ಸಮಾಜವಾದಿ ಚಿಂತನೆಗಳಿಂದ ರಾಜಕಾರಣಕ್ಕೆ ಬಂದು, ಬಡವರಿಗೆ ಸ್ವಾಭಿಮಾನ ತಂದುಕೊಟ್ಟವರು ಬಂಗಾರಪ್ಪ. ಇವರು ಕರ್ನಾಟಕದ ಕಾರ್ಲ್ ಮಾರ್ಕ್ಸ್ ಎಂದೇ ಹೇಳಬಹುದು ಎಂದು ಪತ್ರಕರ್ತ ಟೆಲಿಕ್ಸ್ ರವಿಕುಮಾರ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಜಿಲ್ಲೆಯ ಸೊರಬದ ರಾಜಕುಮಾರ್ ರಂಗಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪರವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಎಸ್ ಬಂಗಾರಪ್ಪನವರ ಸಾಮಾಜವಾದಿ ಚಿಂತನೆಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಬಂಗಾರಪ್ಪ ಬಡವರಿಗೆ ಸ್ವಾಭಿಮಾನ ತಂದುಕೊಟ್ಟವರು. ಹಿಂದೂ ದೇವಾಲಯಗಳಿಗೆ ಕಾಯಕಲ್ಪ ಕೊಟ್ಟ ಅವರ ನಿಜವಾದ ಹಿಂದು, ಅವರ ಚಿಂತನೆಗಳು ಕೇವಲ ಪ್ರತಿಮೆಗಳನ್ನು ಸ್ಥಾಪಿಸುವುದರಲ್ಲಿ, ಆಚರಣೆಗಳಲ್ಲಿ ಮಾತ್ರ ಇರಬಾರದು ಎಂದರು.
ನಿಜವಾಗಿಯೂ ಅವರ ಆದರ್ಶಗಳನ್ನು, ಹೋರಾಟಗಳನ್ನು, ಅಳವಡಿಸಿಕೊಳ್ಳುವ ಮೂಲಕ ಬಂಗಾರಪನವರನ್ನು ಜೀವಂತವಾಗಿಡುವ ಕೆಲಸವಾಗಬೇಕಿದೆ” ಎಂದರು.
“ಬಂಗಾರಪ್ಪನವರ ರಾಜಕಾರಣ, ವಾದ ಚಿಂತನೆಗಳು ಶಾಶ್ವತವಾಗಿ ಹೋರಾಟದ ಬದುಕು, ಜನಪರ ಉಳಿಯಬೇಕಾದರೆ ಕುವೆಂಪು ವಿವಿಯಲ್ಲಿ ಬಂಗಾರಪ್ಪ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸಚಿವ ಮಧು ಬಂಗಾರಪ್ಪನವರು ಚಿಂತನೆ ನಡೆಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮದ್ಯ ಸೇವಿಸಿ ವಾಹನ ಚಾಲನೆ; ₹10,000 ದಂಡ ವಸೂಲಿ ಮಾಡಿದ ಸಂಚಾರಿ ಪಿಎಸ್‌ಐ
ಉಪನ್ಯಾಸಕ ಸಿರಾಜ್ ಅಹಮದ್ ಮಾತನಾಡಿ, “ರಾಜಕಾರಣವೆಂದರೆ ಈ ಕಾಲಕ್ಕೆ ಯುವಕರಲ್ಲಿ ಸಿನಿಕಥನ ಬಂದಿದೆ. ಆದರೆ ಬಂಗಾರಪ್ಪನವರ ರಾಜಕಾರಣ ಯುವಜನರನ್ನು ಸೆಳೆಯುವಲ್ಲಿ ಆಕರ್ಷಣೀಯವಾಗಿತ್ತು. ಅಂತಹ ರಾಜಕಾರಣದ ಚಿಂತನೆಗಳು ಈಗಿನ ಯುವಸಮೂಹವನ್ನು ಮುಟ್ಟಬೇಕು” ಎಂದರು.
ಸಚಿವ ಮಥುಬಂಗಾರಪ್ಪ, ಬಸವಂತಪ್ಪ ಕೋಟೆ, ಎಲ್ ಎಂ ಮುಕುಂದರಾಜ್, ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ್ ಮೂರ್ತಿ ಇದ್ದರು.