ಮೈಸೂರು | ಮಹಿಳೆಯರ ಜೀವನ ರೂಪಿಸಿದ ‘ಸ್ವಾವಲಂಬಿ ಸ್ತ್ರೀ ಯೋಜನೆ’

Date:

Advertisements

ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರನ್ನು ಸಬಲೀಕರಣಗೊಳಿಸಲು ಆಯೋಜಿಸಲಾದ ‘ಸ್ವಾವಲಂಬಿ ಸ್ತ್ರೀ ಯೋಜನೆ’ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದ 11 ಮಂದಿ ಮಹಿಳೆಯರ ಜೀವನ ರೂಪಿಸಿದೆ.

ಮೈಸೂರಿನಲ್ಲಿ ತಳಿರು ಫೌಂಡೇಶನ್, ರೋಟರಿ ಮೈಸೂರು ಮತ್ತು ರೋಟರಿ ಮೈಸೂರು ಈಸ್ಟ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಎನ್‌ ಆರ್ ಫೌಂಡೇಶನ್ ಆಯೋಜಿಸಿದ್ದ ‘ಸ್ವಾವಲಂಬಿ ಸ್ತ್ರೀ ಯೋಜನೆ’ಯಾದ ಆಟೋ ರಿಕ್ಷಾ ಚಾಲನೆ ತರಬೇತಿ ಯೋಜನೆ ಮೂಲಕ 11 ಮಂದಿ ಮಹಿಳೆಯರು ನಗರಾದ್ಯಂತ ಆಟೋ ರಿಕ್ಷಾ ಓಡಿಸಲು ಅನುಮತಿ ದೊರಕಿಸಿಕೊಂಡಿದ್ದಾರೆ.

ಸ್ವಾವಲಂಬಿ ಸ್ತ್ರೀ ಯೋಜನೆಯಲ್ಲಿ ಆಟೋ ರಿಕ್ಷಾ ಚಾಲನೆ ತರಬೇತಿ ಜತೆಗೆ ಆರ್ಥಿಕ ಸಾಕ್ಷರತೆ, ಆತ್ಮರಕ್ಷಣೆ, ಸಂವಹನ ಕೌಶಲ್ಯ ಮತ್ತು ಸಮಾಲೋಚನೆ ಸೇರಿದಂತೆ ಅಗತ್ಯ ಜೀವನ ಕೌಶಲ್ಯಗಳ ತರಬೇತಿ ನೀಡಲಾಗಿದ್ದು, ಮಹಿಳೆಯರು ಆರ್‌ಟಿಒ ಪರವಾನಗಿ, ಬ್ಯಾಡ್ಜ್ ಮತ್ತು ಸಮವಸ್ತ್ರ ಹೊಂದಿದ್ದಾರೆ. ಈಗಾಗಲೇ ಎರಡನೇ ಬ್ಯಾಚ್ ಕೂಡ ಸಿದ್ಧವಾಗಿದೆ. ಈ ಬ್ಯಾಚ್‌ನಲ್ಲಿ 12 ಮಂದಿ ಮಹಿಳೆಯರು ತರಬೇತಿ ಪಡೆಯುತಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ರಾಮನಗರ | ಹಣಕ್ಕೆ ಬೇಡಿಕೆಯಿಟ್ಟ ಆರೋಪ: ಹಾರೋಹಳ್ಳಿ ಪ. ಪಂ. ಮುಖ್ಯಾಧಿಕಾರಿ ಶ್ವೇತಾ ಅಮಾನತು

ಎನ್‌ಆರ್ ಫೌಂಡೇಶನ್‌ನ ಅಧ್ಯಕ್ಷ ಆರ್ ಗುರು, ತಳಿರು ಫೌಂಡೇಶನ್ ಚಿತ್ರಾ, ರೋಟರಿ ಮೈಸೂರಿನ ಪ್ರವೀಣ್ ಎಂ, ರೋಟರಿ ಮೈಸೂರು ಈಸ್ಟ್‌ನ ರೋಹಿತ್ ಸುಬ್ಬಯ್ಯ ಸೇರಿದಂತೆ ಫಲಾನುಭವಿಗಳು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X