ರಾಯಚೂರು | ಜನರ ಸಮಸ್ಯೆಗಳ ಜೊತೆಗೆ ನಿಲ್ಲುವುದೇ ರಾಜಕೀಯ : ಸಂಸದ ಸಸಿಕಾಂತ್‌ ಸೆಂಥಿಲ್‌

Date:

Advertisements

ರಾಜಕೀಯ ಎಂಬ ಪದಕ್ಕೆ ಬಹಳ ಅರ್ಥಗಳಿವೆ. ನನ್ನ ದೃಷ್ಟಿಯಲ್ಲಿ ಜನರ ಸಮಸ್ಯೆಗಳ ಜೊತೆಗೆ ನಿಲ್ಲುವುದೇ ರಾಜಕೀಯ ಎಂದು ಮಾಜಿ ಜಿಲ್ಲಾಧಿಕಾರಿ, ಸಂಸದ ಸಸಿಕಾಂತ್‌ ಸೆಂಥಿಲ್ ಅಭಿಪ್ರಾಯಪಟ್ಟರು.

ರಾಯಚೂರು ನಗರದ ರಂಗಮಂದಿರದಲ್ಲಿ ಶನಿವಾರ ʼಈದಿನ.ಕಾಮ್‌ʼ ಮಾಧ್ಯಮ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ʼಈ ಹಿಂದೆ ನಾನು ರಾಜಕೀಯ ವ್ಯಕ್ತಿ ಅಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ, ಆದರೆ, ಈಗ ಹಾಗಿಲ್ಲ ಒಂದು ಪಕ್ಷದ ಸಿದ್ಧಾಂತದೊಂದಿಗೆ ಗುರುತಿಸಿಕೊಂಡು, ಸಂಸದನಾಗಿ ಜನರ ಸಮಸ್ಯೆಗಳೊಂದಿಗೆ ನಿಲ್ಲುವ ನಾನು ರಾಜಕೀಯ ವ್ಯಕ್ತಿ ಎಂದು ಹೇಳಲು ಹೆಮ್ಮೆಯಿದೆʼ ಎಂದರು.

ʼರಾಯಚೂರು ಜಿಲ್ಲೆಯ ಜನ ಎಂದರೆ ನನ್ನ ಕುಟುಂಬದ ಸದಸ್ಯರಿದ್ದಂತೆ, ರಾಯಚೂರು ಬರಬೇಕೆಂದರೆ ಮನೆಗೆ ಬಂದಷ್ಟು ಸಂತೋಷ. ಇಲ್ಲಿ ಜಿಲ್ಲಾಧಿಕಾರಿಯಾಗಿ ಕೆಲ ವರ್ಷಗಳ ಸೇವೆ ಸಲ್ಲಿಸುತ್ತಿದ್ದ ವೇಳೆ ಇಲ್ಲಿನ ಜನರು ತೋರುತ್ತಿದ್ದ ಪ್ರೀತಿ, ಅಭಿಮಾನ ಒಂಚೂರು ಕಡಿಮೆಯಾಗಿಲ್ಲ. ಇಂದಿಗೂ ಆ ಪ್ರೀತಿಯ ಸಂಬಂಧ ಹಾಗೇ ಗಟ್ಟಿಯಾಗಿ ಉಳಿದಿದೆʼ ಎಂದರು.

Advertisements
WhatsApp Image 2024 10 27 at 2.54.37 PM
ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಜನಪರ ಸಂಘಟನೆಗಳ ಮುಖಂಡರು, ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ʼನಾನು ರಾಯಚೂರು ಜಿಲ್ಲಾಧಿಕಾರಿ ಹುದ್ದೆಯಿಂದ ಬೇರೆಡೆಗೆ ವರ್ಗಾವಣೆಗೊಂಡಾಗ ಬಹಳ ಜನ ನನ್ನ ಮೇಲೆ ಸಿಟ್ಟಾಗಿದ್ದರು. ನೀವು ಏಕಾಏಕಿ ಯಾಕೆ ವರ್ಗಾವಣೆಯಾಗಿದ್ದೀರಾ ಎಂದು ಮುನಿಸಿಕೊಂಡಿದ್ದರು. ಅದೇ ರೀತಿ ನಾನು ಡಿಸಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಕೆಲವರು ʼನೀವು ರಾಜಿನಾಮೆ ಕೊಟ್ಟು ತಪ್ಪು ಮಾಡಿದ್ದೀರಿʼ ಎಂದು ನನ್ನ ಜೊತೆ ಮಾತಾಡುವುದೇ ಬಿಟ್ಟಿದ್ದರು. ಅದಾದ ಐದು ವರ್ಷಗಳ ಬಳಿಕ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದ ಬಳಿಕ ಅವರೇ ʼನೀವು ರಾಜಕೀಯಕ್ಕೆ ಹೋಗಿರುವುದು ಸೂಕ್ತ, ಇಂದಿನ ರಾಜಕಾರಣಕ್ಕೆ ನಿಮ್ಮ ಅವಶ್ಯಕತೆ ಇತ್ತುʼ ಎಂದು ಖುಷಿಯಿಂದ ಒಪ್ಪಿಕೊಂಡಿದ್ದಾರೆʼ ಎಂದು ಹೇಳಿದರು.

ʼಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಚರ್ಚಿಸಲು, ಜನರ ಸಮಸ್ಯೆ, ಪ್ರಶ್ನೆ ಹಾಗೂ ಜನರ ವಿಭಿನ್ನ ಆಲೋಚನೆಗಳನ್ನು ಅರ್ಥೈಸಿಕೊಳ್ಳಲು ಸಂವಾದ ತುಂಬಾ ಉಪಯುಕ್ತವಾಗಿದೆ. ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದ ಉತ್ತಮ ವೇದಿಕೆಯಾಗಿದೆ. ಸಂವಾದ ನಮ್ಮ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ಇತ್ತು. ಅದನ್ನು ನಾವು ಮತ್ತೆ ಮುನ್ನೆಲೆಗೆ ತರಬೇಕಿದೆ. ಇಂತಹ ವಿಶೇಷ ಸಂವಾದ ಕಾರ್ಯಕ್ರಮ ಆಯೋಜಿಸಿರುವ ʼಈದಿನ.ಕಾಮ್‌ʼ ಮಾಧ್ಯಮ ಸಂಸ್ಥೆಗೆ ಧನ್ಯವಾದʼ ಎಂದು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಸಂಸದ ಸಸಿಕಾಂತ್‌ ಸೆಂಥಿಲ್‌ ಮಾತನಾಡಿದರು.

ʼನನ್ನ ಪೂರ್ವಜರಿಗೆ ಸಮಾಜದಲ್ಲಿ ಮರ್ಯಾದೆ ಇರಲಿಲ್ಲ. ದಲಿತ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಅವರು ಅಸ್ಪೃಶ್ಯತೆ ಬಹಳ ಅನುಭವಿಸಿದರು. ಆದರೆ, ನನ್ನ ತಂದೆ ಹುಟ್ಟಿದ ವೇಳೆಗೆ ಡಾ.ಬಿ.ಆರ್. ಅಂಬೇಡ್ಕರ್‌ ಅವರು ʼಸಂವಿಧಾನʼ ಬಂದಿತ್ತು. ಹೀಗಾಗಿ ನನ್ನ ತಂದೆ ಅಸ್ಪೃಶ್ಯತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.‌ ಮುಂದೆ ನಾನು ಅದರಿಂದ ತಪ್ಪಿಸಿಕೊಳ್ಳುವಂತೆ ಮಾಡಿದರುʼ ಎಂದರು.

ʼಒಂದು ಪಕ್ಷದಲ್ಲಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ರಾಜಕೀಯದ ಒಂದು ವಿಧಾನ ಅಷ್ಟೇ. ಆದರೆ, ಜನರ ಸಮಸ್ಯೆಗಳೊಂದಿಗೆ ನಿಲ್ಲುವುದು ರಾಜಕೀಯ ಎಂಬುದು ನನ್ನ ಅಭಿಪ್ರಾಯ. ನಾವು ಆಡಳಿತ ಸರ್ಕಾರದ ವಿರುದ್ಧ ಪ್ರಶ್ನಿಸಲು ಶುರು ಮಾಡಿದ್ದೇವೆ ಎಂದರೆ ನಾವೆಲ್ಲರೂ ರಾಜಕೀಯ ವ್ಯಕ್ತಿಗಳೇ ಆಗಿದ್ದೇವೆʼ ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ

ʼನಮನ್ನು ಯಾವ ರಾಜಕೀಯ ಸೃಷ್ಟಿ ಮಾಡಿದೆ, ಆ ರಾಜಕೀಯಕ್ಕೆ ಅಪಾಯ ಬಂದಾಗ ನಾವು ಅದರೊಂದಿಗೆ ಹೋಗಲೇಬೇಕು. ಅಪಾಯ ಸ್ಥಿತಿಯಲ್ಲಿರುವ ರಾಜಕೀಯ ವ್ಯವಸ್ಥೆಯನ್ನು ಉಳಿಸಿ ಬೆಳೆಸಲು ನಾವು ಅದರಲ್ಲಿ ಹೋಗಲೇಬೇಕಾಗಿದೆʼ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X