“ರಾಜ್ಯದ ಜನರಿಗೆ ಸುಖ, ಶಾಂತಿ, ನೆಮ್ಮದಿಯನ್ನು ತಾಯಿ ನೀಡಲಿ ಎಂದು ಸರ್ಕಾರದ ಪರವಾಗಿ ಪ್ರಾರ್ಥನೆ ಸಲ್ಲಿಸಲು ತಾಯಿ ಹಾಸನಾಂಬ ದೇವಿಯ ದರ್ಶನಕ್ಕೆ ಬಂದಿದ್ದೇನೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಕುಟುಂಬ ಸಮೇತ ಹಾಸನ ಜಿಲ್ಲೆಯ ಹಾಸನಾಂಬ ದೇವಿಯ ದರ್ಶನದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ದುಃಖವನ್ನು ದೂರ ಮಾಡುವವಳು ದುರ್ಗಾ ಮಾತೆ. ಈ ತಾಯಿಯ ಆಶೀರ್ವಾದದಿಂದ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಜನರ ಜೀವನದಲ್ಲಿ ಬದಲಾವಣೆ, ಆರೋಗ್ಯ, ಐಶ್ವರ್ಯವನ್ನು ದೇವಿ ನೀಡಲಿ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಕಾ.ತ. ಚಿಕ್ಕಣ್ಣನವರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ
“ಈ ವರ್ಷ ಮಳೆ ಬಂದ ರೀತಿಯಲ್ಲೇ ಪ್ರತಿ ವರ್ಷವೂ ಮಳೆ ಬರಲಿ, ಜನರಿಗೆ ಸುಖವನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಈ ವರ್ಷದ ದಸರಾ ಉತ್ಸವವನ್ನು ಸರ್ಕಾರ ಬಹಳ ವಿಜೃಂಭಣೆಯಿಂದ ಆಚರಿಸಿದೆ. ಅದೇ ರೀತಿಯಲ್ಲಿ ಹಾಸನಾಂಬ ದೇವಿಯ ಉತ್ಸವ ಉತ್ತಮವಾಗಿ ನೆರವೇರುತ್ತಿದೆ” ಎಂದು ಡಿಸಿಎಂ ತಿಳಿಸಿದರು.

ಹಾಸನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉತ್ತಮವಾಗಿ ದೀಪಾಲಂಕಾರ, ಹೂವಿನ ಅಲಂಕಾರ ಸೇರಿದಂತೆ ದೇವಿಯ ದರ್ಶನಕ್ಕೆ ಉತ್ತಮ ವ್ಯವಸ್ಥೆ, ನಾಗರೀಕರಿಗೆ ಉತ್ತಮ ದರ್ಶನ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಡಿಸಿಎಂ ಹೇಳಿದರು.
