ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಮತ್ತು ಮುಗಳಿಹಾಳ ಗ್ರಾಮದ ರೈತರು ಬೆಳೆದ ಮಕ್ಕೆ ಜೋಳವು ಹಲವು ದಿನಗಳಿಂದ ಸುರಿದ ಮಳೆಯಿಂದ ನಾಶವಾಗಿ ಮೊಳಕೆಯೊಡೆದಿತ್ತು. ಈ ಕುರಿತು ಈ ದಿನ.ಕಾಮ್ ರೈತರು ಮತ್ತು ಯರಗಟ್ಟಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಿವಪ್ರಕಾಶ ಪಾಟಿಲ್ ಅವರನ್ನು ಸಂಪರ್ಕಿಸಿ ಅಕ್ಟೋಬರ್ 20ರಂದು ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಅಧಿಕಾರಿಗಳು ಹಾನಿಗೊಳಗಾದ ರೈತರ ತೋಟಗಳಿಗೆ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ರೈತರಾದ ರಾಮಪ್ಪ ಹಾರುಗೊಪ್ಪ ಎರಡು ಎಕರೆ ಭೂಮಿಯಲ್ಲಿ ಗೋವಿನ ಜೊಳ ಬೆಳೆದಿದ್ದು ತೆನೆ ಮುರಿದು ತೋಟದಲ್ಲಿ ರಾಶಿ ಮಾಡಲು ಹಾಕಲಾಗಿತ್ತು. ಆದರೆ ಅನಿರೀಕ್ಷಿತವಾಗಿ ಮಳೆ ಬಂದಿದ್ದರಿಂದ ತೆನೆಗಳು ಮಳೆಗೆ ಸಿಲುಕಿ ಮೊಳಕೆಯೊಡೆದು ನಾಶವಾಗಿತ್ತು.
ಈ ಕುರಿತು ಈ ದಿನ.ಕಾಮ್ ಯರಗಟ್ಟಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಿವಪ್ರಕಾಶ್ ಪಾಟೀಲ್ ಇವರನ್ನು ಸಂಪರ್ಕಿಸಿ ಮಳೆಯಿಂದ ಹಾನಿಗೊಳಗಾದ ಮೆಕ್ಕೆಜೋಳದ ಕುರಿತು ಮಾಹಿತಿ ನೀಡಿ ರೈತರನ್ನು ಸಂಪರ್ಕಿಸಿ ಸಮೀಕ್ಷೆ ಮಾಡಿ ಪರಿಹಾರ ನೀಡುವಂತೆ ವರದಿ ಮಾಡಿತ್ತು.
ಈ ದಿನ.ಕಾಮ್ ವರದಿಗೆ ಸ್ಪಂದಿಸಿರುವ ಅಧಿಕಾರಿಗಳು ವರದಿ ಮಾಡಿದ ನಂತರ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಯರಗಟ್ಟಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಿವಪ್ರಕಾಶ ಪಾಟಿಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ರೈತರ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಈ ಕುರಿತು ವರದಿ ನೀಡಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಶಿಗ್ಗಾಂವಿ | ಬಂಡಾಯ ಸಾರಿದ್ದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮನವೊಲಿಕೆ ಯಶಸ್ವಿ
ಈ ಕುರಿತು ಈ ದಿನ ಕಾಮ್ ಜೊತೆ ಕರ್ನಾಟಕ ರಾಜ್ಯ ರೈತ ರ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ರಾದ ಸಿಂಧೂರ ತೆಗ್ಗಿ ಮಾತನಾಡಿ, “ಈ ದಿನ.ಕಾಮ್ ವರದಿ ಮಾಡಿದ ನಂತರ ಕೃಷಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದು, ಪರಿಹಾರ ನೀಡುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ. ವರದಿ ಮಾಡಿ, ರೈತರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದದ್ದಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು