾರ ದಾಳಿ ಆರಂಭಿಸಿವೆ. ಈ ಸಂಬಂಧ ಟ್ವಿಟ್ ಮಾಡಿರುವ ಐಡಿಎಫ್, “ಇರಾನ್ ಆಡಳಿತವು ಇಸ್ರೇಲ್ ವಿರುದ್ದ ತಿಂಗಳಿನಿಂದ ನಿರಂತರವಾಗಿ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿನ ಸೇನಾ ನೆಲೆಗಳ ಮೇಲೆ ಐಡಿಎಫ್ ದಾಳಿ ನಡೆಸುತ್ತಿವೆ” ಎಂದು ತಿಳಿಸಿದೆ.