ಅಪ್ತಾಪ್ತ ಬಾಲಕಿಯನ್ನು ಆಕೆಯ ಪ್ರಿಯಕರ ಮತ್ತು ಆತನ ಇಬ್ಬರು ಸ್ನೇಹಿತರು ಕೊಲೆಗೈದು, ಹೂತುಹಾಕಿರುವ ಅಮಾನುಷ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಪಶ್ಚಿಮ ದೆಹಲಿಯ ನಂಗ್ಲೋಯಿ ನಿವಾಸಿ ಸೋನಿ ಹತ್ಯೆಗೀಡಾದ ಬಾಲಕಿ. ಆಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಆಕೆಗೆ ಗರ್ಭಪಾತ ಮಾಡಿಕೊಳ್ಳುವಂತೆ ಬಾಲಕಿಯ ಪ್ರಿಯಕರ ಸಂಜು ಸೂಚಿಸಿದ್ದನು. ಗರ್ಭಪಾತಕ್ಕೆ ಒಪ್ಪದ ಬಾಲಕಿ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಆ ಕಾರಣಕ್ಕೆ, ಬಾಲಕಿಯನ್ನು ತನ್ನ ಸ್ನೇಹಿರೊಂದಿಗೆ ಸೇರಿ ಸಂಜು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸೋನಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರು, ಆಗಾಗ್ಗೆ ಸಂಜು ಜೊತೆಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದರು.
ಘಟನೆಯ ದಿನ ಸೋನಿ ತನ್ನ ಮನೆಯಿಂದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಸಂಜುನನ್ನು ಭೇಟಿಯಾಗಲು ಹೋಗಿದ್ದಳು. ಆಕೆಯನ್ನು ಸಂಜು ಮತ್ತು ಆತನ ಇಬ್ಬರು ಸಹಚರರು ಹರಿಯಾಣದ ರೋಹ್ಟಕ್‌ಗೆ ಕರೆದೊಯ್ದರು. ಮೂವರೂ ಸೇರಿ ಆಕೆಯನ್ನು ಕೊಂದು ಶವವನ್ನು ಹೂತಿಹಾಕಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಸಂಜು ಮತ್ತು ಆತನ ಓರ್ವ ಸ್ನೇಹಿತನನ್ನು ಬಂಧಿಸಿದ್ದಾರೆ. ಮೂರನೇ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.